ಹೊಸ ಹಣಕಾಸು ವರ್ಷದ ಆರಂಭ ಏಪ್ರಿಲ್ 1, 2022ರಿಂದ ಆಗುತ್ತದೆ. ಅಂದಿನಿಂದ ಕ್ರಿಪ್ಟೋಕರೆನ್ಸಿ (Cryptocurrency) ಹೂಡಿಕೆದಾರರು ಈ ಡಿಜಿಟಲ್ ಟೋಕನ್‌ಗಳಲ್ಲಿ ಹೂಡಿಕೆ ಮಾಡುವಾಗ, ವಹಿವಾಟು ನಡೆಸುವಾಗ ಅಥವಾ ನಷ್ಟವನ್ನೇ ಕಂಡರೂ ಅದರ ಬಾಧೆಯನ್ನು ವಿವಿಧ ಹಂತಗಳಲ್ಲಿ ಅನುಭವಿಸುತ್ತಾರೆ. ವಜೀರ್ಎಕ್ಸ್ ಸಿಇಒ ನಿಶ್ಚಲ್ ಶೆಟ್ಟಿ ಅವರ ಮಾತಿನಲ್ಲಿ ಹೇಳುವುದಾದರೆ, ಉದ್ಯಮವು “ನೋವಿನ ಅವಧಿ”ಯನ್ನು ಪ್ರವೇಶಿಸಿದೆ. ಲೋಕಸಭೆಯು ಶುಕ್ರವಾರ ಹಣಕಾಸು ಮಸೂದೆ 2022 ಅನ್ನು ಅಂಗೀಕರಿಸಿದ್ದು, ವರ್ಚುವಲ್ ಡಿಜಿಟಲ್ ಆಸ್ತಿಗಳ (VDAs) ಮೇಲಿನ ತೆರಿಗೆಯ ಕೇಂದ್ರ ಬಜೆಟ್ 2022-23ರ ಪ್ರಸ್ತಾವನೆಗಳನ್ನು ಅನುಮೋದಿಸಿತು. ಏಪ್ರಿಲ್ 1ರಿಂದ ಈ ಬದಲಾವಣೆಗಳು ಜಾರಿಗೆ ಬರುತ್ತವೆ. ಹೊಸ ನಿಯಮಗಳು ಪ್ರಾರಂಭವಾಗುವ ಮೊದಲು ಡಿಜಿಟಲ್ ಟೋಕನ್‌ಗಳನ್ನು ಮಾರಾಟ ಮಾಡುವುದು ಉತ್ತಮವೇ ಎಂದು ಹೂಡಿಕೆದಾರರು ಈಗ ಆಲೋಚಿಸುತ್ತಿದ್ದಾರೆ.
ಏಪ್ರಿಲ್ 1ರಿಂದ ಹೂಡಿಕೆದಾರರ ಆದಾಯದ ಗಾತ್ರವನ್ನು ಲೆಕ್ಕಿಸದೆ ಕ್ರಿಪ್ಟೋ ಸ್ವತ್ತುಗಳಿಂದ ಯಾವುದೇ ಆದಾಯದ ಮೇಲೆ ಶೇಕಡಾ 30ರಷ್ಟ ಬಂಡವಾಳ ಲಾಭದ ತೆರಿಗೆ ಅನ್ವಯಿಸುತ್ತದೆ; ಹೂಡಿಕೆದಾರರು ಡಿಜಿಟಲ್ ಟೋಕನ್‌ಗಳನ್ನು ಖರೀದಿಸಿದಾಗ ಅಥವಾ ಮಾರಾಟ ಮಾಡುವಾಗ ಪ್ರತಿ ಬಾರಿಯೂ ಶೇ 1ರಷ್ಟು ಟಿಡಿಎಸ್ ಅನ್ನು ವಿಧಿಸಲಾಗುತ್ತದೆ – ಈ ತೆರಿಗೆಗಳು ಮಾರುಕಟ್ಟೆಯಲ್ಲಿನ ಲಿಕ್ವಿಡಿಟಿಯನ್ನು ನಾಶ ಮಾಡಲು ಮತ್ತು ಹೂಡಿಕೆ ವ್ಯವಸ್ಥಾಪಕರ ಪ್ರಕಾರ, ಹೂಡಿಕೆದಾರರು ಸ್ಟಾಕ್‌ಗಳಂತಹ ಇತರ ಆಯ್ಕೆಗಳಿಗೆ ಬದಲಾಗುವುದನ್ನು ಖಚಿತಪಡಿಸಿಕೊಳ್ಳಲು ಸಾಕು. ಹೊಸ ನಿಯಮಗಳ ಪ್ರಕಾರ, ಹೂಡಿಕೆದಾರರು ಒಂದು ಕ್ರಿಪ್ಟೋಕರೆನ್ಸಿಯಲ್ಲಿನ ಲಾಭಗಳ ವಿರುದ್ಧ ನಷ್ಟವನ್ನು ಹೊಂದಾಣಿಕೆ ಮಾಡಲು ಸಾಧ್ಯವಾಗುವುದಿಲ್ಲ.
ಮಸೂದೆಯ ಸೆಕ್ಷನ್ 115BBHನ ನಿಯಮಾವಳಿ (2)(b), ