Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC Saral pension plan: ಭಾರತೀಯ ಜೀವ ವಿಮಾ ನಿಗಮದಿಂದ ಸರಳ್​ ಪೆನ್ಷನ್ ಪ್ಲಾನ್ ಪರಿಚಯ

ಭಾರತೀಯ ಜೀವ ವಿಮಾ ನಿಗಮದ ಸರಳ್ ಪೆನ್ಷನ್ ಪಾಲಿಸಿ ಬಗ್ಗೆ ವಿವರಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ನಿಶ್ಚಿತವಾದ ಆದಾಯ ಬಯಸುವಂಥವರು ಇದನ್ನು ಆಯ್ಕೆ ಮಾಡಿಕೊಳ್ಳಬಹುದು.

LIC Saral pension plan: ಭಾರತೀಯ ಜೀವ ವಿಮಾ ನಿಗಮದಿಂದ ಸರಳ್​ ಪೆನ್ಷನ್ ಪ್ಲಾನ್ ಪರಿಚಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 02, 2021 | 11:38 AM

ಭಾರತೀಯ ಜೀವ ವಿಮಾ ನಿಗಮದಿಂದ (LIC) ಎಲ್​ಐಸಿ ಸರಳ್​ ಪೆನ್ಷನ್ ಯೋಜನೆ ಎಂಬುದನ್ನು ಪರಿಚಯಿಸಲಾಗಿದೆ. ಅಂದಹಾಗೆ ಇದು ಯಾವುದೇ ಮಾರುಕಟ್ಟೆ ವಿಚಾರಗಳಿಗೆ ಜೋಡಣೆ ಆಗದ, ನಾನ್ ಪಾರ್ಟಿಸಿಪೇಟಿಂಗ್, ಒಂದು ಪ್ರೀಮಿಯಂ, ವೈಯಕ್ತಿಕವಾಗಿ ತಕ್ಷಣದ ಆನ್ಯುಯುಟಿ ಯೋಜನೆ. ಇನ್ಷೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್​ಮೆಂಟ್ ಅಥಾರಿಟಿ ಆಫ್ ಇಂಡಿಯಾದ (ಐಆರ್​ಡಿಎಐ) ಮಾರ್ಗದರ್ಶಿ ಸೂತ್ರದ ಪ್ರಕಾರವೇ ಈ ಆನ್ಯುಯುಟಿ ಪ್ಲಾನ್ ಇದೆ. ಇದೇ ನಿಯಮ ಮತ್ತು ನಿಬಂಧನೆಗಳು ಎಲ್ಲ ಲೈಫ್​ ಇನ್ಷೂರರ್​ಗಳಿಗೂ ಅನ್ವಯ ಆಗುತ್ತದೆ. ಲಭ್ಯ ಇರುವ ಲಮ್​ಸಮ್​ (ಒಂದೇ ಸಲಕ್ಕೆ ಪಾವತಿಸುವ ಮೊತ್ತ) ಎರಡು ಆಯ್ಕೆಗಳ ಪೈಕಿ ಒಂದು ಆನ್ಯುಯುಟಿ ಪ್ಲಾನ್​ ಅನ್ನು ಪಾಲಿಸಿದಾರರು ಆರಿಸಿಕೊಳ್ಳಬಹುದು.

1. ಲೈಫ್​ ಆನ್ಯುಯುಟಿ ಜತೆಗೆ ಖರೀದಿ ದರದ ಶೇ 100ರಷ್ಟು ರಿಟರ್ನ್, 2. ಜಂಟಿ ಲೈಫ್ ಕೊನೆಯದಾಗಿ ಉಳಿದುಕೊಂಡಿರುವ ತನಕ ಆನ್ಯುಯುಟಿ. ಜತೆಗೆ ಖರೀದಿ ಮೊತ್ತದ ಶೇ 100ರಷ್ಟು ರಿಟರ್ನ್ ಅದು ಜಂಟಿಯಾಗಿ ಖರೀದಿಸಿದವರ ಪೈಕಿ ಕೊನೆಯ ವ್ಯಕ್ತಿ ಉಳಿದುಕೊಂಡಿರುವ ತನಕ. ಈ ಯೋಜನೆಯನ್ನು ಆಫ್​ಲೈನ್​ ಅಥವಾ ಎಲ್​ಐಸಿ ವೆಬ್​ಸೈಟ್​ ಮೂಲಕವಾಗಿ ಆಫ್​ಲೈನ್​ನಲ್ಲೂ ಖರೀದಿ ಮಾಡಬಹುದು. ವರ್ಷಕ್ಕೆ ಕನಿಷ್ಠ ಆನ್ಯುಯುಟಿ 12,000 ರೂಪಾಯಿ. ಮತ್ತು ಯಾವ ಆನ್ಯುಯುಟಿ ಮೋಡ್, ಆರಿಸಿಕೊಂಡದ್ದು ಮತ್ತು ಖರೀದಿದಾರರ ವಯಸ್ಸು ಇತ್ಯಾದಿಗಳ ಮೇಲೆ ಕನಿಷ್ಠ ಮೊತ್ತ ಅವಲಂಬಿತ ಆಗಿರುತ್ತದೆ. ಗರಿಷ್ಠ ಖರೀದಿ ಮೊತ್ತಕ್ಕೆ ಯಾವುದೇ ಮಿತಿ ಹಾಕಿಲ್ಲ.

