AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank holidays in May 2021: ಮೇ ತಿಂಗಳಲ್ಲಿ ಬ್ಯಾಂಕ್​ಗಳಿಗೆ 12 ದಿನದ ತನಕ ರಜಾ

2021ರ ಮೇ ತಿಂಗಳಲ್ಲಿ 12 ದಿನದ ತನಕ ಬ್ಯಾಂಕ್​ಗಳು​ ರಜಾ ಇರುತ್ತವೆ. ಯಾವ್ಯಾವ ದಿನ ಮತ್ತು ಯಾವ ವಿಶೇಷಕ್ಕೆ ರಜಾ ಇದೆ ಎಂಬ ವಿವರ ಇಲ್ಲಿದೆ.

Bank holidays in May 2021: ಮೇ ತಿಂಗಳಲ್ಲಿ ಬ್ಯಾಂಕ್​ಗಳಿಗೆ 12 ದಿನದ ತನಕ ರಜಾ
ಸಾಂದರ್ಭಿಕ ಚಿತ್ರ
Srinivas Mata
| Edited By: |

Updated on:Apr 27, 2021 | 6:32 PM

Share

2021ರ ಮೇ ತಿಂಗಳಲ್ಲಿ 12 ದಿನದ ತನಕ ಭಾರತದಲ್ಲಿ ಬ್ಯಾಂಕ್​ಗಳಿಗೆ ರಜಾ ಇರುತ್ತವೆ. ಅದರಲ್ಲಿ ವಾರಾಂತ್ಯಗಳು ಹಾಗೂ ಹಬ್ಬಗಳು ಸೇರಿಕೊಂಡಿವೆ. ಗೆಜೆಟೆಡ್ ರಜಾ ದಿನಗಳನ್ನು ಮಾತ್ರ ದೇಶದಾದ್ಯಂತ ಬ್ಯಾಂಕ್​ಗಳು ಒಂದೇ ರೀತಿಯಾಗಿ ಅನುಸರಿಸುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ, ಮೇ 14, 2021ರಂದು ಈದ್-ಉಲ್-ಫಿತ್ರ್ ಇರುವುದರಿಂದ ದೇಶದ ಬಹುತೇಕ ರಾಜ್ಯಗಳ ಬ್ಯಾಂಕ್​ಗಳಿಗೆ ರಜಾ ಇರಲಿದೆ. ಸಾರ್ವಜನಿಕ ಬ್ಯಾಂಕ್, ಖಾಸಗಿ ಬ್ಯಾಂಕ್, ಕೋ ಆಪರೇಟಿವ್ ಬ್ಯಾಂಕ್, ರೀಜನಲ್ ಬ್ಯಾಂಕ್​ಗಳು ಹಾಗೂ ವಿದೇಶೀ ಬ್ಯಾಂಕ್​ಗಳಿಗೂ ಅಂದು ರಜಾ ದಿನ ಆಗಿರಲಿದೆ.

ನೆಗೋಷಿಯಬಲ್ ಇನ್​ಸ್ಟ್ರುಮೆಂಟ್ ಆ್ಯಕ್ಟ್ ಪ್ರಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಘೋಷಣೆ ಮಾಡಿರುವ ರಜಾ ದಿನಗಳ ಪಟ್ಟಿ ಈ ಕೆಳಕಂಡಂತೆ ಇದೆ.

ಮೇ 1: ಮಹಾರಾಷ್ಟ್ರ ದಿನ್/ಮೇ ದಿನ (ಕಾರ್ಮಿಕರ ದಿನಾಚರಣೆ) ಮೇ 7: ಜುಮಾತ್-ಉಲ್-ವಿದಾ ಮೇ 13: ಈದ್-ಉಲ್-ಫಿತ್ರ್ (ರಮ್ಜಾನ್) ಮೇ 14: ಭಗವಾನ್ ಶ್ರೀ ಪರಶುರಾಮ್ ಜಯಂತಿ/ರಮ್ಜಾನ್-ಈದ್ (ಈದ್-ಉಲ್-ಫಿತ್ರ್)/ ಬಸವ ಜಯಂತಿ/ ಅಕ್ಷಯ ತೃತೀಯ ಮೇ 26: ಬುದ್ಧ ಪೌರ್ಣಮಿ

