AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tobacco: ತಂಬಾಕು ಉತ್ಪನ್ನ ತಯಾರಿಸುವ ಯಂತ್ರಗಳ ನೊಂದಣಿ ಆಗದಿದ್ದರೆ ಲಕ್ಷ ರೂ ದಂಡ: ಆದಾಯ ಸೋರಿಕೆ ತಡೆಗೆ ಸರ್ಕಾರ ಕ್ರಮ

GST Updates: ಪಾನ್ ಮಸಾಲ, ಗುಟ್ಕಾ ತಯಾರಿಸುವ ಯಂತ್ರೋಪಕರಣಗಳನ್ನು ಜಿಎಸ್​ಟಿ ಪ್ರಾಧಿಕಾರದ ಬಳಿ ನೊಂದಾಯಿಸಬೇಕು ಎಂಬ ನಿಯಮ ಇದೆ. ಈ ಕಾನೂನನ್ನು ಪಾಲಿಸದೇ ಹೋದರೆ ಅಂಥ ಯಂತ್ರೋಪಕರಣಕ್ಕೆ ಒಂದು ಲಕ್ಷ ರೂ ದಂಡ ವಿಧಿಸುವ ಹೊಸ ಕಾನೂನು ಮಾಡಲಾಗಿದೆ. ತಂಬಾಕು ಉದ್ಯಮದಿಂದ ಬರುವ ತೆರಿಗೆ ಆದಾಯದಲ್ಲಿ ಸೋರಿಕೆ ತಡೆಯಲು ಮಾಡಿರುವ ಈ ನಿಯಮ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.

Tobacco: ತಂಬಾಕು ಉತ್ಪನ್ನ ತಯಾರಿಸುವ ಯಂತ್ರಗಳ ನೊಂದಣಿ ಆಗದಿದ್ದರೆ ಲಕ್ಷ ರೂ ದಂಡ: ಆದಾಯ ಸೋರಿಕೆ ತಡೆಗೆ ಸರ್ಕಾರ ಕ್ರಮ
ಗುಟ್ಕಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 04, 2024 | 4:21 PM

Share

ನವದೆಹಲಿ, ಫೆ. 4: ಪಾನ್ ಮಸಾಲ, ಗುಟ್ಕಾ ಇತ್ಯಾದಿ ತಂಬಾಕು ಉತ್ಪನ್ನಗಳ (tobacco products) ತಯಾರಕರು ತಮ್ಮ ಪ್ಯಾಕಿಂಗ್ ಯಂತ್ರೋಪಕರಣವನ್ನು (packing machinery) ನೊಂದಾಯಿಸದೇ ಹೋದರೆ ಒಂದು ಲಕ್ಷ ರೂ ದಂಡ ಕಟ್ಟಬೇಕಾಗುತ್ತದೆ. ಹಾಗಂತ ಸರ್ಕಾರ ಹೊಸ ಕಟ್ಟಳೆ ಹೊರಡಿಸಿದೆ. ತಂಬಾಕು ಉದ್ಯಮದಿಂದ ಸರ್ಕಾರ ಬರುವ ಆದಾಯದಲ್ಲಿ ಸೋರಿಕೆ (Tax evasion) ತಡೆಯುವ ಯತ್ನವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಏಪ್ರಿಲ್ 1ರಿಂದ ಈ ಹೊಸ ಕಾನೂನು ಜಾರಿಗೆ ಬರುತ್ತದೆ. ತಂಬಾಕು ಉತ್ಪನ್ನ ತಯಾರಿಸುವ ಯಂತ್ರವನ್ನು ಜಿಎಸ್​ಟಿ ಪ್ರಾಧಿಕಾರದಲ್ಲಿ ನಮೂದಿಸುವುದು ಕಡ್ಡಾಯವಾಗಿರಲಿದೆ. ಈ ಮುಂಚೆಯೇ ಈ ನಿಯಮ ಇತ್ತಾದರೂ ಬಹಳಷ್ಟು ಮಂದಿ ಇದನ್ನು ಪಾಲಿಸುತ್ತಿರಲಿಲ್ಲ. ಈಗ ಕೇಂದ್ರೀಯ ಜಿಎಸ್​ಟಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು ಅದರಂತೆ ಒಂದು ಲಕ್ಷ ರೂ ದಂಡ ವಿಧಿಸುವ ಕ್ರಮ ಸೇರಿಸಲಾಗಿದೆ.

2024ರ ಹಣಕಾಸು ಮಸೂದೆಯಲ್ಲಿ ಈ ಜಿಎಸ್​ಟಿ ಕಾಯ್ದೆಗೆ ತಿದ್ದುಪಡಿ ಇದೆ. ಯಂತ್ರೋಪಕರಣವನ್ನು ನೊಂದಾಯಿಸದೇ ಹೋದಲ್ಲಿ ಒಂದು ಲಕ್ಷ ರೂ ದಂಡ ವಿಧಿಸುವುದರ ಒತೆಗೆ ಆ ಯಂತ್ರೋಪಕರಣವನ್ನೇ ಜಫ್ತಿ ಮಾಡಿಕೊಳ್ಳುವ ಅಧಿಕಾರವನ್ನು ಜಿಎಸ್​ಟಿ ಅಧಿಕಾರಿಗಳು ಹೊಂದಿರುತ್ತಾರೆ.

