Sri Lanka Forex Crisis: ವಿದೇಶೀ ವಿನಿಮಯದ ಗಂಭೀರ ಬಿಕ್ಕಟ್ಟಲ್ಲಿ ಶ್ರೀಲಂಕಾ; ಸಾಲ ಕಟ್ಟೋದು ತಪ್ಪಿಸಲ್ಲ ಎಂದ ವಿತ್ತ ಸಚಿವರು

| Updated By: Srinivas Mata

Updated on: Dec 11, 2021 | 6:15 PM

ಶ್ರೀಲಂಕಾವು ವಿದೇಶೀ ವಿನಿಮಯ ಮೀಸಲು ಬಿಕ್ಕಟ್ಟನ್ನು ಎದುರಿಸುತ್ತಿದ್ದು, 2022ರಲ್ಲಿ ಯಾವುದೇ ಕಾರಣಕ್ಕೂ ಪಾವತಿಯನ್ನು ತಪ್ಪಿಸುವುದಿಲ್ಲ ಎಂದು ದೇಶದ ಹಣಕಾಸು ಸಚಿವರು ಖಾತ್ರಿ ನೀಡಿದ್ದಾರೆ.

Sri Lanka Forex Crisis: ವಿದೇಶೀ ವಿನಿಮಯದ ಗಂಭೀರ ಬಿಕ್ಕಟ್ಟಲ್ಲಿ ಶ್ರೀಲಂಕಾ; ಸಾಲ ಕಟ್ಟೋದು ತಪ್ಪಿಸಲ್ಲ ಎಂದ ವಿತ್ತ ಸಚಿವರು
ಬಸಿಲ್ ರಾಜಪಕ್ಸ
Follow us on

ಶ್ರೀಲಂಕಾಗೆ ಗಂಭೀರ ಸ್ವರೂಪದ ವಿದೇಶೀ ವಿನಿಮಯ ಬಿಕ್ಕಟ್ಟು ಇದೆ. ಆದರೆ 2022ನೇ ಇಸವಿಯಲ್ಲಿ ಸಾಲ ಮರುಪಾವತಿಯನ್ನು ತಪ್ಪಿಸುವುದಿಲ್ಲ ಎಂದು ಹಣಕಾಸು ಸಚಿವರಾದ ಬಸಿಲ್ ರಾಜಪಕ್ಸ ಅಲ್ಲಿನ ಸಂಸತ್​ನಲ್ಲಿ ಖಾತ್ರಿ ನೀಡಿದ್ದಾರೆ. 2022ರ ಬಜೆಟ್​ ಮುಕ್ತಾಯ ಭಾಷಣದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ (IMF) ಬಳಿ ಇದಕ್ಕಾಗಿ ನೆರವು ಕೇಳುವುದಿಲ್ಲ ಎಂದು ಹೇಳಿದ್ದಾರೆ. “ನಾವು ಪಾವತಿ ಮಾಡಬೇಕಾದ ಪ್ರತಿ ಡಾಲರ್​ ಅನ್ನು ನೀಡುತ್ತೇವೆ ಎಂದು ಖಾತ್ರಿಪಡಿಸುತ್ತೇವೆ,” ಎಂಬುದಾಗಿ ಜನಪ್ರತಿನಿಧಿಗಳಿಗೆ ಹೇಳಿದ್ದಾರೆ. ದೇಶವು ಮುಖ್ಯವಾದ ವಿದೇಶೀ ವಿನಿಮಯ ಮೀಸಲಿನ ಬಿಕ್ಕಟ್ಟನ್ನು ಎದುರಿಸುತ್ತಿತ್ತು. “ನಾವು ಗಂಭೀರವಾದ ಸನ್ನಿವೇಶದಲ್ಲಿ ಇದ್ದೇವೆ ಎಂದು ನನ್ನ ಬಜೆಟ್​ ಭಾಷಣದಲ್ಲಿ ಒಪ್ಪಿಕೊಂಡಿದ್ದೇನೆ,” ಎಂದಿದ್ದಾರೆ. ವಿಶ್ಲೇಷಕರು ಹೇಳಿದಂತೆ, ದ್ವೀಪರಾಷ್ಟ್ರದ ವಿದೇಶೀ ವಿನಿಮಯವು 1,587 ಮಿಲಿಯನ್ ಅಥವಾ ಒಂದು ತಿಂಗಳ ಆಮದಿಗೆ ಇಳಿಕೆ ಆಗಿದೆ.

