ಪ್ರಧಾನಿ ಮೋದಿ ಉದ್ಘಾಟಿಸಿದ ಐಐಎಸ್​ಸಿ ಸಂಶೋಧನಾ ಕೇಂದ್ರಕ್ಕೆ ಹಣ ಕೊಟ್ಟವರಾರು?

| Updated By: Srinivas Mata

Updated on: Jun 20, 2022 | 1:11 PM

ಐಐಎಸ್​ಸಿ ಬೆಂಗಳೂರಿನ ಇತಿಹಾಸಲ್ಲೇ ಅತಿ ದೊಡ್ಡ ಪ್ರಮಾಣದ, ಅಂದರೆ 425 ಕೋಟಿ ರೂಪಾಯಿ ದಾನ ಮಾಡಿದ ಸುಬ್ರತೋ ಬಾಗ್ಚಿ ಹಾಗೂ ಎನ್​ಎಸ್​ ಪಾರ್ಥಸಾರಥಿ ಬಗ್ಗೆ ಮಾಹಿತಿ ಇಲ್ಲಿದೆ.

ಪ್ರಧಾನಿ ಮೋದಿ ಉದ್ಘಾಟಿಸಿದ ಐಐಎಸ್​ಸಿ ಸಂಶೋಧನಾ ಕೇಂದ್ರಕ್ಕೆ ಹಣ ಕೊಟ್ಟವರಾರು?
ಬೆಂಗಳೂರಿನ ಐಐಎಸ್​ಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ
Follow us on

ಐಐಎಸ್‌ಸಿ ಹೊಸ ಆಸ್ಪತ್ರೆ ಮತ್ತು ಪಿಜಿ ವೈದ್ಯಕೀಯ ಕೇಂದ್ರವನ್ನು ಮೈಂಡ್‌ಟ್ರೀ ಸಹ-ಸಂಸ್ಥಾಪಕರಿಂದ ಪಡೆಯುತ್ತದೆ. ಈ ಹೆಜ್ಜೆಗೆ ಸುಬ್ರೋತೊ ಬಾಗ್ಚಿ ಮತ್ತು ಎನ್‌ಎಸ್ ಪಾರ್ಥಸಾರಥಿ 425 ಕೋಟಿ ರೂಪಾಯಿ ಕೊಡುಗೆ ನೀಡಿದ್ದಾರೆ. ದಾನ ಎಂಬ ಪದವೇ ಭಾರತೀಯರ ಪಾಲಿಗೆ ಆಕರ್ಷಣೆ. ತಮ್ಮ ಸಂಪತ್ತನ್ನು ಇಲ್ಲದವರೊಂದಿಗೆ ಹಂಚಿಕೊಳ್ಳುವ ಕಲ್ಪನೆಯು ಈಗ ಹೆಚ್ಚೆಚ್ಚು ಪ್ರಚಾರಕ್ಕೆ ಬರುತ್ತಿದೆ. ಈ ಭಾರತೀಯ ಉದ್ಯಮಿಗಳು ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಬಂದವರು. ಮತ್ತು ನೆನಪಿಡಿ, ಈ ಭಾರತೀಯ ಉದ್ಯಮಿಗಳು ಕೆಲವು ಸಣ್ಣ ಮೊತ್ತವನ್ನು ದಾನ ಮಾಡಿಲ್ಲ. ಇವು ಸಾಕಷ್ಟು ದೊಡ್ಡ ಮೊತ್ತಗಳೇ. ಹೆಚ್ಚು ಹೆಚ್ಚು ಭಾರತೀಯ ಉದ್ಯಮಿಗಳು ತಮ್ಮ ಕೈಲಾದಷ್ಟು ದಾನ ಮಾಡುವುದನ್ನು ನೋಡಲು ಅತ್ಯಂತ ಸಂತೋಷವಾಗುತ್ತದೆ. ಹೆಚ್ಚು ಹೆಚ್ಚು ಭಾರತೀಯ ಉದ್ಯಮಿಗಳು ದಾನ ಕಾರ್ಯದತ್ತ ಮುಖಮಾಡಿದಂತೆ, ದೇಶದಲ್ಲಿ ಬಡತನದ ಅಂಚಿನಲ್ಲಿರುವ ಅಥವಾ ಅಷ್ಟೊಂದು ಸಂಪನ್ಮೂಲವಿಲ್ಲದ ನಾಗರಿಕರ ಜೀವನ ಗುಣಮಟ್ಟವು ಉತ್ತಮಗೊಳ್ಳುವುದು ಖಚಿತ.

