LIC Aadhar Shila Plan: ಎಲ್ಐಸಿ ಆಧಾರ್ ಶಿಲಾ ಯೋಜನೆಗೆ ದಿನಕ್ಕೆ ರೂ. 29ರಂತೆ ಉಳಿಸಿ, 4 ಲಕ್ಷ ರೂ. ಪಡೆಯಿರಿ
8ರಿಂದ 55 ವರ್ಷದ ಹೆಣ್ಣುಮಕ್ಕಳು/ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು, ಎಲ್ಐಸಿಯಿಂದ ಆಧಾರ್ ಶಿಲಾ ಎಂಬ ಸ್ಕೀಮ್ ತರಲಾಗಿದೆ. ಮಹಿಳೆಯರಿಗಾಗಿ ಇರುವ ಈ ಯೋಜನೆ ಬಗ್ಗೆ ವಿವರಗಳು ಇಲ್ಲಿವೆ.
ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ (LIC) ಭಾರತೀಯರಿಗಾಗಿ ಆಕರ್ಷಕ ಹೂಡಿಕೆ ಯೋಜನೆಗಳನ್ನು ನೀಡಲಾಗುತ್ತಿದೆ. ಇವುಗಳಿಗೆ ಉತ್ತಮವಾದ ರಿಟರ್ನ್ಸ್ ಕೂಡ ಇದ್ದು, ಹೂಡಿಕೆ ಮಾಡಿದ ಮೊತ್ತದ ಬಗ್ಗೆ ಸುರಕ್ಷತೆ ಬಗ್ಗೆ ಕೂಡ ಚಿಂತೆ ಮಾಡುವ ಅಗತ್ಯ ಇಲ್ಲ. ಈ ಪೈಕಿ ಹೆಣ್ಣುಮಕ್ಕಳನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ರೂಪಿಸಿರುವಂಥ ಸ್ಕೀಮ್ ಇದ್ದು, ಅವರ ಸ್ವಾವಲಂಬನೆಗಾಗಿ ಇದು ನೆರವಿಗೆ ಬರಲಿದೆ. 8ರಿಂದ 55 ವರ್ಷದ ಹೆಣ್ಣುಮಕ್ಕಳು/ಮಹಿಳೆಯರು ಈ ಯೋಜನೆಯಲ್ಲಿ ಹಣ ತೊಡಗಿಸಬಹುದು. ಈ ಯೋಜನೆಯ ಹೆಸರು ಆಧಾರ್ ಶಿಲಾ (Aadhar Shila). ದಿನಕ್ಕೆ ರೂ. 29ರಷ್ಟು ಕನಿಷ್ಠ ಮೊತ್ತದ ಹೂಡಿಕೆಯಿಂದ ಶುರು ಮಾಡಬಹುದು. ಆ ಮೊತ್ತದಿಂದ ಶುರು ಮಾಡಿದರೂ ಪಕ್ವತೆಯ (ಮೆಚ್ಯೂರಿಟಿ) ಹೊತ್ತಿಗೆ ರೂ. 4 ಲಕ್ಷ ರೂಪಾಯಿಯಷ್ಟು ಪಡೆಯಬಹುದು. ಇದರ ಹೊರತಾಗಿ ಹೂಡಿಕೆ ಮೇಲೆ ಅಶ್ಯೂರ್ಡ್ ರಿಟರ್ನ್ಸ್ ದೊರೆಯುತ್ತದೆ. ಈ ಯೋಜನೆಯಲ್ಲಿ ಎಲ್ಐಸಿಯಿಂದ ಪ್ರೊಟೆಕ್ಷನ್ ಕವರೇಜ್ ಸಹ ಸಿಗುತ್ತದೆ.
