Rag to Rich: ಕೂಲಿಯಾಗಿ ಕೆಲಸ ಮಾಡುತ್ತಿದ್ದವ ತನ್ನ ದೇಶದ ಅತಿಶ್ರೀಮಂತನಾದ ಕಥೆ ಕೇಳಿ

Zhong Shanshan inspiring story: 5 ಲಕ್ಷ ಕೋಟಿ ರೂ ಮೌಲ್ಯದ ನೋಂಗ್​ಫು ಸ್ಪ್ರಿಂಗ್ ಕಂಪನಿಯ ಒಡೆಯ ಝೋಂಗ್ ಶಾನ್​ಶಾನ್ ಚೀನಾದ ಅತೀ ಶ್ರೀಮಂತ ವ್ಯಕ್ತಿ ಆಗಿದ್ದಾರೆ. ಹಾಂಗ್​ಝೋ ಪ್ರಾಂತ್ಯದವರಾದ ಝೋಂಗ್ ಶಾನ್​ಶಾನ್ 1988ರಲ್ಲಿ ಬಿಸಿನೆಸ್ ಆರಂಭಿಸುವ ಮುನ್ನ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿದ್ದರು. ಚೀನೀ ಮಾಧ್ಯಮಗಳಲ್ಲಿ ಲೋನ್ ವುಲ್ಫ್ ಎಂದು ಬಣ್ಣಿಸಲ್ಪಡುವ ಶಾನ್​ಶಾನ್ ತಳಮಟ್ಟದಿಂದ ಮೇಲೇರಿದ ಕಥೆ ಸ್ಫೂರ್ತಿದಾಯಕವಾಗಿದೆ.

Rag to Rich: ಕೂಲಿಯಾಗಿ ಕೆಲಸ ಮಾಡುತ್ತಿದ್ದವ ತನ್ನ ದೇಶದ ಅತಿಶ್ರೀಮಂತನಾದ ಕಥೆ ಕೇಳಿ
ಝೋಂಗ್ ಶಾನ್​ಶಾನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 02, 2024 | 4:59 PM

ಇವತ್ತು ಒಂದು ಉದ್ದಿಮೆ ಆರಂಭಿಸುವುದು ಸುಲಭ. ಆದರೆ, ಅದನ್ನು ಲಾಭದಾಯಕವಾಗಿ ಬೆಳೆಸುವುದು ಸುಮ್ಮನೆ ಅಲ್ಲ. ಅದರಲ್ಲೂ ತಳಮಟ್ಟದಿಂದ ಸಂಸ್ಥೆ ಕಟ್ಟಿ ದೊಡ್ಡ ಮಟ್ಟಕ್ಕೆ ಬೆಳೆಸುವುದು (rag to riches story) ಬಹಳ ಕಷ್ಟದ ಕೆಲಸ. ಅದರಲ್ಲೂ ಹಣ ಬಲ ಇಲ್ಲದ ಕುಟುಂಬದ ಹಿನ್ನೆಲೆಯಿಂದ ಬಂದು ಬಿಸಿನೆಸ್​ನಲ್ಲಿ ಮಿಂಚುವುದು ಸಾಮಾನ್ಯದ ಸಂಗತಿ ಖಂಡಿತ ಅಲ್ಲ. ಇಂಥ ಬಿಕಾರಿ ಟು ಬಿಸಿನೆಸ್​ಮ್ಯಾನ್ ಕಥೆಗಳು ವಿಶ್ವದ ಹಲವೆಡೆ ಕಾಣಸಿಗುತ್ತವೆ. ಚೀನಾದ ಝೋಂಗ್ ಶಾನ್​ಶಾನ್ (Zhong Shanshan) ಎಂಬುವವರ ಜೀವನವೂ ಇದಕ್ಕೊಂದು ನಿದರ್ಶನ. ಕೂಲಿಯಾಗಿದ್ದ 69 ವರ್ಷದ ಝೋಂಗ್ ಇವತ್ತು 5.04 ಲಕ್ಷ ಕೋಟಿ ರೂ ಸಂಪತ್ತಿರುವ ಕಂಪನಿಯ ಒಡೆಯ ಎನಿಸಿದ್ದಾರೆ. ನೋಂಗ್​ಫು ಸ್ಪ್ರಿಂಗ್ (Nongfu Spring) ಎಂಬ ನೀರಿನ ಬಾಟಲ್ ಕಂಪನಿಯ ಸಂಸ್ಥಾಪಾಧ್ಯಕ್ಷರಾಗಿರುವ ಝೋಂಗ್ ಶಾನ್​ಶಾನ್ ಇವತ್ತು ಚೀನಾದ ಅತಿ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ.