ನಗರದ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮದೊಂದಿಗೆ ಸಂಬಂಧ ಹೊಂದಿರುವ ಇಬ್ಬರು ಉದ್ಯಮಿಗಳು ತಮ್ಮ ತಿಜೋರಿಯನ್ನು ದಾನ ಕಾರ್ಯಗಳಿಗೆ ತೆರೆಯುವ ಮೂಲಕ ಬೆಂಗಳೂರು ಮತ್ತೊಮ್ಮೆ ಪರೋಪಕಾರ ಕಾರ್ಯಕ್ಕೆ ಸಾಕ್ಷಿ ಆಗಿದೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ (ಐಐಎಸ್‌ಸಿ) 800 ಹಾಸಿಗೆಗಳ ಆಸ್ಪತ್ರೆ ಮತ್ತು ಸ್ನಾತಕೋತ್ತರ ವೈದ್ಯಕೀಯ ಶಾಲೆ ನಿರ್ಮಾಣಕ್ಕೆ ಎನ್‌ಎಸ್ ಪಾರ್ಥಸಾರಥಿ ಮತ್ತು ಸುಬ್ರೋತೊ ಬಾಗ್ಚಿ ರೂ. 425 ಕೋಟಿ ದೇಣಿಗೆ ನೀಡಿದ್ದಾರೆ. ಆಸ್ಪತ್ರೆಗೆ ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆ ಎಂದು ನಾಮಕರಣ ಮಾಡಲಾಗುತ್ತದೆ. ಯೋಜನೆಯಡಿಯಲ್ಲಿ, ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳಿಗೆ MD-PhD ಪದವಿಯನ್ನು ನೀಡಲಾಗುವುದು. ಹೊಸ ಚಿಕಿತ್ಸಾ ವಿಧಾನಗಳಿಗೆ ಕಾರಣವಾಗುವ ಕ್ಲಿನಿಕಲ್ ಸಂಶೋಧನೆಯ ಮೇಲೆ ಕೇಂದ್ರೀಕರಿಸುವ ವೈದ್ಯ-ವಿಜ್ಞಾನಿಗಳಿಗೆ ಬೇಕಾದ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಗುರಿಯಾಗಿದೆ.

ಈ ದೇಣಿಗೆಯನ್ನು ಬಯೋಕಾನ್‌ನ ಸಂಸ್ಥಾಪಕಿ, ಕಿರಣ್ ಮಜುಂದಾರ್ ಶಾ ಸೇರಿದಂತೆ ಅನೇಕರು ಅಂಗೀಕರಿಸಿದ್ದಾರೆ, ಅವರು ಕೊಡುಗೆಯನ್ನು ಐಐಎಸ್​ಸಿ ತನ್ನ ಇತಿಹಾಸದಲ್ಲಿ ಸ್ವೀಕರಿಸಿದ ಏಕೈಕ ಅತಿದೊಡ್ಡ ಖಾಸಗಿ ದೇಣಿಗೆ ಎಂದು ಗುರುತಿಸಿದ್ದಾರೆ!

ಬಾಗ್ಚಿ ಮತ್ತು ಪಾರ್ಥಸಾರಥಿ ಯಾರು?

