PF- Aadhaar Seeding: ಸೆಪ್ಟೆಂಬರ್​ 1ರಿಂದ ಪಿಎಫ್​- ಆಧಾರ್ ಜೋಡಣೆ ಕಡ್ಡಾಯ; ಆನ್​ಲೈನ್ ಪ್ರಕ್ರಿಯೆ ಹೇಗೆ?

ಆಧಾರ್ ಜತೆಗೆ ಪಿಎಫ್​ ಯುಎಎನ್​ ಜತೆಗೆ ಜೋಡಣೆ ಮಾಡುವುದು ಸೆಪ್ಟೆಂಬರ್ 1ರಿಂದ ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಮಾಡದಿದ್ದರೆ ಏನಾಗುತ್ತದೆ ಎಂಬ ವಿವರ ಇಲ್ಲಿದೆ.

PF- Aadhaar Seeding: ಸೆಪ್ಟೆಂಬರ್​ 1ರಿಂದ ಪಿಎಫ್​- ಆಧಾರ್ ಜೋಡಣೆ ಕಡ್ಡಾಯ; ಆನ್​ಲೈನ್ ಪ್ರಕ್ರಿಯೆ ಹೇಗೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Aug 28, 2021 | 12:46 PM

ಪ್ರಾವಿಡೆಂಟ್ ಫಂಡ್ (PF) ನಿಯಮ ಸೆಪ್ಟೆಂಬರ್​ 1, 2021ರಿಂದ ಬದಲಾವಣೆ ಆಗಲಿದೆ. ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟ (ಇಪಿಎಫ್​ಒ)ದ ಪ್ರಕಾರ, ಆಗಸ್ಟ್ 31, 2021ರೊಳಗೆ ಕಾರ್ಮಿಕರ ಭವಿಷ್ಯ ನಿಧಿ ಖಾತೆದಾರರು ತಮ್ಮ ಆಧಾರ್​ ಸಂಖ್ಯೆಯನ್ನು ಪ್ರಾವಿಡೆಂಟ್ ಫಂಡ್​ಗೆ ಜೋಡಣೆ ಮಾಡಬೇಕು. ಈ ದಿನಾಂಕದೊಳಗೆ ಇಪಿಎಫ್​ ಅನ್ನು ಆಧಾರ್​ ಜತೆ ಜೋಡಣೆ ಮಾಡದಿದ್ದಲ್ಲಿ ಉದ್ಯೋಗದಾತರು ಸಿಬ್ಬಂದಿಯ ಪಿಎಫ್​ಗೆ ನೀಡುವ ಕೊಡುಗೆ ನಿಲ್ಲುತ್ತದೆ. ಎಲ್ಲ ಸಿಬ್ಬಂದಿಯೂ ಯುಎಎನ್​ (ಯೂನಿವರ್ಸಲ್ ಅಕೌಂಟ್ ನಂಬರ್) ಪಡೆಯುವಂತೆ ಇಪಿಎಫ್​ಒದಿಂದ ಸೂಚನೆ ನೀಡಲಾಗಿದೆ. ಜತೆಗೆ ಆಧಾರ್​ ಜತೆ ದೃಢೀಕರಿಸುವಂತೆ ತಿಳಿಸಲಾಗಿದೆ. ಈ ಹಿಂದೆ, ಇಪಿಎಫ್​- ಆಧಾರ್ ಜೋಡಣೆ ಅಂತಿಮ ದಿನಾಂಕ ಮೇ 30, 2021 ಇತ್ತು. ಆದರೆ ಆ ನಂತರದಲ್ಲಿ ಇಪಿಎಫ್​ಒದಿಂದ ಗಡುವನ್ನು ಆಗಸ್ಟ್ 31, 2021ಕ್ಕೆ ವಿಸ್ತರಿಸಲಾಯಿತು.