ಆನ್ಯುಯಿಟಿ ಅಂದರೆ ಪಿಂಚಣಿ ಅಥವಾ ಪದಶಃ ಅರ್ಥ ಹೇಳುವುದಾದರೆ ವರ್ಷಾಶನ ಅಂತ ಕರೆಯಬಹುದು. ಖರೀದಿ ಮಾಡಿದ ಪ್ಲಾನ್​ಗೆ ವಾರ್ಷಿಕವಾಗಿ, ಅರ್ಧ ವಾರ್ಷಿಕ, ತ್ರೈಮಾಸಿಕ ಮತ್ತು ತಿಂಗಳ ಲೆಕ್ಕಾಚಾರದಲ್ಲಿಯೂ ಆನ್ಯುಯುಟಿ ಸಿಗುತ್ತದೆ. ಒಂದು ವೇಳೆ 5,00,000 ಮೇಲ್ಪಟ್ಟ ಮೊತ್ತದ ಖರೀದಿ ಇದ್ದಲ್ಲಿ ಅದಕ್ಕೆ ಹೆಚ್ಚುವರಿ ಆನ್ಯುಯುಟಿ ದರದ ರೂಪದಲ್ಲಿ ಇನ್ಸೆಂಟಿವ್ ಸಿಗುತ್ತದೆ. 40ರಿಂದ 80 ವರ್ಷ ವಯಸ್ಸಿನವರಿಗೆ ಈ ಯೋಜನೆ ದೊರೆಯಲಿದೆ. ಪಾಲಿಸಿ ಆರಂಭವಾದ ಆರು ತಿಂಗಳ ನಂತರ ಯಾವುದೇ ಸಮಯದಲ್ಲಿ ಸಾಲ ಸೌಲಭ್ಯ ಸಿಗುತ್ತದೆ.

ಈ ಪ್ಲಾನ್ ಹೇಗೆ ಕೆಲಸ ಮಾಡುತ್ತದೆ ಅಂದರೆ, ಒಂದೇ ಸಲಕ್ಕೆ ಇಷ್ಟು ಮೊತ್ತ ಎಂದು ಇನ್ಷೂರೆನ್ಸ್​ ಖರೀದಿಸಿದರೆ, ಆ ನಂತರ ಪಾಲಿಸಿದಾರರು ಆಯ್ಕೆ ಮಾಡಿಕೊಂಡ ಅವಧಿಗೆ (1 ವರ್ಷ, 6 ತಿಂಗಳು, 3 ತಿಂಗಳು, ತಿಂಗಳು) ನಿಯಮಿತವಾಗಿ ಹಣ ಬರುತ್ತಾ ಇರುತ್ತದೆ. ನಿಶ್ಚಿತವಾದ ಆದಾಯವನ್ನು ಬಯಸುವವರು, ಆದಾಯಕ್ಕೆ ಖಾತ್ರಿ, ಭದ್ರತೆ, ಸುರಕ್ಷತೆಯನ್ನು ಬಯಸುವವರು ಇದನ್ನು ಆಯ್ಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: LIC Jeevan Labh policy : ಎಲ್​ಐಸಿ ಜೀವನ್​ ಲಾಭ್​ ಪಾಲಿಸಿ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳಿವು

(LIC introduced Saral pension plan annuity scheme. Here is the details about the plan)

Published On - 11:36 am, Fri, 2 July 21