Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC Jeevan Labh policy : ಎಲ್​ಐಸಿ ಜೀವನ್​ ಲಾಭ್​ ಪಾಲಿಸಿ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳಿವು

ಎಲ್​ಐಸಿ ಪಾಲಿಸಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಹ ಬುದ್ಧಿವಂತಿಕೆ ಹಾಗೂ ಸಮಯೋಚಿತ ನಿರ್ಧಾರ. ಅಂತದ್ದೊಂದು ಆಯ್ಕೆಗೆ ನಿಮ್ಮೆದುರು ಇದೆ ಎಲ್​ಐಸಿಯ ಜೀವನ್ ಲಾಭ್. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

LIC Jeevan Labh policy : ಎಲ್​ಐಸಿ ಜೀವನ್​ ಲಾಭ್​ ಪಾಲಿಸಿ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳಿವು
ಎಲ್​ಐಸಿ (ಪ್ರಾತಿನಿಧಿಕ ಚಿತ್ರ)
Follow us
Srinivas Mata
|

Updated on:May 07, 2021 | 11:51 AM

ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ (ಎಲ್​ಐಸಿ- ಜೀವ ವಿಮಾ ನಿಗಮ) ಬ್ರ್ಯಾಂಡ್​ ವ್ಯಾಲ್ಯೂ ಬಗ್ಗೆ ಹೊಸದಾಗಿ ಹೇಳುವ ಅಗತ್ಯ ಇಲ್ಲ. ಅದೇ ಸಂಸ್ಥೆಯ ಜೀವನ್ ಲಾಭ್ ಪಾಲಿಸಿ ಬಗ್ಗೆ ನಿಮಗೆ ಇಂದು ತಿಳಿಸಲಾಗುತ್ತಿದೆ. ಇದು ಎಂಡೋಮೆಂಟ್ ಪಾಲಿಸಿ. ಅವಧಿ ಪೂರ್ಣವಾದ ಮೇಲೆ ಮೆಚ್ಯೂರಿಟಿ ಮೊತ್ತ ಒಂದೇ ಇಂಡಿಗಂಟು ಪಾಲಿಸಿದಾರರಿಗೆ ಸಿಗುತ್ತದೆ. ಮೆಚ್ಯೂರಿಟಿಗೂ ಮುಂಚೆಯೇ ಒಂದು ವೇಳೆ ಪಾಲಿಸಿದಾರರು ಸಾವನ್ನಪ್ಪಿದರೆ ಕುಟುಂಬಕ್ಕೆ ಹಣಕಾಸಿನ ಬೆಂಬಲ ದೊರೆಯುತ್ತದೆ ಎಂದು ಎಲ್​ಐಸಿ ತಿಳಿಸಿದೆ. ಅಂದ ಹಾಗೆ ಎಲ್​ಐಸಿಯಿಂದ ನಾನಾ ಬಗೆಯ ವಿಮೆಗಳನ್ನು ಒದಗಿಸಲಾಗುತ್ತದೆ. ಟರ್ಮ್ ಇನ್ಷೂರೆನ್ಸ್, ಮನಿಬ್ಯಾಕ್, ಪೆನ್ಷನ್ ಪ್ಲಾನ್, ಹೆಲ್ತ್ ಇನ್ಷೂರೆನ್ಸ್ ಹೀಗೆ.

ಎಂಡೋಮೆಂಟ್ ಇನ್ಷೂರೆನ್ಸ್ ಪ್ಲಾನ್​ಗಳಿವೆಯಲ್ಲಾ, ಅದು ಸುರಕ್ಷತೆ ಮತ್ತು ಉಳಿತಾಯ ಎರಡರ ಕಾಂಬಿನೇಷನ್. ಇದೀಗ ನಿಮಗೆ ತಿಳಿಸುತ್ತಿರುವ ಜೀವನ ಲಾಭ್ ಪಾಲಿಸಿಯು ಎಲ್​ಐಸಿ ಒದಗಿಸುತ್ತಿರುವ ಎಂಡೋಮೆಂಟ್ ಇನ್ಷೂರೆನ್ಸ್ ಪಾಲಿಸಿಗಳಲ್ಲಿ ಒಂದು. ಈಗ ನಿರ್ದಿಷ್ಟವಾಗಿ ಜೀವನ್ ಲಾಭ್ ಇನ್ಷೂರೆನ್ಸ್ ಪಾಲಿಸಿ ಬಗ್ಗೆಯೇ ತಿಳಿದುಕೊಳ್ಳೋಣ.

