PMVVY: ಹಿರಿಯ ನಾಗರಿಕರಿಗಾಗಿ ಇರುವ ಪ್ರಧಾನಮಂತ್ರಿ ವಯ ವಂದನ ಯೋಜನೆ ಅರ್ಹತೆ, ಅನುಕೂಲ ಮತ್ತಿತರ ಮಾಹಿತಿ

ಪ್ರಧಾನ ಮಂತ್ರು ವಯ ವಂದನ ಯೋಜನೆಯ ಅಡಿಯಲ್ಲಿ ಅನುಕೂಲ ಪಡೆಯುವುದಕ್ಕೆ ಅರ್ಹತೆ ಮೊದಲಾದ ವಿವರಗಳು ಈ ಲೇಖದಲ್ಲಿದೆ.

PMVVY: ಹಿರಿಯ ನಾಗರಿಕರಿಗಾಗಿ ಇರುವ ಪ್ರಧಾನಮಂತ್ರಿ ವಯ ವಂದನ ಯೋಜನೆ ಅರ್ಹತೆ, ಅನುಕೂಲ ಮತ್ತಿತರ ಮಾಹಿತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 23, 2022 | 6:03 PM

ನಿವೃತ್ತಿಯ ನಂತರ ಸ್ಥಿರವಾದ ಆದಾಯವನ್ನು ಹೊಂದುವುದು ಬಹಳ ಮುಖ್ಯ. 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ಹೂಡಿಕೆ ಮಾಡಲು ಮತ್ತು ಲಾಭದ ಖಾತ್ರಿ ದರವನ್ನು ಪಡೆಯಲು ಅವಕಾಶ ನೀಡುವಂಥ ಅನೇಕ ಪೆನ್ಷನ್ ಯೋಜನೆಗಳೇನೂ (Pension Schemes) ಮಾರುಕಟ್ಟೆಯಲ್ಲಿ ಇಲ್ಲ. ಅಂತಹ ಪೆನ್ಷನ್, ಅಂದರೆ ಸ್ಥಿರವಾದ ಯೋಜನೆಯ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ. 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ನಾಗರಿಕರಿಗೆ ಭಾರತ ಸರ್ಕಾರವು ಮಾರ್ಪಡಿಸಿದ ಪಿಂಚಣಿ ದರದೊಂದಿಗೆ ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯನ್ನು ಪರಿಚಯಿಸಿದೆ. ಭಾರತದ ಎಲ್​ಐಸಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸಂಪೂರ್ಣವಾಗಿ ಅಧಿಕಾರ ಹೊಂದಿದೆ. ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (PMVVY) ಭಾರತ ಸರ್ಕಾರವು 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಪ್ರತ್ಯೇಕವಾಗಿ ಘೋಷಿಸಿದ ಪೆನ್ಷನ್ ಯೋಜನೆಯಾಗಿದ್ದು, ಇದು 4ನೇ ಮೇ 2017ರಿಂದ 31 ಮಾರ್ಚ್ 2020ರ ವರೆಗೆ ಲಭ್ಯವಿತ್ತು. ಈ ಯೋಜನೆಯನ್ನು ಈಗ 31 ಮಾರ್ಚ್ 2023ರ ವರೆಗೆ ವಿಸ್ತರಿಸಲಾಗಿದೆ.

ಈ ಯೋಜನೆಯು 26/05/2020ರಿಂದ ಮೂರು ಹಣಕಾಸು ವರ್ಷಗಳವರೆಗೆ ಮಾರಾಟಕ್ಕೆ ಲಭ್ಯವಿರುತ್ತದೆ. ಅಂದರೆ 31 ಮಾರ್ಚ್ 2023 ರವರೆಗೆ. ಈ ಯೋಜನೆಯನ್ನು ಆಫ್‌ಲೈನ್‌ನಲ್ಲಿ ಮತ್ತು ಆನ್‌ಲೈನ್‌ನಲ್ಲಿ ಎಲ್​ಐಸಿಯಿಂದ www.licindia.inನಲ್ಲಿ ಖರೀದಿಸಬಹುದು. ಒಂದು ದೊಡ್ಡ ಮೊತ್ತದ ಖರೀದಿ ಬೆಲೆಯನ್ನು ಪಾವತಿಸುವ ಮೂಲಕ ಯೋಜನೆಯನ್ನು ಖರೀದಿಸಬಹುದು. ಪಿಂಚಣಿದಾರರು ಪಿಂಚಣಿ ಮೊತ್ತ ಅಥವಾ ಖರೀದಿ ಬೆಲೆಯನ್ನು ಆಯ್ಕೆ ಮಾಡಬಹುದು. ಖರೀದಿಯ ಸಮಯದಲ್ಲಿ, ಪಿಂಚಣಿದಾರರು ಮಾಸಿಕ/ತ್ರೈಮಾಸಿಕ/ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಪಿಂಚಣಿ ಮೋಡ್ ಅನ್ನು ಆಯ್ಕೆ ಮಾಡಬಹುದು.

