AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

JioPhone Next: ಇಂದಿನಿಂದ ಜಿಯೋಫೋನ್‌ ನೆಕ್ಸ್ಟ್‌ ಮಾರಾಟ ಪ್ರಾರಂಭ: ಹೇಗೆ ಖರೀದಿಸುವುದು?, ಇಲ್ಲಿದೆ ಮಾಹಿತಿ

ನೀವು ನವೆಂಬರ್ 4 ಅಂದರೆ ಇಂದಿನಿಂದ JioMart ಡಿಜಿಟಲ್ ಸ್ಟೋರ್‌ಗಳಿಂದ ಡಿವೈಸ್​ಗಳನ್ನು ಖರೀದಿಸಬಹುದು. ಜಿಯೋವಿನ ಅಧಿಕೃತ ವೆಬ್‌ಸೈಟ್‌, WhatsApp ಹಾಗೂ ಸ್ಟೋರ್‌ಗೆ ಭೇಟಿ ನೀಡುವ ಮೂಲಕ ಮೂರು ರೀತಿಯಲ್ಲಿ ಖರೀದಿ ಮಾಡಬಹುದು.

JioPhone Next: ಇಂದಿನಿಂದ ಜಿಯೋಫೋನ್‌ ನೆಕ್ಸ್ಟ್‌ ಮಾರಾಟ ಪ್ರಾರಂಭ: ಹೇಗೆ ಖರೀದಿಸುವುದು?, ಇಲ್ಲಿದೆ ಮಾಹಿತಿ
JioPhone Next
Follow us
TV9 Web
| Updated By: Vinay Bhat

Updated on: Nov 04, 2021 | 3:37 PM

ಬಹುನಿರೀಕ್ಷಿತ ಜಿಯೋಫೋನ್‌ ನೆಕ್ಸ್ಟ್‌ (JioPhone Next) ಭಾರತದಲ್ಲಿ ಅಧಿಕೃತವಾಗಿದೆ. ರಿಲಯನ್ಸ್‌ ಜಿಯೋ (Reliance Jio) ಮತ್ತು ಗೂಗಲ್‌ (Google) ಸಹಯೋಗದಲ್ಲಿ ಸಿದ್ದವಾಗಿರುವ ಈ ಸ್ಮಾರ್ಟ್‌ಫೋನ್‌ ದೀಪಾವಳಿಯಿಂದ (Deepavali) ಅಂದರೆ ನವೆಂಬರ್ 4 ಇಂದಿನಿಂದ ಖರೀದಿಗೆ ಲಭ್ಯವಾಗುತ್ತಿದೆ. ರಿಲಯನ್ಸ್ ಜಿಯೋ ಹಾಗೂ ಗೂಗಲ್ ಜೊತೆಗೂಡಿ ಅಭಿವೃದ್ದಿಪಡಿಸಿರುವ ಬಹುನಿರೀಕ್ಷಿತ ನೂತನ JioPhone Next ಸ್ಮಾರ್ಟ್‌ಫೋನ್ ಅನ್ನು ಜಿಯೋವಿನ ಅಧಿಕೃತ ವೆಬ್‌ಸೈಟ್‌, ವಾಟ್ಸ್​ಆ್ಯಪ್​ (WhatsApp) ಹಾಗೂ ಸ್ಟೋರ್‌ಗೆ ಭೇಟಿ ನೀಡುವ ಮೂಲಕ ಮೂರು ರೀತಿಯಲ್ಲಿ ಖರೀದಿ ಮಾಡಬಹುದು ಎಂದು ತಿಳಿದುಬಂದಿದೆ.

ನೀವು ನವೆಂಬರ್ 4 ಅಂದರೆ ಇಂದಿನಿಂದ JioMart ಡಿಜಿಟಲ್ ಸ್ಟೋರ್‌ಗಳಿಂದ ಡಿವೈಸ್​ಗಳನ್ನು ಖರೀದಿಸಬಹುದು. ರಿಜಿಸ್ಟರಗಾಗಿ, ನೀವು ಬಹು ಆಯ್ಕೆಗಳನ್ನು ಪಡೆಯುತ್ತೀರಿ, ಒಂದೋ ನೀವು 6,499 ಮುಂಗಡ ಪಾವತಿಯನ್ನು ಮಾಡಬಹುದು ಅಥವಾ ನೀವು 18 ತಿಂಗಳುಗಳು ಅಥವಾ 24 ತಿಂಗಳ EMI ಯೋಜನೆಯ ಮೂಲಕ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು. ನೀವು ಎರಡನೆಯದನ್ನು ಆರಿಸಿದರೆ, ಕಂಪನಿಯು ಎಡಿಶನಲ್ ಪಿ 501 ವಿಧಿಸುತ್ತದೆ ಮತ್ತು ನೀವು ಜಿಯೋ ಡೇಟಾ ಪ್ಲಾನ್ ಗೆ ಲಾಕ್ ಆಗುತ್ತೀರಿ. ಗ್ರಾಹಕರು ತಮ್ಮ WhatsApp ನಿಂದ 7018270182 ಗೆ ‘HI’ ಎಂದು ಬರೆಯುವ ಮೂಲಕ ಸಂದೇಶವನ್ನು ಕಳುಹಿಸುವ ಮೂಲಕ JioPhone ನೆಕ್ಸ್ಟ್ ಅನ್ನು ಬುಕ್ ಮಾಡಬಹುದು.