ಒಂದು ವೇಳೆ ಹೂಡಿಕೆದಾರರು ಮೆಚ್ಯೂರಿಟಿ ಅವಧಿಗಿಂತ ಮುಂಚಿತವಾಗಿ ಸಾವನ್ನಪ್ಪಿದಲ್ಲಿ ಕುಟುಂಬದವರಿಗೆ ಹಣದ ನೆರವು ದೊರೆಯುತ್ತದೆ. ಎಲ್ಐಸಿಯ ಆಧಾರ್ ಶಿಲಾ ಯೋಜನೆಯಲ್ಲಿ ಕನಿಷ್ಠ ಸಮ್ ಅಶ್ಯೂರ್ಡ್ ರೂ. 75,000. ಗರಿಷ್ಠ ಮೊತ್ತ 3,00,000. ಮಹಿಳಾ ಹೂಡಿಕೆದಾರರು ಇದರಲ್ಲಿ ಕನಿಷ್ಠ 10 ವರ್ಷದ ಅವಧಿಗೆ ಹಾಗೂ ಗರಿಷ್ಠ 20 ವರ್ಷದ ಅವಧಿಗೆ ಸ್ಕೀಮ್ ಇದೆ. ಆಧಾರ್ ಶಿಲಾ ಯೋಜನೆಯಲ್ಲಿ ಖಾತೆ ತೆರೆಯುವುದಕ್ಕೆ ಆಧಾರ್ ಕಾರ್ಡ್ ಬೇಕು. ಇದು ಗ್ಯಾರಂಟೀಡ್ ರಿಟರ್ನ್ ಎಂಡೋಮೆಂಟ್ ಪ್ಲಾನ್. ಎಲ್ಐಸಿ ಏಜೆಂಟ್ರನ್ನು ಸಂಪರ್ಕಿಸಬಹುದು ಅಥವಾ ಹತ್ತಿರದ ಶಾಖೆಗೆ ಭೇಟಿ ನೀಡಿ, ಹೂಡಿಕೆ ಮಾಡಬಹುದು.
ಮೆಚ್ಯೂರಿಟಿ ಮೊತ್ತ ರೂ. 4 ಲಕ್ಷ ಮೊತ್ತ ಪಡೆಯುವುದು ಹೇಗೆ? 4 ಲಕ್ಷ ರೂಪಾಯಿ ಮೊತ್ತದಷ್ಟು ಬರುವುದಕ್ಕೆ ಮಹಿಳಾ ಹೂಡಿಕೆದಾರರು ವರ್ಷಕ್ಕೆ ರೂ. 10,599 ಜತೆಗೆ ಶೇ 4.5 ತೆರಿಗೆ 20 ವರ್ಷಗಳಿಗೆ ಕಟ್ಟಬೇಕು. ಈ ಮೊತ್ತವನ್ನು ದಿನದ ಲೆಕ್ಕಕ್ಕೆ 29 ರೂಪಾಯಿ ಉಳಿಸಿ, ಮೊತ್ತವನ್ನು ಕಟ್ಟಿದರೆ ಆಯಿತು. ಮುಂದಿನ 20 ವರ್ಷದಲ್ಲಿ 2,14,696 ರೂಪಾಯಿಯನ್ನು ಎಲ್ಐಸಿಗೆ ಕಟ್ಟಿದಂತಾಗುತ್ತದೆ. ಹೂಡಿಕೆ ಮಾಡಿದ ಮೊತ್ತದ ಮೇಲೆ ಹೇಳುವುದಾದರೆ ಒಟ್ಟು 4 ಲಕ್ಷ ರೂಪಾಯಿ ಕೈಗೆ ಬರುತ್ತದೆ. ಹೂಡಿಕೆದಾರರು ತಮ್ಮ ಪ್ರೀಮಿಯಂ ಅನ್ನು ತಿಂಗಳು, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕವಾಗಿ ಕಟ್ಟಬಹುದು.
ಇದನ್ನೂ ಓದಿ: LIC Jeevan Labh policy : ಎಲ್ಐಸಿ ಜೀವನ್ ಲಾಭ್ ಪಾಲಿಸಿ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳಿವು
ಇದನ್ನೂ ಓದಿ: LIC Saral pension plan: ಭಾರತೀಯ ಜೀವ ವಿಮಾ ನಿಗಮದಿಂದ ಸರಳ್ ಪೆನ್ಷನ್ ಪ್ಲಾನ್ ಪರಿಚಯ
(LIC Aadhar Shila plan premium, tenure, sum assured and other details here)
Published On - 2:17 pm, Tue, 13 July 21