ಇಪಿಎಫ್​ಒದಿಂದ ಪಿಎಫ್​ ಖಾತೆಯಲ್ಲಿನ ನಿಯಮ ಬದಲಾವಣೆ ಬಗ್ಗೆ ಉದ್ಯೋಗದಾತರಿಗೆ ಸಂದೇಶ ಕಳುಹಿಸಲಾಗಿದೆ. “ಪ್ರಿಯ ಉದ್ಯೋಗದಾತರೇ, ಸಾಮಾಜಿಕ ಭದ್ರತೆ ನೀತಿ ಸಂಹಿತೆ, 2020ರ ಸೆಕ್ಷನ್ 142 ಜಾರಿಯಾದ ಮೇಲೆ ಯುಎಎನ್​ ಜತೆಗೆ ಆಧಾರ್ ಸಂಖ್ಯೆ ಜೋಡಣೆಯಾದ ಹಾಗೂ ದೃಢೀಕೃತವಾದಂಥ ಖಾತೆದಾರರ ಇಸಿಆರ್​ ಮಾತ್ರ ಫೈಲ್ ಮಾಡುವುದಕ್ಕೆ ಸಾಧ್ಯ,” ಎನ್ನಲಾಗಿದೆ. “ಅದರ ಪ್ರಕಾರ, ಸೇವೆಯಲ್ಲಿ ಯಾವುದೇ ವ್ಯತ್ಯಯ ಆಗಬಾರದು ಮತ್ತು ಏನೂ ಸಮಸ್ಯೆ ಆಗಬಾರದು ಎಂದಾದಲ್ಲಿ ಕೊಡುಗೆ ನೀಡುವ ಎಲ್ಲ ಸದಸ್ಯರ ಆಧಾರ್ ಜೋಡಣೆಯನ್ನು ಖಾತ್ರಿಪಡಿಸಿಕೊಳ್ಳಬೇಕು,” ಎಂದು ತಿಳಿಸಲಾಗಿದೆ.

ಇಪಿಎಫ್- ಆಧಾರ್ ಜೋಡಣೆ ಆನ್​ಲೈನ್​ನಲ್ಲಿ ಮಾಡುವುದು ಹೇಗೆ? 1. ಇಪಿಎಫ್​ಒ ಲಿಂಕ್ — iwu.epfindia.gov.in/eKYC/; ಇದಕ್ಕೆ ಲಾಗಿನ್ ಆಗಬೇಕು. 2. ನಿಮ್ಮ UAN ಮತ್ತು ಆಧಾರ್- ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಬೇಕು; 3. ‘Generate OTP’ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು; 4. OTP ಭರ್ತಿ ಮಾಡಿ ಹಾಗೂ ಲಿಂಗ ಎಂಬುದನ್ನು ಆಯ್ಕೆ ಮಾಡಬೇಕು; 5. ಆಧಾರ್ ಸಂಖ್ಯೆಯನ್ನು ನಮೂದಿಸಿ ಹಾಗೂ ‘ಆಧಾರ್ ದೃಢೀಕರಣ’ ವಿಧಾನವನ್ನು ಆರಿಸಿ; 6. ‘ಮೊಬೈಲ್ ಅಥವಾ E-mail ಆಧಾರಿತ ದೃಢೀಕರಣ’ ಆಯ್ಕೆಯಲ್ಲಿ ಯಾವುದು ಎಂಬುದನ್ನು ಆರಿಸಿಕೊಳ್ಳಿ; 7. ಮತ್ತೊಂದು OTP ನಿಮ್ಮ ಮೊಬೈಲ್ ಸಂಖ್ಯೆಗೆ ಬರುತ್ತದೆ; 8. ಎರಡನೇ OTP ನಮೂದಿಸಿ; ಮತ್ತು 9. ನಿಮ್ಮ EPF, UAN ಆಧಾರ್ ಜೋಡಣೆ ಪೂರ್ತಿಗೊಳಿಸಿ.

ಇದನ್ನೂ ಓದಿ: How To Activate PPF: ನಿಷ್ಕ್ರಿಯ ಪಿಪಿಎಫ್​ ಖಾತೆಯನ್ನು ಸಕ್ರಿಯಗೊಳಿಸುವುದು ಹೇಗೆ?

(Mandatory To Link Aadhaar With PF UAN From September 1st)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