ಎಐ ಕೈಮೀರುವ ಮುನ್ನ ವೇಗಕ್ಕೆ ಬ್ರೇಕ್ ಹಾಕಬೇಕು ಎಂದ ಆಂಥ್ರೋಪಿಕ್ ಸಿಇಒ; ಹೌದೆಂದ ಸ್ಯಾಮ್ ಆಲ್ಟ್​ಮನ್, ಇಲಾನ್ ಮಸ್ಕ್

ಕೃತಕ ಬುದ್ಧಿಮತ್ತೆಯನ್ನು ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂಬ ವಿಚಾರದಲ್ಲಿ ಟೆಕ್ ನೇತಾರರ ಮಧ್ಯೆ ಸಹಮತ ಏರ್ಪಟ್ಟಂತಿದೆ. ಎಐ ವೇಗಕ್ಕೆ ಕಡಿವಾಣ ಹಾಕದೇ ಹೋದರೆ ಮನುಷ್ಯರ ಸಂಗತಿಯೇ ನಿರ್ನಾಮ ಆಗುತ್ತದೆ ಎಂದು ಮಾಜಿ ಎಐ ವಿಜ್ಞಾನಿ ಹೇಳಿದ್ದು ಚರ್ಚೆಯ ಸರಕಾಗಿದೆ. ಆಂಥ್ರೋಪಿಕ್, ಓಪನ್ ಎಐ, ಸ್ಪೇಸ್​ಎಕ್ಸ್ ಸಿಇಒಗಳಾದ ಡೆರಿಯೋ ಅಮೋಡೈ, ಸ್ಯಾಮ್ ಆಲ್ಟ್​ಮನ್ ಮತ್ತು ಇಲಾನ್ ಮಸ್ಕ್ ಈ ಅನಿಸಿಕೆ ಒಪ್ಪಿದ್ದಾರೆ.

ಎಐ ಕೈಮೀರುವ ಮುನ್ನ ವೇಗಕ್ಕೆ ಬ್ರೇಕ್ ಹಾಕಬೇಕು ಎಂದ ಆಂಥ್ರೋಪಿಕ್ ಸಿಇಒ; ಹೌದೆಂದ ಸ್ಯಾಮ್ ಆಲ್ಟ್​ಮನ್, ಇಲಾನ್ ಮಸ್ಕ್
ಆಂಥ್ರೋಪಿಕ್ ಸಿಇಒ ಡೆರಿಯೋ ಅಮೋಡೈ
Image Credit source: Getty Images

Updated on: Sep 13, 2026 | 4:24 PM

ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 13: ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸುತ್ತಿರುವ ವೇಗಕ್ಕೆ ಕಡಿವಾಣ ಹಾಕದೇ ಹೋದರೆ ಮನುಷ್ಯರಿಗೆ ಉಳಿಗಾಲ ಇಲ್ಲ ಎಂದು ಮಾಜಿ ಆಂಥ್ರೋಪಿಕ್ ವಿಜ್ಞಾನಿ ಜೇಕಬ್ ಕಾಕ್ಸನ್ ಅವರ ಅನಿಸಿಕೆಯನ್ನು ಕಂಪನಿ ಸಿಇಒ ಡೆರಿಯೋ ಅಮೋಡೈ ಕೂಡ ಪುನರುಚ್ಚರಿಸಿದ್ದಾರೆ. ಇವರ ಅಭಿಪ್ರಾಯಕ್ಕೆ ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​ಮನ್, ಸ್ಪೇಸ್ ಎಕ್ಸ್ ಸಿಇಒ ಇಲಾನ್ ಮಸ್ಕ್ ಕೂಡ ಧ್ವನಿಗೂಡಿಸಿದ್ದಾರೆ.

