AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುರ್ಭಿಕ್ಷದಲ್ಲಿ ಅಧಿಕ ಮಾಸ: ಬೆಳಗಾವಿ ಬಳಿ ಬೃಹತ್ ಆಕ್ಸಿಜನ್ ಟ್ಯಾಂಕರ್ ಅಪಘಾತಕ್ಕೆ ತುತ್ತು; ಮುಂದೇನು?

Belagavi Oxygen Tanker Accident: ಎಕ್ಸಲ್ ಕಟ್ ಆಗಿರುವ ಹಿನ್ನೆಲೆ ಬೇರೆ ಆಕ್ಸಿಜನ್ ಟ್ಯಾಂಕರ್ ತರೆಸಲು ಅಧಿಕಾರಿಗಳ ಸಿದ್ಧತೆ ನಡೆಸಿದ್ದಾರೆ. ಬೇರೆ ಆಕ್ಸಿಜನ್ ಟ್ಯಾಂಕರ್ ತರಿಸಿ ಆಕ್ಸಿಜನ್ ಲಿಕ್ವಿಡ್ ಶಿಫ್ಟ್ ಮಾಡಲು ನಿರ್ಧಾರ ಮಾಡಲಾಗಿದೆ. ರಸ್ತೆ ಮಧ್ಯದಲ್ಲೇ ಬೇರೊಂದು ಟ್ಯಾಂಕರ್ ಗೆ ಅಧಿಕಾರಿಗಳು ಆಕ್ಸಿಜನ್ ಲಿಕ್ವಿಡ್ ಶಿಫ್ಟ್ ಮಾಡಲಿದ್ದಾರೆ.

ದುರ್ಭಿಕ್ಷದಲ್ಲಿ ಅಧಿಕ ಮಾಸ: ಬೆಳಗಾವಿ ಬಳಿ ಬೃಹತ್ ಆಕ್ಸಿಜನ್ ಟ್ಯಾಂಕರ್ ಅಪಘಾತಕ್ಕೆ ತುತ್ತು; ಮುಂದೇನು?
ದುರ್ಭಿಕ್ಷದಲ್ಲಿ ಅಧಿಕ ಮಾಸ: ಬೆಳಗಾವಿ ಬಳಿ ಬೃಹತ್ ಆಕ್ಸಿಜನ್ ಟ್ಯಾಂಕರ್ ಅಪಘಾತಕ್ಕೆ ತುತ್ತು; ಮುಂದೇನು?
ಸಾಧು ಶ್ರೀನಾಥ್​
| Updated By: Digi Tech Desk|

Updated on:May 07, 2021 | 10:45 AM

Share

ಬೆಳಗಾವಿ: ದುರ್ಭಿಕ್ಷದಲ್ಲಿ ಅಧಿಕ ಮಾಸ ಎಂಬಂತಾಗಿದೆ ಈ ಕೊರೊನಾ ಕಾಲದಲ್ಲಿ ರಾಜ್ಯದ ಪರಿಸ್ಥಿತಿ. ಒಂದೆಡೆ ಕೇಂದ್ರ ಸರ್ಕಾರ ಹೆಚ್ಚುಹೆಚ್ಚು ಆಕ್ಸಿಜನ್ ಟ್ಯಾಂಕರುಗಳನ್ನು ರಾಜ್ಯಕ್ಕೆ ಕಳಿಸಲು ನಿರಾಕರಿಸುತ್ತಿರುವಾಗ ಕರ್ನಾಟಕ ಹೈಕೋರ್ಟ್​ ಮಧ್ಯಪ್ರವೇಶಿಸಿ, ಮೊದಲು ಜೀವವಾಯು ಸಪ್ಲೆ ಮಾಡಿ ಎಂದು ಕೇಂದ್ರಕ್ಕೆ ಆಜ್ಞಾಪಿಸಿದೆ. ಅದಕ್ಕೂ ಕ್ಯಾರೆ ಎನ್ನದ ಕೇಂದ್ರ ಸರ್ಕಾರ ಭಂಡ ಧೈರ್ಯದೊಂದಿಗೆ ಸುಪ್ರೀಂಕೋರ್ಟ್​ಗೆ ಹೋಗಿ ಅಲ್ಲೂ ತಾನು ಕರ್ನಾಟಕಕ್ಕೆ ಹೆಚ್ಚುವರಿಯಾಗಿ ಆಕ್ಸಿಜನ್​ ಸಪ್ಲೆ ಮಾಡೋಕ್ಕೆ ಆಗಲ್ಲ ಅಂತಾ ಅವಲತ್ತುಕೊಂಡಿದೆ. ಪರಿಸ್ಥಿತಿ ಹೀಗಿರುವಾಗ ಇದ್ದಬದ್ದ ಮೂಲಗಳಿಂದ ಕರ್ನಾಟಕ ತನ್ನ ಅಗತ್ಯತೆಯನ್ನು ಪೂರೈಸಿಕೊಳ್ಳುತ್ತಿರುವಾಗ ಬೆಳಗಾವಿಗೆ ಬರುತ್ತಿದ್ದ ಆಕ್ಸಿಜನ್ ಟ್ಯಾಂಕರ್ ಅಪಘಾತಕ್ಕೀಡಾಗಿದೆ. ಸದ್ಯ, ಅನಿಲಕ್ಕೆ ಏನೂ ತೊಂದರೆಯಾಗಿಲ್ಲ.ಆದರೆ ಸರಾಗ ಸರಬರಾಜುವಿನಲ್ಲಿ ವ್ಯತ್ಯಯವಾಗಿದೆ.

