Paytm: ಪಾತಾಳಕ್ಕೆ ಕುಸಿದ ಪೇಟಿಎಂ ಷೇರು ಖರೀದಿಸಿದ ಮಾರ್ಗನ್ ಸ್ಟಾನ್ಲೀ ನಡೆಯ ಮರ್ಮವೇನು? ನೆಟ್ಟಿಗರ ರಿಯಾಕ್ಷನ್ಸ್ ಇವು?

Morgan Stanley Buy Paytm Shares: ಜಾಗತಿಕ ಹಣಕಾಸು ದೈತ್ಯ ಸಂಸ್ಥೆ ಮಾರ್ಗನ್ ಸ್ಟಾನ್ಲೀ ಫೆ. 2ರಂದು ಪೇಟಿಎಂನ 50 ಲಕ್ಷ ಷೇರುಗನ್ನು 243 ಕೋಟಿ ರೂಗೆ ಖರೀದಿಸಿದೆ. ಆರ್​ಬಿಐ ನಿರ್ಬಂಧದ ಬಳಿಕ ಪೇಟಿಎಂ ಷೇರುಬೆಲೆ 500 ರೂಗಿಂತ ಕಡಿಮೆಗೆ ಕುಸಿದಿದೆ. ಈ ಹೊತ್ತಲ್ಲಿ ಮಾರ್ಗನ್ ಸ್ಟಾನ್ಲೀ ಇಟ್ಟಿರುವ ನಡೆ ಕುತೂಹಲ ಮೂಡಿಸಿದೆ. ಅಮೆರಿಕ ಮೂಲದ ಹಣಕಾಸು ಸಂಸ್ಥೆಯ ಈ ನಡೆಯ ಹಿಂದೆ ಏನು ತಂತ್ರ ಇರಬಹುದು ಎಂದು ನೆಟ್ಟಿಗರು ತಮ್ಮ ಅನಿಸಿಕೆಗಳನ್ನು ತೋರ್ಪಡಿಸಿದ್ದಾರೆ.

Paytm: ಪಾತಾಳಕ್ಕೆ ಕುಸಿದ ಪೇಟಿಎಂ ಷೇರು ಖರೀದಿಸಿದ ಮಾರ್ಗನ್ ಸ್ಟಾನ್ಲೀ ನಡೆಯ ಮರ್ಮವೇನು? ನೆಟ್ಟಿಗರ ರಿಯಾಕ್ಷನ್ಸ್ ಇವು?
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 04, 2024 | 12:59 PM

ಷೇರುಮಾರುಕಟ್ಟೆಯ ವಾರದ ಕೊನೆಯ ದಿನವಾದ ಶುಕ್ರವಾರದಂದು ಮಾರ್ಗನ್ ಸ್ಟಾನ್ಲೀ ಸಂಸ್ಥೆ ಒನ್97 ಕಮ್ಯೂನಿಕೇಶನ್ಸ್​ನ (One97 Communications) 50 ಲಕ್ಷ ಷೇರುಗಳನ್ನು ಖರೀದಿಸಿ ಎಲ್ಲರ ಗಮನ ಸೆಳೆಯಿತು. ಪೇಟಿಎಂನ ಮಾತೃಸಂಸ್ಥೆಯಾದ ಒನ್97 ಕಮ್ಯೂನಿಕೇಶನ್ಸ್ ಷೇರುಬೆಲೆ ಕನಿಷ್ಠ ಮಟ್ಟಕ್ಕೆ ಕುಸಿದ ಸಂದರ್ಭದಲ್ಲಿ ಮಾರ್ಗನ್ ಸ್ಟಾನ್ಲೀ (Morgan Stanley) 243.60 ಕೋಟಿ ರೂ ಮೊತ್ತದಷ್ಟು ಹೂಡಿಕೆ ಮಾಡಿರುವುದು ಗಮನಾರ್ಹ. ಆದರೆ, ಪ್ರತೀ ಷೇರಿಗೆ 487.20 ರೂನಂತೆ ಈ ಹಣಕಾಸು ಸಂಸ್ಥೆ ಷೇರುಗಳನ್ನು ಖರೀದಿಸಿರುವುದು ಮೇಲ್ನೋಟಕ್ಕೆ ಲಾಭಕಾರಿ ಎಂದನಿಸುತ್ತದೆ.

