AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC ಕಾರ್ಯ ನಿರ್ವಹಣೆ ಮೇ 10ನೇ ತಾರೀಕಿನಿಂದ ವಾರದಲ್ಲಿ 5 ದಿನ ಮಾತ್ರ

LICಗೆ ಮೇ 10ನೇ ತಾರೀಕಿನಿಂದ ಅನ್ವಯ ಆಗುವಂತೆ ವಾರದಲ್ಲಿ 5 ದಿನ ಮಾತ್ರ ಕಾರ್ಯ ನಿರ್ವಹಣೆಯನ್ನು ಘೋಷಣೆ ಮಾಡಲಾಗಿದೆ.

LIC ಕಾರ್ಯ ನಿರ್ವಹಣೆ ಮೇ 10ನೇ ತಾರೀಕಿನಿಂದ ವಾರದಲ್ಲಿ 5 ದಿನ ಮಾತ್ರ
ಸಾಂದರ್ಭಿಕ ಚಿತ್ರ
Srinivas Mata
|

Updated on: May 06, 2021 | 8:21 PM

Share

ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮವು (LIC) ಮೇ 10ನೇ ತಾರೀಕಿನಿಂದ ಅನ್ವಯ ಆಗುವಂತೆ ವಾರದಲ್ಲಿ 5 ದಿನ ಮಾತ್ರ ಕಾರ್ಯ ನಿರ್ವಹಿಸುವುದಾಗಿ ಘೋಷಣೆಯನ್ನು ಮಾಡಿದೆ. ಶನಿವಾರದಂದು ರಜಾ ದಿನ ಎನ್ನಲಾಗಿದೆ. ಏಪ್ರಿಲ್ 15, 2021ರಂದು ಈ ಬಗ್ಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅದರಲ್ಲಿ ತಿಳಿಸಿರುವಂತೆ, ಪ್ರತಿ ಶನಿವಾರವನ್ನು ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಸಾರ್ವಜನಿಕ ರಜಾ ದಿನ ಎಂದು ಘೋಷಿಸಲಾಗಿದೆ.

ಇನ್ನುಳಿದಂತೆ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಎಲ್ಲ ಕಚೇರಿಗಳು ಸೋಮವಾರದಿಂದ ಶುಕ್ರವಾರದ ತನಕ ಕಾರ್ಯ ನಿರ್ವಹಿಸಲಿವೆ. ಮೇ 10, 2021ರಿಂದ ಅನ್ವಯ ಆಗುವಂತೆ ಸೋಮವಾರದಿಂದ ಶುಕ್ರವಾರದ ತನಕ ಕಚೇರಿ ಕಾರ್ಯ ನಿರ್ವಹಣೆ ಅವಧಿಯು ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರ ತನಕ ಇರುತ್ತದೆ ಎಂದು ಸೇರಿಸಲಾಗಿದೆ.

ಭಾರತದಲ್ಲಿ ಕೋವಿಡ್ 19 ಎರಡನೇ ಅಲೆಯು ತೀವ್ರವಾಗಿದ್ದು, ಹಲವು ಸಂಸ್ಥೆ ಹಾಗೂ ಕಂಪೆನಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಕಚೇರಿಗೆ ಬರುತ್ತಿಲ್ಲ. ಇದರ ಜತೆಗೆ ಹಲವು ಕಡೆಗಳಲ್ಲಿ ಕೊರೊನಾ ಕಾಯಿಲೆ ಹರಡದಂತೆ ತಡೆಯುವುದಕ್ಕೆ ನಿರ್ಬಂಧಗಳನ್ನು ಹಾಕಲಾಗಿದೆ. ನೆನಪಿರಲಿ, ಇದೀಗ ಮೇ 10ನೇ ತಾರೀಕಿನಿಂದ ಈ ನಿಯಮ ಜಾರಿಗೆ ಬರಲಿದೆ. ಗೊತ್ತಿಲದೆ ಹೋಗಿ ಸಮಯ ಹಾಳು ,ಮಾಡಿಕೊಳ್ಳಬೇಡಿ.

ಇದನ್ನೂ ಓದಿ: Bank holidays in May 2021: ಮೇ ತಿಂಗಳಲ್ಲಿ ಬ್ಯಾಂಕ್​ಗಳಿಗೆ 12 ದಿನದ ತನಕ ರಜಾ

(LIC working to have 5 days from May 10. Saturday declared public holiday)