ಕಟ್ಟಡ ಕಾರ್ಮಿಕ, ನ್ಯೂಸ್ ರಿಪೋರ್ಟರ್, ಸೇಲ್ಸ್ ಏಜೆಂಟ್…

ಚೀನಾದ ಹಾಂಗ್​ಝೋ ಪ್ರಾಂತ್ಯಕ್ಕೆ ಸೇರಿದ ಝೋಂಗ್ ಶಾನ್​ಶಾನ್ ಇವತ್ತು ನೊಂಗ್​ಫು ಸ್ಪ್ರಿಂಗ್ ಕಂಪನಿ ಮಾತ್ರವಲ್ಲ, ವ್ಯಾಂಟೈ ಬಯೋಲಾಜಿಕಲ್ ಮೊದಲಾದ ಕೆಲ ಕಂಪನಿಗಳ ಒಡೆಯರಾಗಿದ್ದಾರೆ. ಚೀನಾದ ಸಾಂಸ್ಕೃತಿಕ ಕ್ರಾಂತಿಯ ನಡುವೆ ಚಿಗುರಿದ ಝೋಂಗ್, ಬಿಸಿನೆಸ್ ಆರಂಭಕ್ಕೂ ಮುನ್ನ ಸವೆಸಿದ ಹಾದಿ ಕುತೂಹಲ ಮೂಡಿಸುತ್ತದೆ. ಚೀನಾದ ಮಾಧ್ಯಮಗಳು ಝೋಂಗ್ ಶಾನ್​ಶಾನ್ ಅವರನ್ನು ಲೋನ್ ವುಲ್ಫ್ (ಒಂಟಿ ತೋಳ) ಎಂದು ಬಣ್ಣಿಸುವುದು ಸುಮ್ಮನೆ ಅಲ್ಲ.

ಇದನ್ನೂ ಓದಿ: ಬೈಜುಸ್​ನ ಆಲ್ಫಾ ಯೂನಿಟ್​ನಿಂದ ಅಮೆರಿಕದ ಕೋರ್ಟ್​ನಲ್ಲಿ ದಿವಾಳಿ ತಡೆಗೆ ಅರ್ಜಿ ಸಲ್ಲಿಕೆ

ಮಾಹಿತಿ ಪ್ರಕಾರ ಚೀನೀ ಕ್ರಾಂತಿ ಸಂದರ್ಭದಲ್ಲಿ ಶಾಲೆಯಿಂದ ಹೊರಬಿದ್ದ ಶಾನ್​ಶಾನ್ ಕಟ್ಟಡ ಕಾರ್ಮಿಕನಾಗಿ ಕೆಲಸ ಆರಂಭಿಸಿದ್ದರು. ಬಳಿಕ ದಿನಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದರು. ನಂತರ ಪಾನೀಯ ಪದಾರ್ಥಗಳ ಸೇಲ್ಸ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸಿದ್ದರು.

Rag to Riches Story, Know How Chinese construction worker Become Richest Person

ನೋಂಗ್​ಫು ಸ್ಪ್ರಿಂಗ್

ಈ ಸೇಲ್ಸ್ ಏಜೆಂಟ್ ಕೆಲಸವು ಝೋಂಗ್ ಶಾನ್​ಶಾನ್ ಅವರ ಜೀವನಕ್ಕೆ ತಿರುವು ಕೊಡುತ್ತದೆ. 1988ರಲ್ಲಿ ವಾಟರ್ ಬಾಟಲ್ ಬಿಸಿನೆಸ್ ಆರಂಭಿಸಲು ಅದು ಕಾರಣವಾಗುತ್ತದೆ. ಕಂಪನಿ ಶುರುವಾಗಿ ಮೂರು ದಶಕದ ಬಳಿಕ ಷೇರುಪೇಟೆಯಲ್ಲಿ ಅದು ಲಿಸ್ಟ್ ಆಗುತ್ತದೆ. ಹಾಂಕಾಂಗ್​ನ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ನೋಂಗ್​ಫು ಸ್ಪ್ರಿಂಗ್ ಕಂಪನಿಯ ಷೇರು ಸಖತ್ ಬೆಲೆ ಪಡೆದುಕೊಳ್ಳುತ್ತಿದೆ. ಇವತ್ತು ಅದರ ಷೇರುಸಂಪತ್ತು ಹಲವು ಬಿಲಿಯನ್ ಡಾಲರ್​ನಷ್ಟಿದೆ. ರುಪಾಯಿ ಲೆಕ್ಕದಲ್ಲಿ 5 ಲಕ್ಷ ಕೋಟಿ ರೂಗಿಂತಲೂ ಹೆಚ್ಚಿದೆ. 20,000 ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳು ಈ ವಾಟರ್ ಬಾಟಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