1975 ರಲ್ಲಿ ಅತ್ಯುತ್ತಮ ಎನ್‌ಸಿಸಿ ಕೆಡೆಟ್ ಪ್ರಶಸ್ತಿಯನ್ನು ಪಡೆದ ಸುಬ್ರೋತೊ ಬಾಗ್ಚಿ ವಿಪ್ರೋದಲ್ಲಿ ಜಾಗತಿಕ ಆರ್ ಅಂಡ್ ಡಿ ಮುಖ್ಯಸ್ಥರಾಗಿದ್ದರು. ಈಗ ಎಲ್​ ಅಂಡ್ ಟಿ ಸ್ಟೇಬಲ್‌ನ ಭಾಗವಾಗಿರುವ ಐಟಿ ಸಂಸ್ಥೆಯಾದ ಮೈಂಡ್‌ಟ್ರೀ ಅನ್ನು ಮುನ್ನಡೆಸಲು ಹೋದ ಮಾಜಿ ವಿಪ್ರೋ ಕಾರ್ಯನಿರ್ವಾಹಕರಲ್ಲಿ ಬಾಗ್ಚಿ ಕೂಡ ಒಬ್ಬರು. ಎನ್​ಎಸ್​ ಪಾರ್ಥಸಾರಥಿ ಅವರು ಮೈಂಡ್‌ಟ್ರೀಯ ಪ್ರವರ್ತಕರಲ್ಲಿ ಒಬ್ಬರಾಗಿದ್ದರು ಮತ್ತು ಅದರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (COO) ಸೇವೆ ಸಲ್ಲಿಸಿದರು. ಅವರು ವಿಪ್ರೋ ಆರ್ ಅಂಡ್ ಡಿ ವಿಭಾಗದೊಂದಿಗೆ ಇದ್ದರು ಮತ್ತು 1999ರಲ್ಲಿ ಮೈಂಡ್‌ಟ್ರೀಗೆ ಬಂದರು. ಪಾರ್ಥಸಾರಥಿ ಈಗ ಮೈಂಡ್‌ಟ್ರೀಯ ಮತ್ತೊಬ್ಬ ಸಹ-ಪ್ರವರ್ತಕರಾಗಿದ್ದ ಕೃಷ್ಣಕುಮಾರ್ ನಟರಾಜನ್ ಅವರನ್ನು ಒಳಗೊಂಡಿರುವ ವಿಸಿ ಸಂಸ್ಥೆಯಾದ ಮೇಲಾ ವೆಂಚರ್ಸ್‌ನೊಂದಿಗೆ ತೊಡಗಿಸಿಕೊಂಡಿದ್ದಾರೆ.

ಐಟಿ ವಲಯದ ಇತರ ಪ್ರಮುಖ ದಾನಿಗಳು

ವಿಪ್ರೋದ ಮಾಲೀಕರಾಗಿರುವ ಅಜೀಂ ಪ್ರೇಮ್‌ಜಿ ಅವರು ದತ್ತಿಗಾಗಿ ಬಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ನೀಡುವ ಮೂಲಕ ಅತಿದೊಡ್ಡ ಭಾರತೀಯ ದಾನಿಗಳಾಗಿ ಮುಂದುವರಿದಿದ್ದಾರೆ. ವಿಪ್ರೋ ಮತ್ತು ವಿಪ್ರೋ ಎಂಟರ್‌ಪ್ರೈಸಸ್ ಜೊತೆಗೆ ಅಜೀಂ ಪ್ರೇಮ್‌ಜಿ ಫೌಂಡೇಷನ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ರೂ. 1,125 ಕೋಟಿಯನ್ನು ನೀಡಲು ಬದ್ಧವಾಗಿದೆ. 2013ರಲ್ಲಿ ಗಿವಿಂಗ್ ಪ್ಲೆಡ್ಜ್‌ಗೆ ಸಹಿ ಹಾಕಿದ ಭಾರತೀಯ ಉದ್ಯಮಿಗಳಲ್ಲಿ ಪ್ರೇಮ್‌ಜಿ ಅವರು ಮೊದಲಿಗರು. ಎಚ್​ಸಿಎಲ್​ ಟೆಕ್ನಾಲಜೀಸ್‌ನ ಸಂಸ್ಥಾಪಕ ಶಿವ ನಾಡಾರ್ ಮತ್ತೊಬ್ಬ ದೊಡ್ಡ ದಾಮೊ. 30,000 ವಿದ್ಯಾರ್ಥಿಗಳಿಗೆ ನೇರವಾಗಿ ಸಹಾಯ ಮಾಡಲು ಅವರು ರೂ. 900 ಮಿಲಿಯನ್‌ಗೂ ಹೆಚ್ಚು ನೀಡಲು ಬದ್ಧರಾಗಿದ್ದಾರೆ. 2017ರಲ್ಲಿ ಗಿವಿಂಗ್ ಪ್ಲೆಡ್ಜ್‌ಗೆ ಸಹಿ ಮಾಡಿದವರಲ್ಲಿ ಇನ್ಫೋಸಿಸ್ ಅಧ್ಯಕ್ಷ ಮತ್ತು ಸಹ-ಸಂಸ್ಥಾಪಕರಲ್ಲಿ ಒಬ್ಬರಾದ ನಂದನ್ ನಿಲೇಕಣಿ ಕೂಡ ಒಬ್ಬರು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ದಿನವೂ 20 ಕೋಟಿ ದಾನ ಮಾಡ್ತಾರೆ ಈ ಕುಬೇರ.. ಆದರೂ ಆ ಸಂಪತ್ತು ತನ್ನದಲ್ಲ ಅಂತಾರೆ!

Published On - 1:10 pm, Mon, 20 June 22