Startup India: ಹೊಸ ಉದ್ಯಮಿಗಳಿಗೆ ಕನಸಿನ ಉದ್ಯಮ ಆರಂಭಿಸಲು ಸರ್ಕಾರದಿಂದ ಸಿಗಲಿದೆ ಸೌಲಭ್ಯ, ಅರ್ಜಿ ಸಲ್ಲಿಸುವುದು ಹೇಗೆ?

|

Updated on: Jan 12, 2025 | 10:59 AM

ಭಾರತ ಸರ್ಕಾರವು ಈ ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಯು ಪ್ರಮುಖವಾಗಿ ದೇಶದಲ್ಲಿ ಹೊಸದಾಗಿ ಉದ್ಯಮವನ್ನು ಆರಂಭಿಸಲು ಬಯಸುವವರಿಗೆ ಅವಕಾಶವನ್ನು ಸೃಷ್ಟಿಸುವ ಮತ್ತು ದೇಶದಲ್ಲಿ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಆರಂಭ ಮಾಡಿದ ಯೋಜನೆಯಾಗಿದೆ. ನವರಿ 16, 2016 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಟಾರ್ಟ್ಅಪ್ ಇಂಡಿಯಾ ಯೋಜನೆಯನ್ನು ಆರಂಭ ಮಾಡಿದ್ದಾರೆ.

Startup India: ಹೊಸ ಉದ್ಯಮಿಗಳಿಗೆ ಕನಸಿನ ಉದ್ಯಮ ಆರಂಭಿಸಲು ಸರ್ಕಾರದಿಂದ ಸಿಗಲಿದೆ ಸೌಲಭ್ಯ, ಅರ್ಜಿ ಸಲ್ಲಿಸುವುದು ಹೇಗೆ?
ಸ್ಟಾರ್ಟ್​ಅಪ್
Image Credit source: Navi
Follow us on

ಎಲ್ಲರಿಗೂ ತಮ್ಮದೇ ಸ್ವಂತ ಉದ್ಯಮ ಆರಂಭಿಸುವ ಕನಸಿರುತ್ತದೆ, ಈ ಕನಸನ್ನು ನನಸು ಮಾಡಲು ಕೇಂದ್ರ ಸರ್ಕಾರವು ಸ್ಟಾರ್ಟ್​ ಅಪ್ ಇಂಡಿಯಾ(Startup India) ಯೋಜನೆಯನ್ನು ಆರಂಭಿಸಿದೆ.  ಸ್ಟಾರ್ಟ್‌ಅಪ್‌ ಇಂಡಿಯಾ ಅಭಿಯಾನದ ಅಡಿಯಲ್ಲಿ ಸರ್ಕಾರವು ಇದುವರೆಗೆ ದೇಶದ ನೂರಾರು ಜನರಿಗೆ ಸಾಲವನ್ನು ವಿತರಿಸಿದೆ ಮತ್ತು ಅದು ಕೂಡ ಅತ್ಯಂತ ಕಡಿಮೆ ಬಡ್ಡಿದರದಲ್ಲಿ. ನೀವು ಸ್ವಂತ ಉದ್ಯಮದಲ್ಲಿ ಮುಂದೆ ಸಾಗಲು ಬಯಸುವ ಆಲೋಚನೆಯನ್ನು ಹೊಂದಿದ್ದರೆ ಮತ್ತು ಹಣದ ಕೊರತೆಯಿಂದಾಗಿ ಅದನ್ನು ಮಾಡಲು ಸಾಧ್ಯವಾಗದಿದ್ದರೆ, ಇಂದು ನಾವು ನಿಮಗೆ ಸರ್ಕಾರದಿಂದ ಅಗ್ಗದ ದರದಲ್ಲಿ ಸಾಲವನ್ನು ತೆಗೆದುಕೊಳ್ಳುವ ಸಂಪೂರ್ಣ ವಿಧಾನವನ್ನು ಹೇಳುತ್ತೇವೆ.

ಸ್ಟಾರ್ಟ್ಅಪ್ ಇಂಡಿಯಾ ಅಡಿಯಲ್ಲಿ, ಸರ್ಕಾರವು ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವವರಿಗೆ ನಿಯಮಿತ ಹಣವನ್ನು ಒದಗಿಸುತ್ತದೆ. ಸ್ಟಾರ್ಟಪ್ ಇಂಡಿಯಾ ಯೋಜನೆಯು ಹೊಸದಲ್ಲ, ಆದರೆ ಜನವರಿ 16, 2016 ರಂದು ಇದನ್ನು ಪ್ರಾರಂಭಿಸಿತು. ಇದರ ಅಡಿಯಲ್ಲಿ, ಸ್ಟಾರ್ಟಪ್‌ಗಳಿಗೆ 3 ವರ್ಷಗಳವರೆಗೆ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ.

