ಉಳಿತಾಯ ಖಾತೆಯಲ್ಲಿ ಠೇವಣಿ ಮಿತಿ ಎಷ್ಟು? ಆದಾಯ ತೆರಿಗೆ ಇಲಾಖೆ ನಿಯಮದಲ್ಲಿ ಏನಿದೆ?

ಆದಾಯ ತೆರಿಗೆ ಇಲಾಖೆಯು ಉಳಿತಾಯ ಖಾತೆಯಲ್ಲಿನ ಅತಿಯಾದ ನಗದು ಠೇವಣಿ, ಕ್ರೆಡಿಟ್ ಕಾರ್ಡ್ ಪಾವತಿಗಳು, ಆಸ್ತಿಗಳ ಖರೀದಿ ಅಥವಾ ಹೂಡಿಕೆಗಳ ಮೇಲೆ ಗಮನ ಹರಿಸುತ್ತವೆ. ಒಂದು ವೇಳೆ ಐಟಿಆರ್‌ನಲ್ಲಿ ಆದಾಯವನ್ನು ಸರಿಯಾಗಿ ತೋರಿಸಬೇಕು, ಇದರಿಂದ ಸಮಸ್ಯೆಗಳಾಗುವ ಸಾಧ್ಯತೆಯಿದೆ. ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ, ಉಳಿತಾಯ ಖಾತೆಯಲ್ಲಿನ ಠೇವಣಿ ಮೊತ್ತವು 10 ಲಕ್ಷ ರೂಗಿಂತ ಮೀರಿದರೆ ಆದಾಯ ತೆರಿಗೆ ಇಲಾಖೆಯು ಪರಿಶೀಲನೆಗೆ ಒಳಪಡಿಸುತ್ತವೆ.

ಉಳಿತಾಯ ಖಾತೆಯಲ್ಲಿ ಠೇವಣಿ ಮಿತಿ ಎಷ್ಟು? ಆದಾಯ ತೆರಿಗೆ ಇಲಾಖೆ ನಿಯಮದಲ್ಲಿ ಏನಿದೆ?
ಸಾಂದರ್ಭಿಕ ಚಿತ್ರ
Image Credit source: Getty Images

Updated on: Oct 06, 2026 | 10:10 PM

ಮುಖ್ಯಾಂಶಗಳು

  • ಪ್ರತಿಯೊಬ್ಬರ ಬಳಿ ಉಳಿತಾಯ ಖಾತೆ ಇದ್ದೆ ಇರುತ್ತದೆ
  • ಉಳಿತಾಯ ಖಾತೆಗೆ ವಾರ್ಷಿಕವಾಗಿ 10 ಲಕ್ಷ ರೂ ನಗದು ಠೇವಣಿ ಮಾಡಬಹುದು
  • 50,000 ರೂ ಮೇಲ್ಪಟ್ಟ ನಗದು ಠೇವಣಿ ಮಾಡುತ್ತಿದ್ದರೆ ಪಾನ್ ಕಾರ್ಡ್ ಕಡ್ಡಾಯವಾಗಿ ಬೇಕು

ಪ್ರತಿಯೊಬ್ಬರ ಬಳಿ ಉಳಿತಾಯ ಖಾತೆ ಇದ್ದೆ ಇರುತ್ತದೆ. ಈ ಉಳಿತಾಯ ಖಾತೆಗೆ (saving account) ಎಷ್ಟು ಬೇಕಾದ್ರೂ ಹಣ ಠೇವಣಿ ಮಾಡ್ಬಹುದೆಂದು ಎಲ್ಲರೂ ಅಂದುಕೊಳ್ತಾರೆ. ಆದರೆ ಉಳಿತಾಯ ಖಾತೆಯಲ್ಲಿನ ವಾರ್ಷಿಕ ನಗದು ಠೇವಣಿ ಮಿತಿಯ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ನಿಮ್ಮ ಹೆಸರಿನಲ್ಲಿರುವ ಉಳಿತಾಯ ಖಾತೆಗೆ ವಾರ್ಷಿಕವಾಗಿ 10 ಲಕ್ಷ ರೂ ನಗದು ಠೇವಣಿ ಮಾತ್ರ ಮಾಡಲು ಅವಕಾಶವಿದೆ. ಆದರೆ ಈ ಠೇವಣಿ ಮೊತ್ತವು ಮಿತಿ ಮೀರಿದರೆ ಬ್ಯಾಂಕ್ ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡುತ್ತದೆ.

ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಠೇವಣಿ ಮಾಡ್ಬಹುದು?

  • ಹಣಕಾಸು ವರ್ಷದಲ್ಲಿ ಉಳಿತಾಯ ಖಾತೆಗೆ 10 ಲಕ್ಷಕ್ಕೂ ಹೆಚ್ಚಿನ ವಾರ್ಷಿಕ ಠೇವಣಿ ಮಾಡಿದರೆ ತೆರಿಗೆ ಇಲಾಖೆ ಪರಿಶೀಲನೆಗೆ ಒಳಪಡಿಸುತ್ತದೆ.
  • ಉಳಿತಾಯ ಖಾತೆಗೆ ನೀವೇನಾದ್ರೂ 50,000 ರೂ ಮೇಲ್ಪಟ್ಟ ನಗದು ಠೇವಣಿ ಮಾಡುತ್ತಿದ್ದರೆ ಪಾನ್ ಕಾರ್ಡ್ ಕಡ್ಡಾಯವಾಗಿದೆ.
  • ಡಿಜಿಟಲ್ ಅಥವಾ ಚೆಕ್ ಮೂಲಕ ಮಾಡುವ ಜಮೆಗಳಿಗೆ ಈ ನಗದು ಮಿತಿ ಅನ್ವಯವಾಗುವುದಿಲ್ಲ.
  • ಠೇವಣಿ ಮಾಡುವ ಮೊತ್ತಕ್ಕೆ ದಾಖಲೆ ತೋರಿಸುವುದು ಬಹಳ ಮುಖ್ಯ.

ಇದನ್ನೂ ಓದಿ: ಸುಕನ್ಯಾ ಸಮೃದ್ದಿ, ಕೆವಿಪಿ, ಎನ್​ಎಸ್​ಸಿ, ಪಿಪಿಎಫ್, ಟೈಮ್ ಡೆಪಾಸಿಟ್ ಸ್ಕೀಮ್​ಗಳಿಂದ ಸಿಗುವ ಲಾಭವೆಷ್ಟು? ಇಲ್ಲಿದೆ ಲೆಕ್ಕಾಚಾರ

  • ಉಳಿತಾಯ ಖಾತೆಯಲ್ಲಿ ಠೇವಣಿ ಮಾಡುವ ಹಣಕ್ಕೆ ಸರಿಯಾದ ದಾಖಲೆ ಅಥವಾ ಆದಾಯದ ಮೂಲವಿಲ್ಲದಿದ್ದರೆ ಮಾತ್ರ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಬರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 10:09 pm, Tue, 6 October 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us