Gold Rate Today: ಚಿನ್ನ ಕೊಳ್ಳಲು ಶುಕ್ರವಾರ ಶುಭದಿನ; ಇಲ್ಲಿದೆ ವಿವಿಧ ನಗರಗಳ ಚಿನ್ನ ಬೆಳ್ಳಿ ಬೆಲೆ ಮಾಹಿತಿ
Gold Silver Price: ಇಳಿಕೆಯತ್ತ ಸಾಗಿದ್ದ ಚಿನ್ನದ ದರ ನಾಳೆಗೆ ಏರಿಕೆಯಾಗಬಹುದು ಹಾಗೆಯೇ ಇಂದು ಏರಿಕೆ ಕಂಡಿದ್ದ ಚಿನ್ನದ ದರ ನಾಳೆ ಕುಸಿಯಬಹುದು. ಹೀಗಿದ್ದಾಗ ದೈನಂದಿನ ದರ ಬದಲಾವಣೆಯಲ್ಲಿ ಚಿನ್ನದ ದರ ಪರಿಶೀಲಿಸಿದಾಗ ಇಂದು ದರ ಎಷ್ಟಿದೆ ಎಂಬುದನ್ನು ನೋಡೋಣ.
ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ದರ ಏರಿಕೆಯಾಗುವುದು ಮತ್ತು ಇಳಿಕೆಯಾಗುವುದು ಸರ್ವೇ ಸಾಮಾನ್ಯ. ಪ್ರತಿನಿತ್ಯವೂ ಕೂಡಾ ಚಿನ್ನದ ದರವನ್ನು ಪರಿಷ್ಕರಿಸಲಾಗುತ್ತದೆ. ಇಂದು ಇಳಿಕೆಯತ್ತ ಸಾಗಿದ್ದ ಚಿನ್ನದ ದರ ನಾಳೆಗೆ ಏರಿಕೆಯಾಗಬಹುದು ಹಾಗೆಯೇ ಇಂದು ಏರಿಕೆ ಕಂಡಿದ್ದ ಚಿನ್ನದ ದರ ನಾಳೆ ಕುಸಿಯಬಹುದು. ಹೀಗಿದ್ದಾಗ ದೈನಂದಿನ ದರ ಬದಲಾವಣೆಯಲ್ಲಿ ಚಿನ್ನದ ದರ ಪರಿಶೀಲಿಸಿದಾಗ ಇಂದು ದರ ಎಷ್ಟಿದೆ ಎಂಬುದನ್ನು ನೋಡೋಣ.
ಇಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,010 ರೂಪಾಯಿ ಇದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,010 ರೂಪಾಯಿ ಇದೆ. ಬೆಳ್ಳಿ ದರವನ್ನು ಗಮನಿಸಿದಾಗ 1 ಕೆಜಿ ಬೆಳ್ಳಿ ದರ ನಿನ್ನೆ 70,000 ಇದ್ದು, ಇಂದು 1,900 ರೂಪಾಯಿ ಏರಿಕೆಯ ಬಳಿಕ 71,900 ರೂಪಾಯಿ ಆಗಿದೆ. ಇಂದು ಶುಕ್ರವಾರ ಚಿನ್ನ ಕೊಳ್ಳಲು ಒಳ್ಳೆಯ ದಿನ. ಆದರೆ ಕೊರೊನಾದಿಂದಾಗಿ ಲಾಕ್ಡೌನ್ ಜಾರಿಯಲ್ಲಿದ್ದು, ಅಗತ್ಯವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಹೀಗಿದ್ದಾಗ ಚಿನ್ನ ಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.