ಇದರಲ್ಲಿ ಸ್ಟಾರ್ಟಪ್ ನಡೆಸಲು ಹಣ ಮಾತ್ರವಲ್ಲದೆ ತಜ್ಞರ ಸಹಾಯವನ್ನೂ ನೀಡಲಾಗುತ್ತದೆ. ಸ್ಟಾರ್ಟಪ್‌ಗಳಿಗಾಗಿ ಸಂಗ್ರಹಿಸಿದ ನಿಧಿಯ ಮೇಲೆ ತೆರಿಗೆ ವಿನಾಯಿತಿಯೂ ಇದೆ ಮತ್ತು 3 ವರ್ಷಗಳವರೆಗೆ ಗಳಿಸಿದ ಲಾಭವನ್ನು ತೆರಿಗೆ ನಿವ್ವಳದಿಂದ ಹೊರಗಿಡಲಾಗುತ್ತದೆ.

ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲಿಗೆ ಸ್ಟಾರ್ಟ್‌ಅಪ್ ಇಂಡಿಯಾ ವೆಬ್‌ಸೈಟ್‌ಗೆ ಹೋಗಿ ಮತ್ತು ಫಾರ್ಮ್ ಅನ್ನು ಭರ್ತಿ ಮಾಡಿ.
  • ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಒಂದು ತಿಂಗಳು ಕಾಯಿರಿ ಇದರಿಂದ ನೀವು DPIIT ನಿಂದ ಪ್ರಮಾಣಪತ್ರವನ್ನು ಪಡೆಯುತ್ತೀರಿ.
  • ಪ್ರಮಾಣಪತ್ರವನ್ನು ಸ್ವೀಕರಿಸದಿದ್ದರೆ ಕೂಲಿಂಗ್ ಅವಧಿಯವರೆಗೆ ಕಾದು ನಂತರ ಅಪ್ಲೇ ಮಾಡಿ, ಈ ಪ್ರಮಾಣಪತ್ರವಿಲ್ಲದೆ ನೀವು ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
  • ಪ್ರಮಾಣಪತ್ರವನ್ನು ಪಡೆದ ನಂತರ, ನಿಮ್ಮ ಸ್ಟಾರ್ಟ್‌ಅಪ್ ಇಂಡಿಯಾ ಖಾತೆಯನ್ನು ಸೀಡ್ ಫಂಡ್ ಇಂಡಿಯಾದೊಂದಿಗೆ ಲಿಂಕ್ ಮಾಡಿ.
  • ಇಲ್ಲಿ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ನೀವು 3 ಇನ್ಕ್ಯುಬೇಟರ್ಗಳನ್ನು ಆಯ್ಕೆ ಮಾಡಬಹುದು.
  • ನಿಮ್ಮ ಸಾಲವನ್ನು ಅನುಮೋದಿಸಿದ ನಂತರ, ಉತ್ತಮ ವಕೀಲರ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಸಹಿ ಮಾಡಿ.
  • ಒಮ್ಮೆ ನಿಮ್ಮ ಸಾಲವನ್ನು ಸ್ಟಾರ್ಟ್‌ಅಪ್ ಇಂಡಿಯಾ ಅಡಿಯಲ್ಲಿ ಅನುಮೋದಿಸಿದರೆ, ಸರ್ಕಾರವು 5 ಪರ್ಸೆಂಟ್ ಬಡ್ಡಿಗೆ ಸಾಲವನ್ನು ನೀಡಿದರೂ, ಅನೇಕ ಸಂದರ್ಭಗಳಲ್ಲಿ ಇದು ಹೆಚ್ಚಾಗಿರಬಹುದು. ಆದ್ದರಿಂದ, ನೀವು ಚೌಕಾಶಿ ಮಾಡುವ ಮೂಲಕ ಈ ದರವನ್ನು ಕಡಿಮೆ ಮಾಡಬಹುದು. ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ ಸಾಲ ಮರುಪಾವತಿಯ ಅವಧಿಯು ಚಿಕ್ಕದಾಗಿದೆ.

ಇಂಟರ್‌ ಮಿನಿಸ್ಟ್ರಿಯಲ್‌ ಬೋರ್ಡ್‌ ಪ್ರಮಾಣಪತ್ರ ಹೊಂದಿರೋ ಸ್ಟಾರ್ಟ್‌ಅಪ್‌ಗಳು ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಗೆ ಶೇರ್‌ಗಳನ್ನು ಮಾರಾಟ ಮಾಡಿ ಗಳಿಸುವ 10ಕೋಟಿ ರೂ. ತನಕದ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.