ಬೆಳಗಾವಿಗೆ ಬರುತ್ತಿದ್ದ ಬೃಹತ್ ಆಕ್ಸಿಜನ್ ಟ್ಯಾಂಕರ್ ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಅಪಘಾತಕ್ಕೀಡಾಗಿದೆ. ಓವರ್‌ಟೇಕ್ ಮಾಡಿ ಗುರಿ ತಲುಪುವ ಧಾವಂತದಲ್ಲಿ ಲಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದಿದೆ.

Huge oxygen tanker met with accident near belagavi 4

ರಸ್ತೆ ಮಧ್ಯದಲ್ಲೇ ಬೇರೊಂದು ಟ್ಯಾಂಕರ್​ಗೆ ಅಷ್ಟೂ ಆಕ್ಸಿಜನ್ ಲಿಕ್ವಿಡ್ ಶಿಫ್ಟ್ ಮಾಡಲು ಸಿದ್ಧತೆ

ಸದ್ಯ ಅಪಘಾತ ವೇಳೆ ಆಕ್ಸಿಜನ್ ಲಿಕ್ವಿಡ್‌ ಟ್ಯಾಂಕ್‌ಗೆ ಹಾನಿಯಾಗಿಲ್ಲ. ಡಿಕ್ಕಿ ರಭಸಕ್ಕೆ ಟ್ಯಾಂಕರ್‌ನ ಟೈರ್ ಬ್ಲಾಸ್ಟ್ ಆಗಿ ಆಕ್ಸೆಲ್ ಕಟ್ ಆಗಿದೆ. 16 ಸಾವಿರ ಲೀಟರ್​ ಸಾಮರ್ಥ್ಯದ (16 KL) ಆಕ್ಸಿಜನ್ ಲಿಕ್ವಿಡ್ ತರುತ್ತಿದ್ದ ಟ್ಯಾಂಕರ್ ಬಳ್ಳಾರಿಯಿಂದ ಬೆಳಗಾವಿಗೆ ಬರುತ್ತಿತ್ತು. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Huge oxygen tanker met with accident near belagavi 5

ರಸ್ತೆ ಮಧ್ಯದಲ್ಲೇ ಬೇರೊಂದು ಟ್ಯಾಂಕರ್​ಗೆ ಅಷ್ಟೂ ಆಕ್ಸಿಜನ್ ಲಿಕ್ವಿಡ್ ಶಿಫ್ಟ್ ಮಾಡಲು ಸಿದ್ಧತೆ

ಎಕ್ಸಲ್ ಕಟ್ ಆಗಿರುವ ಹಿನ್ನೆಲೆ ಬೇರೆ ಆಕ್ಸಿಜನ್ ಟ್ಯಾಂಕರ್ ತರೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಬೇರೆ ಆಕ್ಸಿಜನ್ ಟ್ಯಾಂಕರ್ ತರಿಸಿ ಆಕ್ಸಿಜನ್ ಲಿಕ್ವಿಡ್ ಶಿಫ್ಟ್ ಮಾಡಲು ನಿರ್ಧಾರ ಮಾಡಲಾಗಿದೆ. ರಸ್ತೆ ಮಧ್ಯದಲ್ಲೇ ಬೇರೊಂದು ಟ್ಯಾಂಕರ್ ಗೆ ಅಧಿಕಾರಿಗಳು ಆಕ್ಸಿಜನ್ ಲಿಕ್ವಿಡ್ ಶಿಫ್ಟ್ ಮಾಡಲಿದ್ದಾರೆ.

Huge oxygen tanker met with accident near belagavi 3

ರಸ್ತೆ ಮಧ್ಯದಲ್ಲೇ ಬೇರೊಂದು ಟ್ಯಾಂಕರ್​ಗೆ ಅಷ್ಟೂ ಆಕ್ಸಿಜನ್ ಲಿಕ್ವಿಡ್ ಶಿಫ್ಟ್ ಮಾಡಲು ಸಿದ್ಧತೆ

(Huge oxygen tanker met with accident near belagavi)

ಕರ್ನಾಟಕಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್​ ಪೂರೈಸಬೇಕೆಂಬ ಹೈಕೋರ್ಟ್​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೊರೆ ಹೋದ ಭಾರತ ಸರ್ಕಾರ

Published On - 9:41 am, Fri, 7 May 21