AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Narendra Modi: ಭಾರತದ ಸರಕುಗಳ ರಫ್ತು ಇದೇ ಮೊದಲ ಬಾರಿಗೆ 40,000 ಕೋಟಿ ಅಮೆರಿಕನ್​ ಡಾಲರ್

ಇದೇ ಮೊದಲ ಬಾರಿಗೆ ಭಾರತದ ಸರಕುಗಳ ರಫ್ತು 40,000 ಕೋಟಿ ಯುಎಸ್​ಡಿ ಮುಟ್ಟಿದೆ. ಈ ಬಗ್ಗೆ ವಿವರಗಳನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

Narendra Modi: ಭಾರತದ ಸರಕುಗಳ ರಫ್ತು ಇದೇ ಮೊದಲ ಬಾರಿಗೆ 40,000 ಕೋಟಿ ಅಮೆರಿಕನ್​ ಡಾಲರ್
ಪ್ರಧಾನಿ ನರೇಂದ್ರ ಮೋದಿ
TV9 Web
| Updated By: Srinivas Mata|

Updated on: Mar 23, 2022 | 11:35 AM

Share

ಇದೇ ಮೊದಲ ಬಾರಿಗೆ ಭಾರತದಿಂದ ಸರಕುಗಳ ರಫ್ತು 40,000 ಕೋಟಿ ಅಮೆರಿಕನ್​ ಡಾಲರ್​ನಷ್ಟು ಮಾಡಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಬುಧವಾರ ಹೇಳಿದ್ದಾರೆ. ಬಿಜೆಪಿ ನೇತೃತ್ವ ಸರ್ಕಾರದ ಸ್ವಾವಲಂಬಿ ಉತ್ಪಾದನೆಯ ಯೋಜನೆ ಆತ್ಮನಿರ್ಭರ್​ ಭಾರತಕ್ಕೆ ಪ್ರಮುಖ ಮೈಲುಗಲ್ಲು ಇದು ಎಂದು ಕರೆದಿದ್ದಾರೆ. 40 ಸಾವಿರ ಕೋಟಿ ಅಮೆರಿಕನ್ ಡಾಲರ್ ಅಂದರೆ, ಭಾರತದ ರೂಪಾಯಿ ಲೆಕ್ಕದಲ್ಲಿ 30,44,216 ಕೋಟಿ (30.44 ಲಕ್ಷ ಕೋಟಿ) ಆಗುತ್ತದೆ. ಟ್ವಿಟರ್​ನಲ್ಲಿ ಈ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ. ಭಾರತದ ಸೇವೆ ಮತ್ತು ತಯಾರಿಕೆ ಚಟುವಟಿಕೆ ಫೆಬ್ರವರಿಯಲ್ಲಿ ಸ್ಥಿರವಾಗಿದ್ದು, ಉಕ್ರೇನ್​ ಯುದ್ಧದ ಕಾರ್ಮೋಡದಲ್ಲಿ ಬಳಕೆ ಆಧಾರಿತ ಆರ್ಥಿಕತೆ ದರ ಬೆಳವಣಿಗೆ ಹಾಗೂ ಬೆಲೆಯ ಮಧ್ಯೆ ಈ ಬೆಳವಣಿಗೆ ಆಗಿದೆ.

ಭಾರತವು 400 ಬಿಲಿಯನ್ ಯುಎಸ್​ಡಿ ಸರಕುಗಳ ರಫ್ತಿನ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ ಮತ್ತು ಮೊದಲ ಬಾರಿಗೆ ಈ ಗುರಿಯನ್ನು ಸಾಧಿಸಿದೆ. ಈ ಯಶಸ್ಸಿಗಾಗಿ ನಮ್ಮ ರೈತರು, ನೇಕಾರರು, ಎಂಎಸ್‌ಎಂಇಗಳು, ತಯಾರಕರು, ರಫ್ತುದಾರರನ್ನು ನಾನು ಅಭಿನಂದಿಸುತ್ತೇನೆ ಎಂದು ಅವರು ಗಡುವಿನ ಒಂಬತ್ತು ದಿನಗಳ ಮುಂಚಿತವಾಗಿ ಗುರಿಯನ್ನು ತಲುಪಿರುವ ಗ್ರಾಫಿಕ್ಸ್ ಅನ್ನು ಪೋಸ್ಟ್ ಮಾಡಿದ್ದಾರೆ.

ಬ್ಲೂಮ್‌ಬರ್ಗ್ ನ್ಯೂಸ್ ಸಂಗ್ರಹಿಸಿದ ಎಲ್ಲ ಎಂಟು ಹೈ-ಫ್ರೀಕ್ವೆನ್ಸಿ ಸೂಚಕಗಳು ಕಳೆದ ತಿಂಗಳು ಚಟುವಟಿಕೆಯು ಸ್ಥಿರವಾಗಿದೆ ಎಂದು ತೋರಿಸಿದ್ದು, ಅಳತೆಯ ಮಾಪನದಂತೆ ‘ಅನಿಮಲ್ ಸ್ಪಿರಿಟ್ಸ್’ ಸತತ ಎಂಟನೇ ತಿಂಗಳು 5ರಷ್ಟಿದೆ. ಒಂದು-ತಿಂಗಳ ವಾಚನಗಳಲ್ಲಿ ಏರಿಳಿತವನ್ನು ಸುಗಮಗೊಳಿಸಲು ಅಳತೆಯು ಮೂರು ತಿಂಗಳ ತೂಕದ ಸರಾಸರಿಯನ್ನು ಬಳಸುತ್ತದೆ.

ಇದನ್ನೂ ಓದಿ: Mann ki Baat ಅಮೂಲ್ಯವಾದ ಕಲಾಕೃತಿಗಳನ್ನು ಮರಳಿ ತರುವಲ್ಲಿ ಭಾರತ ಯಶಸ್ವಿಯಾಗಿದೆ: ಪ್ರಧಾನಿ ನರೇಂದ್ರ ಮೋದಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