Success: ಕೇವಲ 27ರ ವಯಸ್ಸಿಗೆ ಬಿಲಿಯನೇರ್ ಆದ ಪರ್ಲ್ ಕಪೂರ್; ಇವರು ಕಟ್ಟಿದ ಝೈಬರ್ 365 ಏಷ್ಯಾದ ಅತಿವೇಗದ ಯೂನಿಕಾರ್ನ್

Zyber365 and Pearl Kapur: ಝೈಬರ್365 ಸಂಸ್ಥೆ ಬಹಳ ಬೇಗ ಯೂನಿಕಾರ್ನ್ ಮಟ್ಟ ತಲುಪಿದೆ. ಏಷ್ಯನ್ ದಾಖಲೆ ಮುರಿದಿದೆ. ಇದರ ಸಹ-ಸಂಸ್ಥಾಪಕರಾಗಿರುವ ಪರ್ಲ್ ಕಪೂರ್ 27 ವರ್ಷಕ್ಕೆ ಬಿಲಿಯನೇರ್ ಎನಿಸಿದ್ದಾರೆ. ಭಾರತದ ಅತ್ಯಂತ ಕಿರಿಯ ಬಿಲಿಯನೇರ್ ಇವರು. ಝೈಬರ್365 ವೆಬ್3, ಎಐ ಇತ್ಯಾದಿ ತಂತ್ರಜ್ಞಾನಗಳ ಆಧಾರಿತವಾಗಿ ಉತ್ಪನ್ನ ಸೇವೆಗಳನ್ನು ಒದಗಿಸುತ್ತದೆ.

Success: ಕೇವಲ 27ರ ವಯಸ್ಸಿಗೆ ಬಿಲಿಯನೇರ್ ಆದ ಪರ್ಲ್ ಕಪೂರ್; ಇವರು ಕಟ್ಟಿದ ಝೈಬರ್ 365 ಏಷ್ಯಾದ ಅತಿವೇಗದ ಯೂನಿಕಾರ್ನ್
ಪರ್ಲ್ ಕಪೂರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 04, 2024 | 2:45 PM

ಬ್ಲಾಕ್​ಚೈನ್ ಟೆಕ್ನಾಲಜಿ, ಸೈಬರ್​ಸೆಕ್ಯೂರಿಟಿ, ಪೇಮೆಂಟ್ಸ್ ಸಲ್ಯೂಶನ್ಸ್ ನೀಡುವ ಪ್ರಮುಖ ತಂತ್ರಜ್ಞಾನ ಸ್ಟಾರ್ಟಪ್ ಎನಿಸಿದ ಝೈಬರ್ 365 ಕೇವಲ ಮೂರು ತಿಂಗಳಲ್ಲಿ ಯೂನಿಕಾರ್ನ್ ಕಂಪನಿಯಾಗಿ ಬೆಳೆದಿದೆ. ಭಾರತದಲ್ಲಿ ಮಾತ್ರವಲ್ಲ ಏಷ್ಯಾದಲ್ಲೇ ಅತಿವೇಗವಾಗಿ ಯೂನಿಕಾರ್ನ್ ಮಟ್ಟ ಮುಟ್ಟಿದ ಸ್ಟಾರ್ಟಪ್ ಎನಿಸಿದೆ. ಇದರ ಸಂಸ್ಥಾಪಕರು ಮತ್ತು ಸಿಇಒ ಆಗಿರುವ 27 ವರ್ಷದ ಪರ್ಲ್ ಕಪೂರ್ (pearl kapur) ಭಾರತದ ಅತಿ ಕಿರಿಯ ವಯಸ್ಸಿನ ಬಿಲಿಯನೇರ್ ಎನಿಸಿದ್ದಾರೆ.

