Income Tax: ಲೆಕ್ಕಕ್ಕೆ ನೀಡದ 175 ಕೋಟಿ ರೂಪಾಯಿ ಪತ್ತೆ ಹಚ್ಚಿದ ಆದಾಯ ತೆರಿಗೆ ಇಲಾಖೆ

ಆದಾಯ ತೆರಿಗೆ ಇಲಾಖೆಯಿಂದ ಲೆಕ್ಕಕ್ಕೆ ನೀಡದ 175 ಕೋಟಿ ರೂಪಾಯಿ ಮೊತ್ತವನ್ನು ಪತ್ತೆ ಮಾಡಲಾಗಿದೆ. ಆ ಬಗೆಗಿನ ವಿವರ ಇಲ್ಲಿದೆ.

Income Tax: ಲೆಕ್ಕಕ್ಕೆ ನೀಡದ 175 ಕೋಟಿ ರೂಪಾಯಿ ಪತ್ತೆ ಹಚ್ಚಿದ ಆದಾಯ ತೆರಿಗೆ ಇಲಾಖೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Aug 28, 2021 | 7:08 PM

ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಧಿಕಾರಿಗಳು ಮತ್ತು ವಾಹನ ಸಂಚಾರ ಡೇಟಾಗಳ ಸಹಾಯದಿಂದ ಲೆಕ್ಕಕ್ಕೆ ನೀಡದ ಆದಾಯವಾದ 175.5 ಕೋಟಿ ರೂಪಾಯಿಯ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆ ಶನಿವಾರ ಭೇದಿಸಿದೆ. ಪುಣೆ, ನಾಸಿಕ್ ಅಹ್ಮದ್ ನಗರ ಮತ್ತು ಗೋವಾದಲ್ಲಿ ಉಕ್ಕಿನ ತಯಾರಕರು ಮತ್ತು ವ್ಯಾಪಾರಿಗಳದೂ ಒಳಗೊಂಡಂತೆ ನಲವತ್ನಾಲ್ಕಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ನಂತರ ಲೆಕ್ಕಕ್ಕೆ ನೀಡದ ಆದಾಯವನ್ನು ಪತ್ತೆ ಹಚ್ಚಲಾಗಿದೆ. ಬುಧವಾರ ನಡೆಸಿದ ಶೋಧದ ಸಮಯದಲ್ಲಿ ದೊರೆತ ಪುರಾವೆಗಳ ಪ್ರಕಾರ, ಸ್ಕ್ರ್ಯಾಪ್ ಮತ್ತು ಸ್ಪಾಂಜ್ ಕಬ್ಬಿಣದ ನಕಲಿ ಖರೀದಿಗಳ ಬುಕಿಂಗ್ ಮಾಡುವಲ್ಲಿ ನಿರತವಾಗಿರುವುದಾಗಿ ‘ನಕಲಿ ಇನ್​ವಾಯ್ಸ್ ವಿತರಕರಿಂದ’ ತೋರಿಸಲಾಗಿದೆ. ಯಾವುದೇ ಸಾಮಗ್ರಿಗಳಿಲ್ಲದೆ ಬಿಲ್‌ಗಳನ್ನು ಪೂರೈಸಿದ್ದನ್ನು ಇನ್​ವಾಯ್ಸ್ ವಿತರಣೆ ಮಾಡುವವರು ತಾವಾಗಿಯೇ ಒಪ್ಪಿಕೊಂಡಿದ್ದಾರೆ. ನಕಲಿ ಇ-ವೇ ಬಿಲ್‌ಗಳನ್ನು ಸಹ ಸೃಷ್ಟಿಸಿದ್ದಾರೆ ಹಾಗೂ ಅದನ್ನು ಸಹಜ ವಹಿವಾಟು ಎಂದು ತೋರಿಸಲು ಮತ್ತು ಜಿಎಸ್‌ಟಿ ಇನ್​ಪುಟ್ ಕ್ರೆಡಿಟ್ ಪಡೆಯಲು ನೀಡಿದ್ದಾರೆ ಎಂದು ಇಲಾಖೆಯಿಂದ ತಿಳಿಸಲಾಗಿದೆ.