ಇದನ್ನೂ ಓದಿ: ವರ್ಕ್ ಫ್ರಂ ಹೋಮ್ ಬೇಡ ಎಂದ ಸಾಫ್ಟ್​ವೇರ್ ಕಂಪನಿ ವಿರುದ್ಧ ತಿರುಗಿಬಿದ್ದ 5,000ಕ್ಕೂ ಹೆಚ್ಚು ಉದ್ಯೋಗಿಗಳು

ಯಂತ್ರೋಪಕರಣ ನೊಂದಾಯಿಸುವುದನ್ನು ಕಡ್ಡಾಯ ಪಡಿಸಿರುವುದು ಯಾಕೆ?

ಪಾನ್ ಮಸಾಲ ಮತ್ತು ಗುಟ್ಕಾ ವ್ಯವಹಾರದಲ್ಲಿ ತೆರಿಗೆ ಕಳ್ಳತನ ಆಗುತ್ತಿರುವುದು ಬೆಳಕಿಗೆ ಬಂದಿತ್ತು. ಈ ತೆರಿಗೆ ಆದಾಯ ಸೋರಿಕೆ ಆಗುವುದನ್ನು ತಡೆಯಲು ರಾಜ್ಯ ಹಣಕಾಸು ಸಚಿವರನ್ನೊಳಗೊಂಡ ಸಮಿತಿ ವರದಿ ಮಂಡಿಸಿತ್ತು. ಕಳೆದ ವರ್ಷ (2023) ಫೆಬ್ರುವರಿಯಲ್ಲಿ ನಡೆದ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಈ ವರದಿಗೆ ಅನುಮೋದನೆ ಕೊಡಲಾಯಿತು. ಯಂತ್ರೋಪಕರಣಗಳನ್ನು ಜಿಎಸ್​ಟಿ ಪ್ರಾಧಿಕಾರದಲ್ಲಿ ನೊಂದಾಯಿಸುವುದನ್ನು ಕಡ್ಡಾಯಗೊಳಿಸಬೇಕೆಂಬ ಸಲಹೆ ಆ ವರದಿಯಲ್ಲಿ ತಿಳಿಸಲಾಗಿತ್ತು.

ಆದರೂ ಕೂಡ ಬಹಳಷ್ಟು ಗುಟ್ಕಾ ಕಂಪನಿಗಳು ಈ ನಿಯಮ ಪಾಲಿಸುತ್ತಿಲ್ಲ ಎಂಬುದು ಗೊತ್ತಾಯಿತು. ಹೀಗಾಗಿ, ಹಣಕಾಸು ಮಸೂದೆ ಮೂಲಕ ಕಾನೂನಿನಲ್ಲಿ ತಿದ್ದುಪಡಿ ತಂದು, ನೊಂದಣಿಯಾದ ಪ್ರತಿಯೊಂದು ಯಂತ್ರೋಪಕರಣಕ್ಕೂ ಒಂದು ಲಕ್ಷ ರೂ ದಂಡ ಹಾಕುವ ಕ್ರಮ ಘೋಷಿಸಲಾಗಿದೆ. ಮಾರ್ಚ್ 31ರವರೆಗೂ ಇದಕ್ಕೆ ಕಾಲಾವಕಾಶ ಇದೆ.

ಇದನ್ನೂ ಓದಿ: ಕೇವಲ 27ರ ವಯಸ್ಸಿಗೆ ಬಿಲಿಯನೇರ್ ಆದ ಪರ್ಲ್ ಕಪೂರ್; ಇವರು ಕಟ್ಟಿದ ಝೈಬರ್ 365 ಏಷ್ಯಾದ ಅತಿವೇಗದ ಯೂನಿಕಾರ್ನ್

ತಂಬಾಕು ಉತ್ಪನ್ನಗಳ ಯಂತ್ರೋಪಕರಣ ನೊಂದಾಯಿಸುವುದು ಹೇಗೆ?

ಗುಟ್ಕಾ ಮತ್ತು ಪಾನ್ ಮಸಾಲ ತಯಾರಿಸುವ ಪ್ರತಿಯೊಂದು ಯಂತ್ರ ಹಾಗೂ ಅದರ ಉತ್ಪನ್ನ ಸಾಮರ್ಥ್ಯದ ವಿವರವನ್ನು ಜಿಎಸ್​ಟಿ ಎಸ್​ಆರ್​ಎಂ-1 ಫಾರ್ಮ್​ನಲ್ಲಿ ನಮೂದಿಸಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