ಇಲ್ಲವಾದಲ್ಲಿ ಜಿಯೋವಿನ ಅಧಿಕೃತ https://www.jio.com/next ವೆಬ್‌ಸೈಟ್ ಮೂಲಕವೂ ಖರೀದಿಸಬಹುದು. ವೆಬ್​ಸೈಟ್​ನಲ್ಲಿ JioPhone Next ಸ್ಮಾರ್ಟ್‌ಫೋನ್ ಅನ್ನು ಪಟ್ಟಿ ಮಾಡಿರುವುದನ್ನು ನೀವು ಕಾಣುತ್ತೀರಾ. ಫೋನ್‌ ಮೆಲೆ ಕ್ಲಿಕ್ ಮಾಡಿದರೆ, ಫೋನ್ ಕುರಿತಂತಹ ಮಾಹಿತಿಗಳನ್ನು ಅಲ್ಲಿ ನೀಡಲಾಗಿದೆ. ಹಾಗೆಯೇ, ನಿಮಗೆ ಮೊಬೈಲ್ ಪಕ್ಕದಲ್ಲೇ I am Interested ಎಂಬ ಆಯ್ಕೆ ಕಾಣಿಸುತ್ತದೆ. ಆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರ ನೀವು ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು ನಿಯಮ ಮತ್ತು ಷರತ್ತು ಆಯ್ಕೆಯನ್ನು ಕ್ಲಿಕ್ ಮಾಡಬೇಕು ಇದರ ನಂತರ OTP ಅನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ ಅಲ್ಲಿಂದ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಬೇಕಾಗುತ್ತದೆ. 5.ನಂತರ ಬಳಕೆದಾರರು ತಮ್ಮ ಪ್ರಸ್ತುತ ಮೊಬೈಲ್ ವಿಳಾಸ, ಪಿನ್ ಕೋಡ್ ಮತ್ತು ಫ್ಲಾಟ್ ಅಥವಾ ಮನೆ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.

ಜಿಯೋಫೋನ್ ನೆಕ್ಸ್ಟ್ 720×1,440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 5.45-ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 3 ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಈ ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 215 ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿದ್ದು, ಪ್ರಗತಿ OS ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ನ ಆಪ್ಟಿಮೈಸ್ಡ್ ಆವೃತ್ತಿಯಾಗಿದ್ದು, ಭಾರತದಲ್ಲಿನ ಬಳಕೆದಾರರಿಗೆ ಲಭ್ಯವಾಗಲಿದೆ. ಜೊತೆಗೆ 2GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದನ್ನು 512GB ವರೆಗೆ ವಿಸ್ತರಿಸಬಹುದಾಗಿದೆ.

ಈ ಫೋನ್‌ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ರಿಯರ್‌ ಕ್ಯಾಮೆರಾ ಫೀಚರ್ಸ್‌ನಲ್ಲಿ ಪೋರ್ಟ್ರೇಟ್ ಮೋಡ್, ನೈಟ್ ಮೋಡ್ ಮತ್ತು ಫ್ರೀ ಲೋಡ್ ಮಾಡಿದ ಕಸ್ಟಮ್ ಇಂಡಿಯಾ-ಆಗ್ಮೆಂಟೆಡ್ ರಿಯಾಲಿಟಿ ಫಿಲ್ಟರ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ. ಜೊತೆಗೆ ಈ ಫೋನ್ 3,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮೈಕ್ರೋ-USB ಪೋರ್ಟ್, 3.5mm ಆಡಿಯೋ ಜ್ಯಾಕ್, ಬ್ಲೂಟೂತ್ v4.1, Wi-Fi ಯನ್ನು ಬೆಂಬಲಿಸಲಿದೆ.

Poco M4 Pro 5G: ಪೋಕೋ M4 ಪ್ರೊ 5G ಸ್ಮಾರ್ಟ್​ಫೋನ್ ನ. 9ಕ್ಕೆ ಬಿಡುಗಡೆ: ಇದರ ವಿಶೇಷತೆಗೆ ಟೆಕ್ ಪ್ರಿಯರು ಫಿದಾ

Nokia T20: ಭಾರತದಲ್ಲಿ ನೋಕಿಯಾ ಸ್ಮಾರ್ಟ್​ಫೋನ್​ಗಿಲ್ಲ ಕಿಮ್ಮತ್ತು: ಇದೀಗ ಬಿಡುಗಡೆ ಮಾಡಿದೆ ಹೊಸ ಟ್ಯಾಬ್ಲೆಟ್

(JioPhone Next will be available for purchase starting today Here is How To Order Yourself)

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