“ಜಿಎಸ್‌ಟಿ ಪ್ರಾಧಿಕಾರಗಳ ಬೆಂಬಲದೊಂದಿಗೆ, “ವಾಹನ ಸಂಚಾರ ಟ್ರ್ಯಾಕಿಂಗ್ ಆ್ಯಪ್” ಅನ್ನು ನಕಲಿ ಇ-ವೇ ಬಿಲ್‌ಗಳನ್ನು ಗುರುತಿಸಲು ಬಳಸಲಾಯಿತು. ಈ ಪಾರ್ಟಿಗಳಿಂದ ಗುರುತಿಸಲಾದ ಒಟ್ಟು ಬೋಗಸ್ ಖರೀದಿ ಮೊತ್ತ ಸುಮಾರು ರೂ. 160 ಕೋಟಿಯಾಗಿದೆ,” ಎಂದು ಇಲಾಖೆ ಹೇಳಿದೆ. ನಕಲಿ ಖರೀದಿಗಳ ಪ್ರಮಾಣವು ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕೂಡ ಹೇಳಲಾಗಿದೆ. ಲೆಕ್ಕಕ್ಕೆ ನೀಡದಂಥ ರಿಯಲ್ ಎಸ್ಟೇಟ್ ಹೂಡಿಕೆಗಳು, ನಗದು ಮತ್ತು ಆಭರಣಗಳನ್ನು ಸಹ ಐ.ಟಿ. ಇಲಾಖೆಯಿಂದ ಕಂಡುಹಿಡಿಯಲಾಗಿದೆ. ಶೋಧ ಇನ್ನೂ ನಡೆಯುತ್ತಿದೆ. ಜಿಎಸ್‌ಟಿ, ಸೀಮಾಸುಂಕ ಮತ್ತು ಆದಾಯ ತೆರಿಗೆಯನ್ನು ನಿರ್ವಹಿಸುತ್ತಿರುವ ಅಧಿಕಾರಿಗಳು ಈಗ ಡೇಟಾವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಬಹಿರಂಗ ಮಾಡಿದ ವಹಿವಾಟುಗಳಲ್ಲಿನ ವ್ಯತ್ಯಾಸವನ್ನು ಪತ್ತೆ ಮಾಡುವುದಕ್ಕೆ ಇದರಿಂದ ನೆರವಾಗುತ್ತದೆ. ಮತ್ತು ವಂಚನೆಯ ಶಂಕಿತ ಪ್ರಕರಣಗಳ ಕುರಿತು ಇನ್ನೂ ಹೆಚ್ಚಿನ ತನಿಖೆ ನಡೆಸುವುದಕ್ಕೆ ಸಹಾಯ ಆಗುತ್ತದೆ.

ವಾಣಿಜ್ಯ ವಾಹನಗಳು ಟೋಲ್ ಪ್ಲಾಜಾಗಳ ಮೂಲಕ ಸಾಗಲು ಬಳಸುವ ರೇಡಿಯೋ ಫ್ರೀಕ್ವೆನ್ಸಿ ಟ್ಯಾಗ್‌ಗಳೊಂದಿಗೆ ಸರಕು ಸಾಗಾಣಿಕೆಗೆ (ಇ-ವೇ ಬಿಲ್‌ಗಳು) ನೀಡಲಾದ ಎಲೆಕ್ಟ್ರಾನಿಕ್ ಪರ್ಮಿಟ್​ಗಳನ್ನು ಪರಿಶೀಲಿಸುವ ಮೂಲಕ ಜಿಎಸ್‌ಟಿ ಅಧಿಕಾರಿಗಳು ತೆರಿಗೆ ವಂಚನೆಯ ಪ್ರಕರಣಗಳನ್ನು ಪತ್ತೆ ಹಚ್ಚಲು ಆರಂಭಿಸಿದ್ದಾರೆ ಎಂದು ಮಾಧ್ಯಮವೊಂದರಲ್ಲಿ ಜುಲೈ ತಿಂಗಳಲ್ಲಿ ವರದಿ ಆಗಿತ್ತು. ಜಿಎಸ್‌ಟಿ ನೋಂದಾಯಿತ ವ್ಯಕ್ತಿಗಳು 50,000 ರೂಪಾಯಿಗಿಂತ ಹೆಚ್ಚು ಮೌಲ್ಯದ ಸರಕುಗಳನ್ನು ರಾಜ್ಯದ ಒಳಗೆ ಅಥವಾ ವಿವಿಧ ರಾಜ್ಯಗಳಿಗೆ ಸಾಗಿಸಲು ಇ-ವೇ ಬಿಲ್‌ಗಳು ಅತ್ಯಗತ್ಯವಾಗಿದೆ.

ಇದನ್ನೂ ಓದಿ: ಸೆ.15ರ ಒಳಗೆ ತೆರಿಗೆ ಪೋರ್ಟಲ್ ಸರಿಪಡಿಸಿ: ಇನ್​ಫೊಸಿಸ್​ಗೆ ಕೇಂದ್ರ ಸರ್ಕಾರ ತಾಕೀತು

(Tax Department Detects Rs 175 Crore Worth Of Unaccounted Amount Here Is The Details)

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