ಪರ್ಲ್ ಕಪೂರ್ ಮತ್ತು ಸನ್ನಿ ವಘೇಲಾ ಅವರಿಬ್ಬರು ಝೈಬರ್ 365 ಕಂಪನಿಯ ಸಂಸ್ಥಾಪಕರು. ಪರ್ಲ್ ಕಪೂರ್ ಸಿಇಒ ಆಗಿದ್ದರೆ ಸನ್ನಿ ವಘೇಲಾ ಸಿಪಿಒ (ಪ್ರಾಡಕ್ಟ್ ಆಫೀಸರ್) ಜವಾಬ್ದಾರಿ ಹೊತ್ತಿದ್ದಾರೆ. ಇನ್ನು, ಸೋನೇಶ್ವರ್ ಸಿಂಗ್ ಸಿಟಿಒ ಮತ್ತು ಸಮಿರಾಜ್ ಸಿಂಗ್ ಸಿಎಫ್​ಒ ಆಗಿರುವ ಝೈಬರ್365 ಬಹಳ ವೇಗವಾಗಿ ಬೆಳೆಯುತ್ತಿದೆ. ಬ್ರಿಟನ್​ನಲ್ಲಿ ಇದರ ಮುಖ್ಯ ಕಚೇರಿ ಇದೆಯಾದರೂ ಭಾರತವನ್ನು ಕಾರ್ಯಾಚರಣೆಯ ಅಡ್ಡೆಯಾಗಿ ಮಾಡುವ ಉದ್ದೇಶ ಸಂಸ್ಥಾಪಕರದ್ದು. ಅಂತೆಯೇ ಇದು ಭಾರತದ ಸ್ಟಾರ್ಟಪ್ ಆಗಿದೆ.

ಇದನ್ನೂ ಓದಿ: ವರ್ಕ್ ಫ್ರಂ ಹೋಮ್ ಬೇಡ ಎಂದ ಸಾಫ್ಟ್​ವೇರ್ ಕಂಪನಿ ವಿರುದ್ಧ ತಿರುಗಿಬಿದ್ದ 5,000ಕ್ಕೂ ಹೆಚ್ಚು ಉದ್ಯೋಗಿಗಳು

ಇದರ ಸಹ-ಸಂಸ್ಥಾಪಕರಾದ ಸನ್ನಿ ವಘೇಲಾ ಮೂಲತಃ ಎಥಿಕಲ್ ಹ್ಯಾಕರ್. ಅಂದರೆ, ಒಳ್ಳೆಯ ಉದ್ದೇಶಗಳಿಗೆ ಮತ್ತು ಸೈಬರ್ ನ್ಯೂನತೆಗಳನ್ನು ಪತ್ತೆ ಹಚ್ಚುವ ಸಲುವಾಗಿ ಅಧಿಕೃತವಾಗಿ ಹ್ಯಾಕಿಂಗ್ ಮಾಡುವ ವ್ಯಕ್ತಿಗಳಿಗೆ ಎಥಿಕಲ್ ಹ್ಯಾಕರ್ ಎಂದು ಕರೆಯಲಾಗುತ್ತದೆ. ಸನ್ನಿ ವಘೇಲಾ ಇದರಲ್ಲಿ ನಿಷ್ಣಾತರಾಗಿದ್ದಾರೆ. ಅಂತೆಯೇ ಇವರು ಝೈಬರ್ 365ಗೆ ಚೀಫ್ ಪ್ರಾಡಕ್ಟ್ ಆಫೀಸರ್ ಆಗಿದ್ದಾರೆ.

