Closing bell: ಸತತ ಎರಡನೇ ದಿನ ಸೆನ್ಸೆಕ್ಸ್ 272 ಪಾಯಿಂಟ್, ನಿಫ್ಟಿ 107 ಪಾಯಿಂಟ್ ಏರಿಕೆ
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಭರ್ಜರಿ ಏರಿಕೆ ಕಂಡಿವೆ. ಸತತವಾಗಿ ಎರಡನೇ ದಿನ ಕೂಡ ಮಾರ್ಕೆಟ್ ಮೇಲೇರಿದೆ. ನಿಫ್ಟಿಯಲ್ಲಿ ಏರಿಕೆ ಹಾಗೂ ಇಳಿಕೆ ಕಂಡ ಪ್ರಮುಖ ಕಂಪೆನಿ ಷೇರುಗಳು ಇಲ್ಲಿವೆ.
ಭಾರತದ ಷೇರುಪೇಟೆಯಲ್ಲಿನ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಗುರುವಾರದಂದು (ಮೇ 6, 2021) ಸತತ ಎರಡನೇ ದಿನ ಏರಿಕೆ ದಾಖಲಿಸಿವೆ. ಬಿಎಸ್ಇ ಸೆನ್ಸೆಕ್ಸ್ 272 ಪಾಯಿಂಟ್ ಹೆಚ್ಚಳ ಮೇಲೇರಿ 48,949.76 ಪಾಯಿಂಟ್ನೊಂದಿಗೆ ದಿನದ ವಹಿವಾಟನ್ನು ಮುಗಿಸಿದೆ. ಇನ್ನು ನಿಫ್ಟಿ 50 ಸೂಚ್ಯಂಕವು 106.90 ಪಾಯಿಂಟ್ ಹೆಚ್ಚಳವಾಗಿ 14,724.80 ಪಾಯಿಂಟ್ನೊಂದಿಗೆ ವ್ಯವಹಾರವನ್ನು ಚುಕ್ತಾಗೊಳಿಸಿದೆ. ಬಿಎಸ್ಇಯಲ್ಲಿ ಎಲ್ಲ ವಲಯಗಳು ಐ.ಟಿ., ಲೋಹ, ತೈಲ ಮತ್ತು ಅನಿಲ ಹಾಗೂ ವಾಹನ ಸೂಚ್ಯಂಕಗಳು ತಲಾ ಶೇ 1ರಿಂದ 2.7ರಷ್ಟು ಏರಿಕೆ ಕಂಡಿವೆ. ಬಿಎಸ್ಇಯಲ್ಲಿ ವಿಪ್ರೋ, ಮಾರಿಕೋ, ಲುಪಿನ್ ಸೇರಿದಂತೆ 250ಕ್ಕೂ ಹೆಚ್ಚು ಕಂಪೆನಿಗಳ ಷೇರು ವಾರ್ಷಿಕ ಗರಿಷ್ಠ ಮಟ್ಟವನ್ನು ಮುಟ್ಟಿದವು.
ಕೋವಿಡ್-19 ಲಸಿಕೆಯ ಬೌದ್ಧಿಕ ಆಸ್ತಿ ಹಕ್ಕನ್ನು ಮನ್ನಾ ಮಾಡುವುದಕ್ಕೆ ಅಮೆರಿಕ ನಿರ್ಧರಿಸಿರುವುದರಿಂದ ಐ.ಟಿ. ಮತ್ತು ಹಣಕಾಸು ವಲಯದ ಷೇರುಗಳಲ್ಲಿ ಖರೀದಿ ಕಂಡುಬಂದಿದೆ. ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಾಖಲೆಯ ಮಟ್ಟದಲ್ಲಿ ಏರಿಕೆಯಾದರೂ ಜಾಗತಿಕ ಮಟ್ಟದ ಸಕಾರಾತ್ಮಕ ಪ್ರಭಾವವು ದೇಶೀಯ ಮಾರುಕಟ್ಟೆ ಮೇಲೆ ಸಕಾರಾತ್ಮಕವಾದಂಥ ಪ್ರಭಾವವನ್ನೇ ಬೀರಿದೆ.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಹಿಂಡಾಲ್ಕೋ ಶೇ 5.13 ಹೀರೋ ಮೋಟೋಕಾರ್ಪ್ ಶೇ 4.49 ವಿಪ್ರೋ ಶೇ 4.42 ಟಾಟಾ ಮೋಟಾರ್ಸ್ ಶೇ 3.34 ಐಷರ್ ಮೋಟಾರ್ಸ್ ಶೇ 2.99
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್ ಪವರ್ಗ್ರಿಡ್ ಕಾರ್ಪೊರೇಷನ್ ಶೇ -2.80 ಯುಪಿಎಲ್ ಶೇ -1.20 ಎನ್ಟಿಪಿಸಿ ಶೇ -0.85 ಬಜಾಜ್ ಫಿನ್ಸರ್ವ್ ಶೇ -0.78 ಒಎನ್ಜಿಸಿ ಶೇ -0.77
ಇದನ್ನೂ ಓದಿ: ಐಡಿಬಿಐ ಬ್ಯಾಂಕ್ ಷೇರು ಶೇ 14ರಷ್ಟು ಏರಿಕೆ ದಾಖಲೆ; ರೂ. 40ರ ಮೇಲೆ ವಹಿವಾಟು
(Indian stock market index sensex, nifty increased on May 6, 2021. Global cues supported domestic equity market)
Published On - 6:01 pm, Thu, 6 May 21