ರಾಜಪಕ್ಸ ಮಾತನಾಡಿ, 2022ರ ಜನವರಿಯಲ್ಲಿ ಸರ್ಕಾರವು 500 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ಪಾವತಿ ಮಾಡಬೇಕು ಮತ್ತು ಇನ್ನೊಂದು ಬಿಲಿಯನ್ ಡಾಲರ್ಸ್ ಪಾವತಿ ಜೂನ್ ಹೊತ್ತಿಗೆ ಆಗಬೇಕು. “ಪಾವತಿಗೆ ನಮ್ಮ ಬಳಿ ಯೋಜನೆ ಇದೆ,” ಎಂದು ವಿರೋಧ ಪಕ್ಷದ ನಾಯಕರು ಕೇಳಿದ ಬ್ಯಾಲೆನ್ಸ್ ಆಫ್ ಪೇಮೆಂಟ್ ಕುರಿತಾದ ಪ್ರಶ್ನೆಗೆ ಅವರು ಉತ್ತರ ನೀಡಿದರು. ಆಮದು ಕಡಿಮೆ ಮಾಡಿಕೊಳ್ಳುವ ಮೂಲಕ ಮೀಸಲು ನಿಧಿಯನ್ನು ನಿಧಾನವಾಗಿ ಕಟ್ಟುತ್ತಾ ಸಾಗುವುದಾಗಿ ಹೇಳಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ ನೆರವು ಕೇಳುವ ಪರಿಸ್ಥಿತಿ ಇಲ್ಲ ಎಂದು ಅವರು ಹೇಳಿದ್ದಾರೆ. ಆಗಿಂದಾಗ್ಗೆ ನಡೆಯುವ ಪರಿಶೀಲನೆಗಾಗಿ ಮಾತ್ರ ಐಎಂಎಫ್ ತಂಡವು ಕೊಲೊಂಬೊದಲ್ಲಿ ಇತ್ತು. “ನಾವು ಅವರ ಸದಸ್ಯರು ಮತ್ತು ಅವರ ಕೆಲಸಗಳು ಕೆಲವನ್ನು ಮಾಡುತ್ತೇವೆ,” ಎಂದಿದ್ದಾರೆ ರಾಜಪಕ್ಸ. 70 ವರ್ಷದ ಬಸಿಲ್ ರಾಜಪಕ್ಸ ಶ್ರೀಲಂಕಾದ ಹಣಕಾಸು ಸಚಿವರಾದರೆ, 76 ವರ್ಷದ ಮಹಿಂದ ರಾಜಪಕ್ಸ ಶ್ರೀಲಂಕಾದ ಪ್ರಧಾನಿ ಹುದ್ದೆಯಲ್ಲಿದ್ದಾರೆ. ಇನ್ನು 72 ವರ್ಷದ ಗೊಟಬಯ ರಾಜಪಕ್ಸ ರಾಷ್ಟ್ರಾಧ್ಯಕ್ಷ ಹುದ್ದೆಯಲ್ಲಿದ್ದಾರೆ. ​

ಇದನ್ನೂ ಓದಿ: ವಿದೇಶೀ ವಿನಿಮಯ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದಂತೆ ಆಹಾರ ತುರ್ತುಸ್ಥಿತಿ ಘೋಷಿಸಿದ ಶ್ರೀಲಂಕಾ