ಆರ್​ಬಿಐ ನಿರ್ಬಂಧದ ಬಳಿಕ ಪೇಟಿಎಂ ಷೇರುಗಳು (ಒನ್97 ಕಮ್ಯೂನಿಕೇಶನ್ಸ್) ಶೇ. 20ರಷ್ಟು ಕುಸಿತ ಕಂಡಿವೆ. ಈ ಘಟನೆಗೂ ಮುನ್ನ ಪೇಟಿಎಂ ಷೇರಿಗೆ ಬೇಡಿಕೆಯೇನೂ ಇರಲಿಲ್ಲ. 2021ರಲ್ಲಿ ಅದರ ಆರಂಭಿಕ ಷೇರು ಬೆಲೆ 2,150 ರೂ ಇತ್ತು. ಅಲ್ಲಿಂದ ನಿರಂತರವಾಗಿ ಕುಸಿಯುತ್ತಾ ಬಂದು ಈಗ 500 ರೂಗಿಂತ ಒಳಗೆ ಬಂದಿದೆ. ಇನ್ನೂ ಕೆಳಗೆ ಕುಸಿಯುವ ಸಾಧ್ಯತೆಯೂ ಇದೆ. ಇಂಥ ಹೊತ್ತಲ್ಲಿ ಮಾರ್ಗನ್ ಸ್ಟಾನ್ಲೀ ಷೇರು ಖರೀದಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಫೆ. 29ರ ನಂತರ ಪೇಟಿಎಂನಲ್ಲಿ ನೀವು ಏನು ಬಳಸಬಹುದು, ಯಾವುದು ಸಾಧ್ಯವಿಲ್ಲ? ಇಲ್ಲಿದೆ ಡೀಟೇಲ್ಸ್

ಅಮೆರಿಕದ ಫೈನಾನ್ಸ್ ಕಂಪನಿಯಾಗಿರುವ ಮಾರ್ಗನ್ ಸ್ಟಾನ್ಲೀ ತನ್ನ ಆಧೀನ ಸಂಸ್ಥೆಯೊಂದರ ಮುಖಾಂತರ ಎನ್​ಎಸ್​ಇನಲ್ಲಿ ಪೇಟಿಎಂನ 50 ಲಕ್ಷ ಷೇರುಗಳು, ಅಂದರೆ ಶೇ. 0.8ರಷ್ಟು ಷೇರುಪಾಲನ್ನು ಖರೀದಿಸಿದೆ. ಈ ಬೆಳವಣಿಗೆ ಬಗ್ಗೆ ಇಂಟರ್ನೆಟ್​ನಲ್ಲಿ ಜನರ ಪ್ರತಿಕ್ರಿಯೆ ವಿಭಿನ್ನವಾಗಿದೆ.

ಪೇಟಿಎಂ ಷೇರಿಗೆ ಬೇಡಿಕೆ ಕುದುರಿಸುವ ತಂತ್ರವಾ?

ಪೇಟಿಎಂ ಬಗ್ಗೆ ನಕಾರಾತ್ಮಕ ಭಾವನೆ ನೆಲಸಿದೆ. ಮಾರ್ಗನ್ ಸ್ಟಾನ್ಲೀ ಈಗ ಷೇರು ಖರೀದಿ ಮಾಡಿದ ಬಳಿಕ ಪೇಟಿಎಂ ಬೆಲೆ ಕುಸಿತ ನಿಲ್ಲಬಹುದು. ಆ ಷೇರಿಗೆ ಮತ್ತೆ ಬೇಡಿಕೆ ಶುರುವಾಗಬಹುದು ಎಂದು ರೆಡ್ಡಿಟ್​ನಲ್ಲಿ ಕೆಲವರು ಕಾಮೆಂಟಿಸಿದ್ದಾರೆ.

ಇದನ್ನೂ ಓದಿ: ವರ್ಕ್ ಫ್ರಂ ಹೋಮ್ ಬೇಡ ಎಂದ ಸಾಫ್ಟ್​ವೇರ್ ಕಂಪನಿ ವಿರುದ್ಧ ತಿರುಗಿಬಿದ್ದ 5,000ಕ್ಕೂ ಹೆಚ್ಚು ಉದ್ಯೋಗಿಗಳು

ಮಾರ್ಗನ್ ಸ್ಟಾನ್ಲೀ ಮೂಲಕ ಕೆಲ ಹೂಡಿಕೆದಾರರು ಪೇಟಿಎಂ ಷೇರು ಖರೀದಿಸಿರುವಂತೆ ತೋರುತ್ತಿದೆ. ಯಾರಿರಬಹುದು ಈ ಹೂಡಿಕೆದಾರರು ಎಂಬುದು ಕುತೂಹಲದ ಸಂಗತಿ. ಇದು ಷೇರುಕುಸಿತ ತಡೆಯಲು ಮಾಡಿದ ತಂತ್ರದಂತೆ ಇದೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಪೇಟಿಎಂ ಬಹಳ ಗಟ್ಟಿ ತಳಹದಿಯ ಕಂಪನಿ. ಮುನ್ನೂರು ರೂಗಿಂತ ಕಡಿಮೆವರೆಗೆ ಪೇಟಿಎಂ ಷೇರುಬೆಲೆ ಕುಸಿಯಬಹುದು. ಆ ಬಳಿಕ ದೇಶೀಯ ಹೂಡಿಕೆದಾರರು ಮತ್ತು ರೀಟೇಲ್ ಹೂಡಿಕೆದಾರರು ಖರೀದಿಸಲು ಆರಂಭ ಮಾಡಬಹುದು. ಮತ್ತೆ ಪೇಟಿಎಂ ಷೇರುಬೆಲೆ ಏರುಗತಿಗೆ ಬರುತ್ತದೆ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