ಮಾಸಿಕ ಮೋಡ್‌ಗೆ ಕನಿಷ್ಠ ಖರೀದಿ ಬೆಲೆ ರೂ. 1,62,162, ತ್ರೈಮಾಸಿಕ ಮೋಡ್‌ಗೆ ರೂ. 1,61,074, ಅರ್ಧ-ವಾರ್ಷಿಕಕ್ಕೆ ಅದೇ ರೂ. 1,59,574 ಮತ್ತು ವಾರ್ಷಿಕ ಮೋಡ್‌ಗೆ ರೂ. 1,56,658 ಆಗುತ್ತದೆ. ಈ ಯೋಜನೆಯಡಿ ಒಬ್ಬರು ಪಡೆಯಬಹುದಾದ ಗರಿಷ್ಠ ಪಿಂಚಣಿ ತಿಂಗಳಿಗೆ ರೂ. 9,250. ಪ್ರತಿ ತ್ರೈಮಾಸಿಕಕ್ಕೆ 27,750 ರೂ., ಅರ್ಧ ವರ್ಷಕ್ಕೆ 55,500 ಮತ್ತು ವರ್ಷಕ್ಕೆ ರೂ. 1,11,000.

ಪ್ರಯೋಜನಗಳು * ಯೋಜನೆಯು ವಾರ್ಷಿಕವಾಗಿ 2020-21ನೇ ಇಸವಿಗೆ ವಾರ್ಷಿಕ ಶೇ 7.40ರಷ್ಟು ಆದಾಯದ ಖಚಿತ ದರವನ್ನು ಒದಗಿಸುತ್ತದೆ ಮತ್ತು ನಂತರ ಪ್ರತಿ ವರ್ಷ ಬದಲಾವಣೆ ಆಗುತ್ತದೆ. 2021-22ರ ಹಣಕಾಸು ವರ್ಷಕ್ಕೆ ಯೋಜನೆಯು ಶೇ 7.40ರ ಖಚಿತವಾದ ಪಿಂಚಣಿ ಒದಗಿಸುತ್ತದೆ. ಮಾಸಿಕ ಲೆಕ್ಕದಲ್ಲಿ ಪಾವತಿಸಲಾಗುತ್ತದೆ. 31ನೇ ಮಾರ್ಚ್ 2022 ರವರೆಗೆ ಖರೀದಿಸಿದ ಎಲ್ಲ ಪಾಲಿಸಿಗಳಿಗೆ 10 ವರ್ಷಗಳ ಸಂಪೂರ್ಣ ಪಾಲಿಸಿ ಅವಧಿಗೆ ಈ ಖಚಿತವಾದ ಪಿಂಚಣಿ ದರವನ್ನು ಪಾವತಿಸಲಾಗುತ್ತದೆ. * ಖರೀದಿಯ ಸಮಯದಲ್ಲಿ ಪಿಂಚಣಿದಾರರು ಆಯ್ಕೆ ಮಾಡಿದ ಮಾಸಿಕ/ ತ್ರೈಮಾಸಿಕ/ ಅರ್ಧ-ವಾರ್ಷಿಕ/ ವಾರ್ಷಿಕ ಅವಧಿ ಪ್ರಕಾರ, 10 ವರ್ಷಗಳ ಪಾಲಿಸಿ ಅವಧಿಯಲ್ಲಿ ಪ್ರತಿ ಅವಧಿ ಅಂತ್ಯದಲ್ಲಿ ಪಿಂಚಣಿ ಪಾವತಿಸಲಾಗುತ್ತದೆ. * ಈ ಸ್ಕೀಮ್ ಜಿಎಸ್‌ಟಿಯಿಂದ ವಿನಾಯಿತಿ ಪಡೆದಿದೆ. * 10 ವರ್ಷಗಳ ಪಾಲಿಸಿ ಅವಧಿಯ ಅಂತ್ಯದವರೆಗೆ ಪಿಂಚಣಿದಾರರು ಬದುಕುಳಿದ ಮೇಲೆ ಖರೀದಿ ಬೆಲೆ ಮತ್ತು ಅಂತಿಮ ಪಿಂಚಣಿ ಕಂತುಗಳನ್ನು ಪಾವತಿಸಬೇಕಾಗುತ್ತದೆ. * ಮೂರು ಪಾಲಿಸಿ ವರ್ಷಗಳ ನಂತರ (ಲಿಕ್ವಿಡಿಟಿ ಅಗತ್ಯಗಳನ್ನು ಪೂರೈಸಲು) ಖರೀದಿ ಬೆಲೆಯ ಶೇ 75ರ ವರೆಗಿನ ಸಾಲವನ್ನು ಅನುಮತಿಸಲಾಗುತ್ತದೆ. ಸಾಲದ ಬಡ್ಡಿಯನ್ನು ಪಿಂಚಣಿ ಕಂತುಗಳಿಂದ ವಸೂಲಿ ಮಾಡಬೇಕು ಮತ್ತು ಕ್ಲೇಮ್ ಆದಾಯದಿಂದ ಸಾಲವನ್ನು ವಸೂಲಿ ಮಾಡಬೇಕು. * ಸ್ವಯಂ ಅಥವಾ ಸಂಗಾತಿಯ ಯಾವುದೇ ಗಂಭೀರ/ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ ನೀಡಲು ಅಕಾಲಿಕವಾಗಿ ಹಣ ಹಿಂಪಡೆಯುವುದಕ್ಕೆ ಈ ಯೋಜನೆಯು ಅನುಮತಿಸುತ್ತದೆ. ಅಂತಹ ಅಕಾಲಿಕ ನಿರ್ಗಮನದಲ್ಲಿ ಶೇ 98ರಷ್ಟು ಖರೀದಿ ಬೆಲೆಯನ್ನು ಮರುಪಾವತಿಸಲಾಗುತ್ತದೆ. * 10 ವರ್ಷಗಳ ಪಾಲಿಸಿ ಅವಧಿಯಲ್ಲಿ ಪಿಂಚಣಿದಾರರ ಮರಣದ ನಂತರ, ಫಲಾನುಭವಿಗೆ ಖರೀದಿ ಬೆಲೆಯನ್ನು ಪಾವತಿಸಲಾಗುತ್ತದೆ. * ಒಟ್ಟಾರೆ ಕುಟುಂಬಕ್ಕೆ ಗರಿಷ್ಠ ಪಿಂಚಣಿ ಮಿತಿ; ಕುಟುಂಬವು ಪಿಂಚಣಿದಾರ, ಅವರ ಸಂಗಾತಿ ಮತ್ತು ಅವಲಂಬಿತರನ್ನು ಒಳಗೊಂಡಿರುತ್ತದೆ. *ಖಾತ್ರಿಪಡಿಸಿದ ಬಡ್ಡಿ ಮತ್ತು ಗಳಿಸಿದ ನಿಜವಾದ ಬಡ್ಡಿ ಮತ್ತು ಆಡಳಿತಕ್ಕೆ ಸಂಬಂಧಿಸಿದ ವೆಚ್ಚಗಳ ನಡುವಿನ ವ್ಯತ್ಯಾಸದಿಂದಾಗಿ ಕೊರತೆಯನ್ನು ಭಾರತ ಸರ್ಕಾರವು ಸಬ್ಸಿಡಿ ಮಾಡುತ್ತದೆ ಮತ್ತು ನಿಗಮಕ್ಕೆ ಮರುಪಾವತಿ ಮಾಡುತ್ತದೆ.

ಕೆಲವು ಪ್ರಮುಖ ಸಂಗತಿಗಳು ಕನಿಷ್ಠ ಪ್ರವೇಶ ವಯಸ್ಸು: 60 ವರ್ಷಗಳು (ಪೂರ್ಣಗೊಂಡಿರಬೇಕು) ಗರಿಷ್ಠ ಪ್ರವೇಶ ವಯಸ್ಸು: ಯಾವುದೇ ಮಿತಿಯಿಲ್ಲ ಪಾಲಿಸಿ ಅವಧಿ: 10 ವರ್ಷಗಳು ಹೂಡಿಕೆ ಮಿತಿ: ಪ್ರತಿ ಹಿರಿಯ ನಾಗರಿಕರಿಗೆ 15 ಲಕ್ಷ ರೂಪಾಯಿ

ಇದನ್ನೂ ಓದಿ: Atal Pension Yojana: ಅಟಲ್ ಪೆನ್ಷನ್ ಯೋಜನೆ ಮೂಲಕ ಗಂಡ- ಹೆಂಡತಿಗೆ ಸಿಗಲಿದೆ 10,000 ರೂ. ತನಕ ತಿಂಗಳ ಪಿಂಚಣಿ

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!