ಎಐ ತಂತ್ರಜ್ಞಾನದ ತೀವ್ರಗತಿಯ ಅಭಿವೃದ್ಧಿಯ ವೇಗವನ್ನು ಕೊಂಚ ತಗ್ಗಿಸಬೇಕು ಎಂದು ಡೆರಿಯೊ ಅಮೋಡೈ ಅವರು ನೀಡಿದ ಈ ಕರೆಯನ್ನು ಓಪನ್‌ಎಐ (OpenAI) ಸಿಇಒ ಸ್ಯಾಮ್ ಆಲ್ಟ್‌ಮನ್ ಹಾಗೂ ‘ಎಕ್ಸ್’ ಸಂಸ್ಥಾಪಕ ಇಲಾನ್ ಮಸ್ಕ್ ಬೆಂಬಲಿಸಿದ್ದಾರೆ.

ಸುರಕ್ಷತೆಗೆ ಹೆಚ್ಚಿನ ಆದ್ಯತೆ: ಎಐ ಮಾದರಿಗಳ ಕ್ಷಿಪ್ರ ಬೆಳವಣಿಗೆಯಿಂದಾಗಿ ಮಾನವ ನಿಯಂತ್ರಣ ತಪ್ಪುವ ಮತ್ತು ಸೈಬರ್ ದಾಳಿಗಳಂತಹ ಅಪಾಯ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಸುರಕ್ಷತಾ ಕ್ರಮಗಳನ್ನು ಬಲಪಡಿಸಲು ಎಐ ಅಭಿವೃದ್ಧಿಗೆ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಅಮೋಡೈ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ನೀವು ಆಡಿದ ಮಾತನ್ನು ಫೋನ್‌ ಅಕ್ಷರಗಳಾಗಿ ಹೇಗೆ ಬದಲಿಸುತ್ತದೆ?

ಎಐಗೆ ನಿಯಂತ್ರಣ ಹಾಕಲು ಅಮೋಡೈ ತಿಳಿಸಿದ ಮೂರು ಹಂತದ ಯೋಜನೆಗಳು ಈ ಕೆಳಕಂಡಂತಿವೆ:

  1. ಎಐ ಸಂಸ್ಥೆಗಳಲ್ಲಿ ಸ್ವತಂತ್ರ ಬಾಹ್ಯ ಮೌಲ್ಯಮಾಪಕರಿಗೆ (Independent evaluators) ಉದ್ಯೋಗಿಗಳಂತೆಯೇ ಪ್ರವೇಶಾವಕಾಶ ನೀಡುವುದು.
  2. ಪ್ರಜಾಪ್ರಭುತ್ವ ರಾಷ್ಟ್ರಗಳ ಎಐ ಕಂಪನಿಗಳ ನಡುವೆ ಸುರಕ್ಷತಾ ನಿಯಮಗಳ ಸಮನ್ವಯತೆ ಸಾಧಿಸುವುದು.
  3. ಜಾಗತಿಕ ಮಟ್ಟದಲ್ಲಿ ಅಪಾಯಕಾರಿ ಎಐ ಬಳಕೆಯನ್ನು ತಡೆಯಲು ಅಂತರರಾಷ್ಟ್ರೀಯ ಒಪ್ಪಂದ ಮಾಡಿಕೊಳ್ಳುವುದು.

ಸ್ಯಾಮ್ ಆಲ್ಟ್‌ಮನ್ ಬೆಂಬಲ: ಆಂಥ್ರೋಪಿಕ್ ಸಿಇಒ ನಿರ್ಧಾರವನ್ನು ಒಪ್ಪಿಕೊಂಡಿರುವ ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್, “ನಾವು ಎಐ ಅಭಿವೃದ್ಧಿಯ ವೇಗವನ್ನು ನಿಯಂತ್ರಿಸಬೇಕಿದೆ. ನಮ್ಮ ಸಂಸ್ಥೆಯಲ್ಲೂ ಸ್ವತಂತ್ರ ಬಾಹ್ಯ ಪರಿಶೀಲಕರನ್ನು (Third-party evaluators) ನೇಮಿಸಿಕೊಳ್ಳಲು ನಿರ್ಧರಿಸಿದ್ದೇವೆ” ಎಂದು ತಿಳಿಸಿದ್ದಾರೆ.

