ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ತೆರಿಗೆ ಹಂಚಿಕೆ (tax sharing) ವಿಚಾರ ಭಾರತದಲ್ಲಿ ಸದಾ ವಿವಾದದಲ್ಲೇ ಇರುತ್ತದೆ. ದಕ್ಷಿಣ ರಾಜ್ಯಗಳಿಂದ (South Indian states) ಬಹಳ ಅಧಿಕ ತೆರಿಗೆ ಮೊತ್ತ ಸಂಗ್ರಹವಾದರೂ ಕೇಂದ್ರದಿಂದ ದೊರಕುತ್ತಿರುವ ತೆರಿಗೆ ಪಾಲು ಬಹಳ ಕಡಿಮೆ ಇದೆ ಎಂದು ಡಿಕೆ ಸುರೇಶ್ ಇತ್ತೀಚೆಗೆ ಆಪಾದಿಸಿ, ದಕ್ಷಿಣ ಭಾರತವನ್ನೇ ಪ್ರತ್ಯೇಕಿಸಬೇಕೆಂದು ಒತ್ತಾಯಿಸಿ ವಿವಾದಕ್ಕೆ ಒಳಗಾಗಿದ್ದಾರೆ. ಈ ತೆರಿಗೆ ಹಂಚಿಕೆ ವಿವಾದ ಮತ್ತು ಆಕ್ಷೇಪ ಹೊಸದೇನಲ್ಲ. ದೇಶದ ಬೇರೆ ಭಾಗಕ್ಕೆ ಹೋಲಿಸಿದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚು ತೆರಿಗೆ ಸಂಗ್ರಹ ಆಗುತ್ತದೆ ಎನ್ನುವುದು ವಾಸ್ತವ. ಆದರೆ, ಸಿಂಹಪಾಲು ಮಾತ್ರ ಹಿಂದೆ ಪ್ರದೇಶದ ರಾಜ್ಯಗಳಿಗೆ ಎನ್ನುವುದೂ ಕೂಡ ವಸ್ತುಸ್ಥಿತಿಯೇ. ಹಾಗಾದರೆ, ಕೇಂದ್ರ ಸರ್ಕಾರ ದಕ್ಷಿಣ ರಾಜ್ಯಗಳಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆಯೇ?
ಒಟ್ಟು ತೆರಿಗೆ ಹಂಚಿಕೆ: 12,19,782.85 ಕೋಟಿ ರೂ (12.2 ಲಕ್ಷ ಕೋಟಿ ರೂ)
ಇದನ್ನೂ ಓದಿ: ತಂಬಾಕು ಉತ್ಪನ್ನ ತಯಾರಿಸುವ ಯಂತ್ರಗಳ ನೊಂದಣಿ ಆಗದಿದ್ದರೆ ಲಕ್ಷ ರೂ ದಂಡ: ಆದಾಯ ಸೋರಿಕೆ ತಡೆಗೆ ಸರ್ಕಾರ ಕ್ರಮ
ಸಂ | ರಾಜ್ಯ | ಶೇಕಡಾವಾರು ತೆರಿಗೆ ಪಾಲು | ತೆರಿಗೆ ಮೊತ್ತ (ಕೋಟಿಯಲ್ಲಿ) |
1) | ಉತ್ತರ ಪ್ರದೇಶ | 17.939% | 2,18,816.84 |
2) | ಬಿಹಾರ | 10.058% | 1,22,685.76 |
3) | ಮಧ್ಯಪ್ರದೇಶ | 7.850% | 95,752.96 |
4) | ಪಶ್ಚಿಮ ಬಂಗಾಳ | 7.523% | 91,764.26 |
5) | ಮಹಾರಾಷ್ಟ್ರ | 6.317% | 77,053.69 |
6) | ರಾಜಸ್ಥಾನ | 6.026% | 73.504.11 |
7) | ಒಡಿಶಾ | 4.528% | 55,231.76 |
8) | ತಮಿಳುನಾಡು | 4.079% | 49,754.95 |
9) | ಆಂಧ್ರಪ್ರದೇಶ | 4.047% | 49,364.61 |
10) | ಕರ್ನಾಟಕ | 3.647% | 44,485.59 |
11) | ಗುಜರಾತ್ | 3.478% | 42,424.05 |
12) | ಛತ್ತೀಸ್ಗಡ್ | 3.407% | 41,557.99 |
13) | ಜಾರ್ಖಂಡ್ | 3.307% | 40,338.22 |
14) | ಅಸ್ಸಾಮ್ | 3.128% | 38,154.81 |
15) | ತೆಲಂಗಾಣ | 2.102% | 25,639.84 |
16) | ಕೇರಳ | 1.925% | 23,480.81 |
17) | ಪಂಜಾಬ್ | 1.807% | 22,041.48 |
18) | ಅರುಣಾಚಲಪ್ರದೇಶ | 1.757% | 21,431.59 |
19) | ಉತ್ತರಾಖಂಡ್ | 1.118% | 13,637.15 |
20) | ಹರ್ಯಾಣ | 1.093% | 13,332.23 |
21) | ಹಿಮಾಚಲಪ್ರದೇಶ | 0.830% | 10,124.20 |
22) | ಮೇಘಾಲಯ | 0.716% | 9,355.73 |
23) | ಮಣಿಪುರ | 0.716% | 8,733.65 |
24) | ತ್ರಿಪುರಾ | 0.708% | 8,636.05 |
25) | ನಾಗಾಲ್ಯಾಂಡ್ | 0.569% | 6,940.56 |
26) | ಮಿಝೋರಾಮ್ | 0.500% | 6,098.93 |
27) | ಸಿಕ್ಕಿಂ | 0.388% | 4,732.76 |
28) | ಗೋವಾ | 0.386% | 4,708.37 |
ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ತೆರಿಗೆ ಹಂಚಿಕೆ ಹೇಗೆ ಆಗಬೇಕೆಂದು ಹಣಕಾಸು ಸಚಿವಾಲಯದಿಂದ ಕೂತು ನಿರ್ಧರಿಸುವುದಿಲ್ಲ. ಅದಕ್ಕಾಗೆಂದೇ ಹಣಕಾಸು ಆಯೋಗವನ್ನು ಕಾಲ ಕಾಲಕ್ಕೆ ರಚಿಸಲಾಗುತ್ತದೆ. ಮೊನ್ನೆಮೊನ್ನೆ 16ನೇ ಹಣಕಾಸು ಆಯೋಗ ರಚನೆ ಆಗಿದೆ. ಇದು ಮುಂದಿನ ಐದು ವರ್ಷಗಳಿಗೆ ತೆರಿಗೆ ಹಂಚಿಕೆ ಸೂತ್ರವನ್ನು ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಈಗ ಆಗುತ್ತಿರುವ ತೆರಿಗೆ ಹಂಚಿಕೆಯು 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದು.
ಇದನ್ನೂ ಓದಿ: ಕೇವಲ 27ರ ವಯಸ್ಸಿಗೆ ಬಿಲಿಯನೇರ್ ಆದ ಪರ್ಲ್ ಕಪೂರ್; ಇವರು ಕಟ್ಟಿದ ಝೈಬರ್ 365 ಏಷ್ಯಾದ ಅತಿವೇಗದ ಯೂನಿಕಾರ್ನ್
ಶಿಶು ಮರಣ, ಲಿಂಗ ಅನುಪಾತ, ಜನನ ಪ್ರಮಾಣ ಇತ್ಯಾದಿ ಜನಸಂಖ್ಯಾ ಬೆಳವಣಿಗೆ (Demographic performance), ಆದಾಯ, ಜನಸಂಖ್ಯೆ, ರಾಜ್ಯದ ವಿಸ್ತಾರ, ಅರಣ್ಯ ಮತ್ತು ಪರಿಸರ ವ್ಯಾಪ್ತಿ, ತೆರಿಗೆ ಪ್ರಮಾಣ ಇವಿಷ್ಟೂ ಅಂಶಗಳನ್ನು ಪರಿಗಣಿಸಿ ತೆರಿಗೆ ಹಂಚಿಕೆ ಸೂತ್ರ ರಚಿಸಲಾಗುತ್ತದೆ. ಒಂದೊಂದು ಅಂಶಕ್ಕೂ ಪ್ರತ್ಯೇಕ ತೂಕ ಇರುತ್ತದೆ. ಅದರ ವಿವರ ಈ ಕೆಳಕಂಡಂತಿದೆ:
ಇಲ್ಲಿ ಜನಸಂಖ್ಯೆಯು 1971ರ ಸೆನ್ಸಸ್ ಪ್ರಕಾರವಾಗಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಜನಸಂಖ್ಯಾ ಬೆಳವಣಿಗೆ ಎಂಬುದು 1971ರ ಸೆನ್ಸಸ್ ಬಳಿಕ ಒಂದು ರಾಜ್ಯದ ಜನಸಂಖ್ಯೆ ಎಷ್ಟು ಹೆಚ್ಚಾಗಿದೆ ಎಂದರ್ಥ. ಆದಾಯ ಅಂತರ ಎಂಬುದು ಅತ್ಯಂತ ಶ್ರೀಮಂತ ರಾಜ್ಯಕ್ಕೆ ಹೋಲಿಸಿದರೆ ಒಂದು ರಾಜ್ಯದ ಆದಾಯದ ಅಂತರ ಎಷ್ಟಿದೆ ಎಂಬುದಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:19 pm, Sun, 4 February 24