ವಾರಾಂತ್ಯ ರಜಾಗಳು ಮೇ 2: ಭಾನುವಾರ ಮೇ 8: ಎರಡನೇ ಶನಿವಾರ ಮೇ 9: ಭಾನುವಾರ ಮೇ 16: ಭಾನುವಾರ ಮೇ 22: ನಾಲ್ಕನೇ ಶನಿವಾರ ಮೇ 23: ಭಾನುವಾರ ಮೇ 30: ಭಾನುವಾರ

ಮೇ 1, 7, 13, 14 ಮತ್ತು 26ರಂದು ಈ ಕೆಳಕಂಡ ರಾಜ್ಯಗಳಲ್ಲಿ ಬ್ಯಾಂಕ್​ಗಳು ಕಾರ್ಯ ನಿರ್ವಹಿಸುತ್ತವೆ: ಅಗರ್ತಲಾ, ಅಹ್ಮದಾಬಾದ್, ಐಜ್​ವಾಲ್, ಭೋಪಾಲ್, ಭುವನೇಶ್ವರ್, ಚಂಡೀಗಢ, ಡೆಹ್ರಾಡೂನ್, ಗ್ಯಾಂಗ್ಟಕ್, ಜೈಪುರ್, ಜಮ್ಮು, ಕಾನ್ಪುರ್, ಲಖನೌ, ನವದೆಹಲಿ, ರಾಯ್​ಪುರ್, ರಾಂಚಿ, ಶಿಲ್ಲಾಂಗ್​, ಶಿಮ್ಲಾ ಮತ್ತು ಶ್ರೀನಗರ್​ನಲ್ಲಿ ಮೇ 1ರಂದು ಬ್ಯಾಂಕ್​ಗಳು ಕಾರ್ಯ ನಿರ್ವಹಿಸುತ್ತವೆ. ಜಮ್ಮು ಮತ್ತು ಶಿಮ್ಲಾದ ಬ್ಯಾಂಕ್​ಗಳನ್ನು ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳಲ್ಲಿ ಬ್ಯಾಂಕ್​ಗಳು ಸಾರ್ವಜನಿಕ ಸೇವೆಗೆ ಲಭ್ಯ ಇವೆ.

ಮೇ 13ರಂದು ಬೆಲಾಪುರ್, ಜಮ್ಮು, ಕೊಚ್ಚಿ, ಮುಂಬೈ, ನಾಗ್​ಪುರ್, ಶ್ರೀನಗರ್, ತಿರುವನಂತಪುರದಲ್ಲಿ ಮಾತ್ರ ರಜಾ ಇದೆ. ಮೇ 14ರಂದು ಬಹುತೇಕ ರಾಜ್ಯಗಳಲ್ಲಿ ರಜಾ ಇದೆ. ಬೆಲಾಪುರ್, ಜಮ್ಮು, ಕೊಚ್ಚಿ, ಮುಂಬೈ, ನಾಗ್​ಪುರ್, ಶ್ರೀನಗರ್ ಮತ್ತು ತಿರುವನಂಪುರದಲ್ಲಿ ರಜಾ ಇರುವುದಿಲ್ಲ. ಅದೇ ರೀತಿ ಬುದ್ಧ ಪೌರ್ಣಮಿಯಂದು (ಮೇ 26) ಅಹ್ಮದಾಬಾದ್, ಐಜ್​ವಾಲ್, ಬೆಂಗಳೂರು, ಭುವನೇಶ್ವರ್, ಚೆನ್ನೈ, ಗ್ಯಾಂಗ್ಟಕ್, ಗುವಾಹತಿ, ಹೈದರಾಬಾದ್, ಇಂಫಾಲ, ಜೈಪುರ್, ಕೊಚ್ಚಿ, ಪಣಜಿ, ಪಾಟ್ನಾ, ಶಿಲ್ಲಾಂಗ್ ಮತ್ತು ತಿರುವನಂತಪುರದಲ್ಲಿ ಬ್ಯಾಂಕ್​ಗಳು ಕಾರ್ಯ ನಿರ್ವಹಿಸುತ್ತವೆ.

ಇದನ್ನೂ ಓದಿ: RBI guidelines | ಖಾಸಗಿ ಬ್ಯಾಂಕ್​ಗಳ MD, CEOಗಳ ಗರಿಷ್ಠ ಅಧಿಕಾರಾವಧಿ 15 ವರ್ಷಕ್ಕೆ ನಿಗದಿ

(Bank holidays for the month of May 2021. Here is the list of holidays)

Published On - 6:13 pm, Tue, 27 April 21

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