ಸ್ಟಾರ್ಟ್‌ಅಪ್‌ ಪ್ರಾರಂಭಿಸಿ ತೀವ್ರ ನಷ್ಟವಾದ್ರೆ ಆ ಸಂಸ್ಥೆಯನ್ನು ಮುಚ್ಚೋದು ಇತರ ಕಂಪನಿಗಳಿಗಿಂತ ಸುಲಭ. ಇತರ ಕಂಪನಿಗಳನ್ನು ಮುಚ್ಚಲು ಕನಿಷ್ಠ 180 ದಿನಗಳು ಅಗತ್ಯ. ಆದ್ರೆ ಸ್ಟಾರ್ಟ್‌ಅಪ್‌ಗಳನ್ನು 90 ದಿನಗಳಲ್ಲೇ ಮುಚ್ಚಬಹುದು.

ಹಾಗೆಯೇ ಈ ಸ್ಟಾರ್ಟ್‌ಅಪ್‌ ಆಸ್ತಿಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಸಾಲ ನೀಡಿದವರಿಗೆ ಪಾವತಿಸಲು ಒಬ್ಬ ಅಧಿಕಾರಿಯನ್ನು ಕೂಡ ನೇಮಿಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಸ್ಟಾರ್ಟ್‌ಅಪ್‌ ನಿಲ್ಲಿಸೋ ಕುರಿತು ಅರ್ಜಿ ಸಲ್ಲಿಸಿದ ಆರು ತಿಂಗಳೊಳಗೆ ಪೂರ್ಣಗೊಳಿಸಲಾಗುತ್ತದೆ.

ಲಕ್ಷಗಟ್ಟಲೆ ಸಂಬಳ ನೀಡುವ ಅದೆಷ್ಟೇ ಉನ್ನತ ಹುದ್ದೆಯಿದ್ದರೂ, ಮತ್ತೊಬ್ಬರ ಕೈ ಕೆಳಗೆ ಕೆಲಸ ಮಾಡಬೇಕೆಂದರೆ ಕೆಲವರಿಗೆ ಬೇಸರ. ನವೋದ್ಯಮಿಗಳಿಗೆ ಬೆಂಬಲ, ಉದ್ಯಮ ಪ್ರಾರಂಭಿಸಲು ಸೂಕ್ತ ಮೂಲಸೌಕರ್ಯ ಕಲ್ಪಿಸುವ ಜೊತೆಗೆ ಭಾರತದಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವುದು ಈ ಯೋಜನೆಯ ಮೂಲ ಉದ್ದೇಶ. ಆವಿಷ್ಕಾರ ಹಾಗೂ ವಿನೂತನ ಯೋಚನೆಗಳ ಮೂಲಕ ಬೆಳವಣಿಗೆ ಹೊಂದಲು ಈ ಯೋಜನೆ ಮೂಲಕ ಸ್ಟಾರ್ಟ್‌ ಅಪ್‌ಗಳಿಗೆ ಸರ್ಕಾರ ನೆರವು ನೀಡುತ್ತಿದೆ.

ಈ ಯೋಜನೆಯಡಿಯಲ್ಲಿ ಸ್ಟಾರ್ಟ್‌ಅಪ್‌ಗಳು ಸರ್ಕಾರದಿಂದ ಅನೇಕ ನೆರವುಗಳನ್ನು ಪಡೆಯಬಹುದು. ಆದರೆ ಈ ಎಲ್ಲ ಪ್ರಯೋಜನಗಳನ್ನು ಪಡೆಯಲು ಆ ಸಂಸ್ಥೆ ಅಥವಾ ಕಂಪನಿ ಕೈಗಾರಿಕೆ ಹಾಗೂ ಆಂತರಿಕ ವ್ಯಾಪಾರ ಸಂವರ್ಧನ ಇಲಾಖೆ (ಡಿಪಿಐ-ಐಟಿ)ಯಿಂದ ಸ್ಟಾರ್ಟ್‌ಅಪ್‌ ಎಂದು ಗುರುತಿಸಲ್ಪಟ್ಟಿರಬೇಕು

ಸ್ಟಾರ್ಟ್‌ಅಪ್‌ಗಳಿಗೆ ಹಣಕಾಸಿನ ನೆರವು ನೀಡಲು, 1.6 ಶತಕೋಟಿ ಡಾಲರ್‌ ನಷ್ಟು ಹಣಕಾಸು ನಿಧಿಯನ್ನು ಪರಿಚಯಿಸಲಾಗಿದೆ ಮತ್ತು ಇದನ್ನು ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (SIDBI) ನಿರ್ವಹಿಸುತ್ತಿದೆ.