ಅಕ್ಷಯ ತೃತೀಯ ದಿನದಂದು ಚಿನ್ನ ಕೊಂಡರೆ ವರ್ಷವಿಡೀ ಒಳ್ಳೆಯದಾಗುತ್ತದೆ ಎಂಬುದು ಜನರ ನಂಬಿಕೆ. ಹಾಗಾಗಿ ಅಕ್ಷಯ ತೃತೀಯ ದಿನದಂದು ಅಂಗಡಿಗಳಲ್ಲಿ ಚಿನ್ನದ ಬೇಡಿಕೆ ಹೆಚ್ಚಿರುತ್ತದೆ. ಹಾಗಿದ್ದಾಗ ಚಿನ್ನದ ದರ ಈ ವಾರದಲ್ಲಿ ಎಷ್ಟಿದೆ. ದರ ಏರಿಕೆಯತ್ತ ಸಾಗುತ್ತಿದೆಯೋ? ಅಥವಾ ಇಳಿಕೆಯಲ್ಲಿದೆಯೋ ಎಂಬುದನ್ನು ಪರಿಶೀಲಿಸಲೇ ಬೇಕಲ್ಲವೇ? ಇನ್ನೇನು ಒಂದು ವಾರದೊಳಗೆ ಅಕ್ಷಯ ತೃತೀಯ ಆಚರಣೆ ಎದುರಿಗಿದೆ. ಚಿನ್ನ ಕೊಳ್ಳುವತ್ತ ನೀವೂ ಆಲೋಚಿಸಿದ್ದರೆ ಚಿನ್ನದ ದರ ಮಾರುಕಟ್ಟೆಯಲ್ಲಿ ಎಷ್ಟಿದೆ ಎಂಬುದರ ವಿವರವನ್ನು ತಿಳಿದುಕೊಳ್ಳಿ. ಹಾಗೂ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ ಮಾಹಿತಿ ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 44,500 ರೂಪಾಯಿ ಇತ್ತು. ಇಂದು ಕೊಂಚ ದರ ಏರಿಕೆಯ ನಂತರ 44,510 ರೂಪಾಯಿ ಆಗಿದೆ. ದೆಹಲಿಯಲ್ಲಿ ನಿನ್ನೆ 45,600 ರೂಪಾಯಿ ಇದ್ದ ಚಿನ್ನದ ದರ ಇಂದು 45,610 ರೂಪಾಯಿ ಆಗಿದೆ. ಇನ್ನು, ಹೈದರಾಬಾದ್ನಲ್ಲಿ ನಿನ್ನೆ 44,000 ರೂಪಾಯಿ ಇದ್ದ ಚಿನ್ನದ ದರ ಇಂದು 44,010 ರೂಪಾಯಿ ಆಗಿದೆ. ಕೇರಳದಲ್ಲಿ ನಿನ್ನೆ 44,000 ರೂಪಾಯಿ ಇದ್ದ ಚಿನ್ನದ ದರ ಇಂದು 44,010 ರೂಪಾಯಿ ಆಗಿದೆ. ಇನ್ನು, ವಾಣಿಜ್ಯ ನಗರಿ ಮುಂಬೈನಲ್ಲಿ ಇಂದು ಚಿನ್ನದ ದರ 44,300 ರೂಪಾಯಿ ಆಗಿದೆ.
ವಿವಿಧ ನಗರಗಳಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನ ದರ ಮಾಹಿತಿ ಚೆನ್ನೈನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 48,490 ರೂಪಾಯಿ ಇತ್ತು. ಇಂದು ದರ 48,500 ರೂಪಾಯಿ ಆಗಿದೆ. ದೆಹಲಿಯಲ್ಲಿ 49,740 ರೂಪಾಯಿ ಇದ್ದ ಚಿನ್ನದ ದರ ಇಂದು 49,750 ರೂಪಾಯಿ ಆಗಿದೆ. ಹೈದರಾಬಾದ್ನಲ್ಲಿ 48,000 ರೂಪಾಯಿ ಇದ್ದ ಚಿನ್ನದ ದರ ಇಂದು 48,010 ರೂಪಾಯಿ ಆಗಿದೆ. ಕೇರಳದಲ್ಲಿ ನಿನ್ನೆ 48,000 ರೂಪಾಯಿ ಇದ್ದ ಚಿನ್ನದ ದರ ಇಂದು 48,010 ರೂಪಾಯಿ ಆಗಿದೆ. ಇನ್ನು, ವಾಣಿಜ್ಯ ನಗರಿ ಮುಂಬೈನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,300 ರೂಪಾಯಿ ಆಗಿದೆ.
ಇದನ್ನೂ ಓದಿ: Gold Rate Today: ಗ್ರಾಹಕರಿಗೆ ಖುಷಿಯ ವಿಚಾರ; ಕುಸಿತ ಕಾಣುತ್ತಿರುವ ಚಿನ್ನದ ದರ
Published On - 9:50 am, Fri, 7 May 21