* ಒಂದು ವೇಳೆ ಪಾಲಿಸಿ ಅವಧಿಯು 16 ವರ್ಷಗಳಾಗಿದ್ದಲ್ಲಿ 8ರಿಂದ 59 ವರ್ಷದವರೆಗೆ ಯಾವುದೇ ವ್ಯಕ್ತಿ ಇದನ್ನು ಖರೀದಿಸಬಹುದು. ಕನಿಷ್ಠ ಸಮ್ ಅಶ್ಯೂರ್ಡ್ 2 ಲಕ್ಷ ರೂಪಾಯಿ. ಇನ್ನು ಗರಿಷ್ಠ ಮೊತ್ತ ಅಂತ ಯಾವುದೇ ಮಿತಿ ನಿಗದಿ ಆಗಿಲ್ಲ.

* ಈ ಪಾಲಿಸಿಯ ಪ್ರೀಮಿಯಂ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿ ಮಾಡಬಹುದು.

* ಎಲ್ಐಸಿಯಿಂದ ಮೂರು ಬೇರೆ ಬೇರೆ ಪಾಲಿಸಿ/ಪ್ರೀಮಿಯಂ ಪಾವತಿ ಅವಧಿಗಳಿವೆ. 16 ವರ್ಷ ಪಾಲಿಸಿ ಅವಧಿಗೆ 10 ವರ್ಷ ಪ್ರೀಮಿಯಂ ಪಾವತಿ, 21 ವರ್ಷ ಪಾಲಿಸಿ ಅವಧಿಗೆ 15 ವರ್ಷ ಪ್ರೀಮಿಯಂ ಪಾವತಿ ಮತ್ತು 25 ವರ್ಷದ ಪಾಲಿಸಿ ಅವಧಿಗೆ 16 ವರ್ಷ ಪ್ರೀಮಿಯಂ ಪಾವತಿ ಅವಕಾಶಗಳಿವೆ.

* ಚಂದಾದಾರರು 21 ವರ್ಷದ ಅವಧಿಗೆ ಪಾಲಿಸಿಯನ್ನು ಆಯ್ಕೆ ಮಾಡಿಕೊಂಡರೆ ಗರಿಷ್ಠ ವಯೋಮಿತಿ 54 ವರ್ಷ. ಇನ್ನು 25 ವರ್ಷಗಳ ಪಾಲಿಸಿ ಅವಧಿಯನ್ನು ಆಯ್ಕೆ ಮಾಡಿಕೊಂಡಲ್ಲಿ ಗರಿಷ್ಠ ವಯಸ್ಸು 50 ವರ್ಷ (ಮೆಚ್ಯೂರಿಟಿ 75ನೇ ವಯಸ್ಸಿಗೆ) ಆಗಿರುತ್ತದೆ ಎಂದು ಎಲ್​ಐಸಿ ತಿಳಿಸಿದೆ.

* ಎಲ್​ಐಸಿ ಜೀವನ್​ ಲಾಭ್ ಪಾಲಿಸಿಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 (C) ಅಡಿಯಲ್ಲಿ ತೆರಿಗೆ ಅನುಕೂಲಗಳು ಸಹ ದೊರೆಯುತ್ತವೆ.

ಇದನ್ನೂ ಓದಿ: LIC Jeevan Saathi: ಗಂಡ- ಹೆಂಡತಿಗೆ ಇನ್ಷೂರೆನ್ಸ್ ಪಾಲಿಸಿ; ದಿನಕ್ಕೆ 120ರಂತೆ ಪಾವತಿಸಿ, 27 ಲಕ್ಷ ಉಳಿಸಿ

ಇದನ್ನೂ ಓದಿ: LIC ಕಾರ್ಯ ನಿರ್ವಹಣೆ ಮೇ 10ನೇ ತಾರೀಕಿನಿಂದ ವಾರದಲ್ಲಿ 5 ದಿನ ಮಾತ್ರ

(LIC’s endowment policy Jeevan Labh. Here is the must know information about this policy in Kannada)

Published On - 11:13 am, Fri, 7 May 21

ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ಮತ್ತೆ ಪೊಲೀಸರ ಬಂಧನದಲ್ಲಿ ರಜತ್, ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವಿಡಿಯೋ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ದಾವಣೆಗೆರೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದವರನ್ನು ಬಿಡಲ್ಲ: ಸಿದ್ದರಾಮಯ್ಯ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ
ಲಿಂಗಾಯತ ಸಚಿವರು ಜಾತಿ ಗಣತಿ ಬಗ್ಗೆ ಸಮುದಾಯದವರೊಂದಿಗೆ ಚರ್ಚಿಸಿಲ್ಲ: ಶಾಸಕ
ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