SRAM & MRAM ಗ್ರೂಪ್ ಸಂಸ್ಥೆ ಇತ್ತೀಚೆಗೆ 100 ಮಿಲಿಯನ್ ಡಾಲರ್​​ನಷ್ಟು ಹೂಡಿಕೆ ಮಾಡಿತ್ತು. ಇದರೊಂದಿಗೆ ಝೈಬರ್365 ಸಂಸ್ಥೆಯ ಮೌಲ್ಯ 1.2 ಬಿಲಿಯನ್ ಡಾಲರ್​ಗೆ ಹೋಗಿದೆ. ಹೆಚ್ಚೂಕಡಿಮೆ 10,000 ಕೋಟಿ ರೂ ಮೌಲ್ಯದ ಕಂಪನಿ ಎನಿಸಿದೆ. ಈ ಮೂಲಕ ಯೂನಿಕಾರ್ನ್ ಸ್ಥಾನ ಪಡೆದಿದೆ. ಭಾರತದ ಯೂನಿಕಾರ್ನ್ ಕಂಪನಿಗಳ ಪೈಕಿ ಇದು 109ನೇ ಸ್ಥಾನ ಪಡೆದಿದೆ.

ಝೈಬರ್​ನ ಮೂಲ ಸ್ಥಾಪಕರಾಗಿರುವ ಪರ್ಲ್ ಕಪೂರ್ ಶೇ. 90ರಷ್ಟು ಪಾಲು ಹೊಂದಿದ್ದಾರೆ. ಹೀಗಾಗಿ, ಅವರ ಷೇರುಸಂಪತ್ತು ಬಿಲಿಯನ್ ಡಾಲರ್ ಆಗಿದೆ. ಈ ಮೂಲಕ ಬಿಲಿಯನೇರ್ ಎನಿಸಿದ್ದಾರೆ.

ಇದನ್ನೂ ಓದಿ: ಕೂಲಿಯಾಗಿ ಕೆಲಸ ಮಾಡುತ್ತಿದ್ದವ ತನ್ನ ದೇಶದ ಅತಿಶ್ರೀಮಂತನಾದ ಕಥೆ ಕೇಳಿ

ಲಂಡನ್​ನ ಕ್ವೀನ್ ಮೇರಿ ಯೂನಿವರ್ಸಿಟಿಯಲ್ಲಿ ಇನ್ವೆಸ್ಟ್​ಮೆಂಟ್ ಬ್ಯಾಂಕಿಂಗ್​ನಲ್ಲಿ ಎಂಎಸ್​ಸಿ ಮಾಡಿರುವ ಅವರು ಝೈಬರ್ ಸ್ಥಾಪನೆಗೆ ಮುನ್ನ ಬಿಲಿಯನ್ ಪೇ ಟೆಕ್ನಾಲಜೀಸ್ ಎಂಬ ಕಂಪನಿ ಹುಟ್ಟುಹಾಕಿದ್ದರು. ಅದಕ್ಕೆ ಮುನ್ನ ಫೈನಾನ್ಷಿಯಲ್ ಅಡ್ವೈಸರ್ ಮತ್ತು ಬಿಸಿನೆಸ್ ಅಡ್ವೈಸರ್ ಆಗಿ ಒಂದೆರಡು ಕಂಪನಿಗಳಲ್ಲಿ ಕೆಲಸ ಮಾಡಿದ್ದುಂಟು.

ಆದರೆ, ಕಳೆದ ವರ್ಷದಂದು ಅವರು ಕಟ್ಟಿದ ಝೈಬರ್365 ಸಂಸ್ಥೆ ಭವಿಷ್ಯದ ತಂತ್ರಜ್ಞಾನಗಳ ಆಧಾರದಲ್ಲಿ ಉತ್ಪನ್ನ ಸೇವೆ ಒದಗಿಸುತ್ತದೆ. ವೆಬ್3 ಮತ್ತು ಎಐ ತಂತ್ರಜ್ಞಾನ ಆಧಾರಿತವಾದ ಆಪರೇಟಿಂಗ್ ಸಿಸ್ಟಂಗಳಿಂದ ಹಿಡಿದು ಕ್ಯಾಷ್​ಲೆಸ್ ಪೇಮೆಂಟ್ ಸಲ್ಯೂಷನ್ಸ್​ವರೆಗೆ ವಿವಿಧ ಸೇವೆಗಳನ್ನು ಝೈಬರ್ ನೀಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