ಸ್ಯಾಮ್ ಆಲ್ಟ್​ಮನ್ ಟ್ವೀಟ್

ಇಲಾನ್ ಮಸ್ಕ್ ಸಹಮತ: ಡೆರಿಯೊ ಅವರ ಈ ಕರೆಯನ್ನು ಎಕ್ಸ್ (X)ನಲ್ಲಿ ಬೆಂಬಲಿಸಿರುವ ಇಲಾನ್ ಮಸ್ಕ್, “ಡೆರಿಯೊ ಹೇಳುತ್ತಿರುವುದು ಸರಿಯಾಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಮಾನವರನ್ನು ನುಂಗಿ ನೀರು ಕುಡಿಯುತ್ತದಾ ಎಐ? ಓಪನ್​ಎಐ, ಆಂಥ್ರೋಪಿಕ್ ರಿಸರ್ಚರ್​ನಿಂದ ಭಯಾನಕ ಸತ್ಯ ಬೆಳಕಿಗೆ

ಮಾಜಿ ವಿಜ್ಞಾನಿ ಜೇಕಬ್ ಕಾಕ್ಸನ್ ಅವರ ಗಂಭೀರ ಎಚ್ಚರಿಕೆ

ಎಐ ತಂತ್ರಜ್ಞಾನವನ್ನು ಲಘುವಾಗಿ ಭಾವಿಸಬೇಡಿ ಎಂದು ಓಪನ್ ಎಐ ಮತ್ತು ಆಂಥ್ರೋಪಿಕ್​ನ ಮಾಜಿ ವಿಜ್ಞಾನಿ ಜೇಕಬ್ ಕಾಕ್ಸನ್ ಎಚ್ಚರಿಸಿದ್ದಾರೆ. ‘ಕೃತಕ ಬುದ್ಧಿಮತ್ತೆ ಬಹಳ ಬೇಗ ಅತಿಮಾನುಷ ಸಿಸ್ಟಂಗಳಾಗುತ್ತವೆ. ಯಾವುದನ್ನು ಬೇಕಾದರೂ ಹ್ಯಾಕ್ ಮಾಡಬಲ್ಲುವು, ಯಾವುದೇ ಕ್ಷೇತ್ರದಲ್ಲೂ ಕ್ಷಣ ಮಾತ್ರದಲ್ಲಿ ಕ್ರಾಂತಿ ತರಬಲ್ಲುದು; ನೈಜ ಶಕ್ತಿ ಮತ್ತು ಸಂಪನ್ಮೂಲಗಳನ್ನು ಗಳಿಸಬಲ್ಲುವು, ನಾವೆಲ್ಲಾ ಇದನ್ನು ಕಂಡಿದ್ದೇವೆ’ ಎಂದು ಜೇಕಬ್ ಕಾಕ್ಸನ್ ತಿಳಿಸಿದ್ದಾರೆ.

ಎಐ ಬೆಳವಣಿಗೆ ಇದೇ ವೇಗದಲ್ಲಿ ಸಾಗಿದರೆ ಮನುಷ್ಯರೇ ನಿರ್ನಾಮವಾಗಿಬಿಡುತ್ತಾರೆ ಎಂದು ಎಚ್ಚರಿಸಿರುವ ಅವರು, ಓಪನ್ ಎಐಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಇದರ ಬೆನ್ನಲ್ಲೇ ಈಗ ಎಐ ಟೆಕ್ ಕ್ಷೇತ್ರದ ನೇತಾರರು ತಮ್ಮ ತಪ್ಪಿನ ನಡೆಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳಲು ಮುಂದಾಗಿರುವುದು ಕುತೂಹಲದ ಸಂಗತಿ.

ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಐ ವಲಯದಲ್ಲಿ ಭದ್ರತೆ ಮತ್ತು ಸುರಕ್ಷತಾ ತಪಾಸಣೆಗಳನ್ನು ಬಲಪಡಿಸಲು ಪ್ರಮುಖ ಎಐ ಸಂಸ್ಥೆಗಳು ಜಂಟಿಯಾಗಿ ಹೆಜ್ಜೆ ಇಡುತ್ತಿರುವುದು ತಂತ್ರಜ್ಞಾನ ವಲಯದಲ್ಲಿ ಗಮನ ಸೆಳೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:14 pm, Sun, 13 September 26

Loading...
Unable to load recommendations.
Follow Us