ಸ್ಟಾರ್ಟ್ಅಪ್ ಇಂಡಿಯಾ ಸೀಡ್ ಫಂಡ್ ಯೋಜನೆ ಎಂದರೇನು?
ಉದ್ಯಮವು ಬೆಳವಣಿಗೆ ಹೊಂದಬೇಕಾದರೆ ಆರಂಭಿಕ ಹಂತದಲ್ಲಿಯೇ ಉದ್ಯಮಿಗಳಿಗೆ ಬಂಡವಾಳವು ಸುಲಭವಾಗಿ ಲಭ್ಯವಾಗುವುದು ಮುಖ್ಯವಾಗುತ್ತದೆ. ತಮ್ಮ ಸ್ಟಾರ್ಟ್‌ಅಪ್‌ನ ಪರಿಕಲ್ಪನೆಯನ್ನು ಆರಂಭ ಮಾಡಿ ಪುರಾವೆಯನ್ನು ಒದಗಿಸಿದ ಬಳಿಕವೇ ಏಂಜೆಲ್ ಹೂಡಿಕೆದಾರರು ಮತ್ತು ಇತರೆ ಸಂಸ್ಥೆಗಳು ಸ್ಟಾರ್ಟ್‌ಅಪ್‌ಗಳಿಗೆ ಹೂಡಿಕೆ ಮಾಡುತ್ತದೆ.

  • ಸ್ಟಾರ್ಟ್‌ಅಪ್‌ಗಳ ಅರ್ಹತಾ ಮಾನದಂಡ
  • ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ  ಅರ್ಜಿ ಸಲ್ಲಿಸಿದ ಸಮಯಕ್ಕೂ 2 ವರ್ಷಗಳಿಗಿಂತ ಮುನ್ನ ಆರಂಭವಾಗಿರಬಾರದು.
  •   https://www.startupindia.gov.in/content/sih/en/startupgov/startup_recognition_page.html ಗೆ ಭೇಟಿ ನೀಡಿ ಡಿಪಿಐಐಟಿ ಮಾನ್ಯತೆ ಪಡೆಯಿರಿ.
  •  ಸ್ಟಾರ್ಟಪ್ ತನ್ನ ಪ್ರಮುಖ ಉತ್ಪನ್ನ ಅಥವಾ ಸೇವೆಯಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸಲು ತಂತ್ರಜ್ಞಾನವನ್ನು ಬಳಸಬೇಕು.
  •  ಶಿಕ್ಷಣ, ಕೃಷಿ, ಆಹಾರ ಸಂಸ್ಕರಣೆ, ಜೈವಿಕ ತಂತ್ರಜ್ಞಾನ, ಆರೋಗ್ಯ, ಇಂಧನ, ರಕ್ಷಣೆ, ಬಾಹ್ಯಾಕಾಶ, ರೈಲ್ವೆ, ತೈಲ, ಜವಳಿ ಮತ್ತು ಅನಿಲ, ಸಾಮಾಜಿಕ ಕಾರ್ಯ, ತ್ಯಾಜ್ಯ ನಿರ್ವಹಣೆ, ನೀರು ನಿರ್ವಹಣೆ, ಹಣಕಾಸು, ಮುಂತಾದ ಕ್ಷೇತ್ರಗಳಲ್ಲಿ ನವೀನ ಉದ್ಯಮ ರಚಿಸುವ ಸ್ಟಾರ್ಟಪ್‌ಗಳಿಗೆ ಆದ್ಯತೆ ನೀಡಲಾಗುವುದು.
  •  ಸ್ಟಾರ್ಟ್‌ಅಪ್ 10 ಲಕ್ಷ ರೂಪಾಯಿಗಿಂತ ಅಧಿಕ ಬೆಂಬಲವನ್ನು ಯಾವುದೇ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯೋಜನೆಯಡಿಯಲ್ಲಿ ಪಡೆದಿರಬಾರದು. ಹಾಗೆಯೇ ಸ್ಪರ್ಧೆ, ಮೊದಲಾದ ಬಹುಮಾನದಿಂದ, ಸಬ್ಸಿಡಿಯಿಂದ ಪಡೆದ ಹಣವನ್ನು ಹೊಂದಿರಬಾರದು.
  • 2013 ಮತ್ತು ಸೆಬಿ ನಿಯಮಗಳು, 2018 ರ ಪ್ರಕಾರ, ಯೋಜನೆಗಾಗಿ ಇನ್‌ಕ್ಯುಬೇಟರ್‌ಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಸ್ಟಾರ್ಟಪ್‌ನಲ್ಲಿ ಭಾರತೀಯರ ಷೇರುಗಳು ಕನಿಷ್ಠ ಶೇಕಡ 51 ಆಗಿರಬೇಕು.

 

ವಾಣಿಜ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:58 am, Sun, 12 January 25