Gold Rate Today: ಗ್ರಾಹಕರಿಗೆ ಖುಷಿಯ ವಿಚಾರ; ಕುಸಿತ ಕಾಣುತ್ತಿರುವ ಚಿನ್ನದ ದರ

Gold Rate Today: ಗ್ರಾಹಕರಿಗೆ ಖುಷಿಯ ವಿಚಾರ; ಕುಸಿತ ಕಾಣುತ್ತಿರುವ ಚಿನ್ನದ ದರ
ಸಾಂದರ್ಭಿಕ ಚಿತ್ರ

Gold Price Today: ದಿನ ಸಾಗುತ್ತಿದ್ದಂತೆ ಚಿನ್ನದ ದರ ಇಳಿಕೆಯತ್ತ ಸಾಗುತ್ತಿದೆ. ಈ ಒಂದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಚಿನ್ನದ ದರ ಇಳಿಕೆ ಕಂಡಿದೆ.

shruti hegde

|

May 03, 2021 | 9:22 AM

ಬೆಂಗಳೂರು: ಚಿನ್ನದ ದರ ಏರಿಳಿತ ಕಾಣುತ್ತಿರುವುದು ಸಹಜ. ಅದೇ ಈ ರೀತಿ ಗ್ರಾಹಕರಿಗೆ ಖುಷಿ ನೀಡುವ ಒಂದು ವಿಚಾರವೆಂದರೆ ಚಿನ್ನದ ದರ ಕುಸಿತ ಕಂಡಿದೆ. ಕಳೆದ ತಿಂಗಳವರೆಗೂ ಕೊಂಚವೇ ಏರಿಕೆಯತ್ತ ಸಾಗುತ್ತಿದ್ದ ಚಿನ್ನದ ದರ ಕುಸಿತ ಕಂಡಿದೆ. ದಿನ ಸಾಗುತ್ತಿದ್ದಂತೆ ಚಿನ್ನದ ದರ ಇಳಿಕೆಯತ್ತ ಸಾಗುತ್ತಿದೆ. ಈ ಒಂದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಚಿನ್ನದ ದರ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,800 ರೂಪಾಯಿ ಇದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,780 ರೂಪಾಯಿ ಇದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ ಎಂಬುದನ್ನು ಗಮನಿಸುವುದಾದರೆ, ರಾಷ್ಟ್ರ ರಾಜಧಾನಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,370 ರೂಪಾಯಿ ಇದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,570 ರೂಪಾಯಿ ಇದೆ. ವಾಣಿಜ್ಯ ಜನರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,160 ರೂಪಾಯಿ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,160 ರೂಪಾಯಿ ಇದೆ.

ಅದೇ ರೀತಿ ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,110 ರೂಪಾಯಿ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,110 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,110 ರೂಪಾಯಿ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,780 ರೂಪಾಯಿ ಇದೆ. ಹೈದರಾಬಾದ್​ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,800 ರೂಪಾಯಿ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ,780 ರೂಪಾಯಿ ಇದೆ. ವಿಜಯವಾಡದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,800 ರೂಪಾಯಿ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47, 780 ರೂಪಾಯಿ ಇದೆ. ವಿಶಾಖಪಟ್ಟಣದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,800 ರೂಪಾಯಿ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,780 ರೂಪಾಯಿ ಇದೆ.

ಬೆಂಗಳೂರಿನಲ್ಲಿ ಬೆಳ್ಳಿ ದರ ಮಾಹಿತಿ 1 ಗ್ರಾಂ ಬೆಳ್ಳಿ ದರ 67.50 ರೂಪಾಯಿ ಇದೆ. 8 ಗ್ರಾಂ ಬೆಳ್ಳಿ ದರ 540 ರೂಪಾಯಿ ಇದೆ. ಅದೇ ರೀತಿ 10 ಗ್ರಾಂ ಬೆಳ್ಳಿ ದರ 675 ರೂಪಾಯಿ ಇದೆ. 100 ಗ್ರಾಂ ಬೆಳ್ಳಿ ದರ 6,750 ರೂಪಾಯಿ ಆಗಿದೆ. 1 ಕೆಜಿ ಬೆಳ್ಳಿ ದರ 67,500 ರೂಪಾಯಿ ಆಗಿದೆ.

ಇದನ್ನೂ ಓದಿ: Gold Price Today: ಈ ವರ್ಷದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಚಿನ್ನದ ದರ ಇಳಿಕೆ

Follow us on

Related Stories

Most Read Stories

Click on your DTH Provider to Add TV9 Kannada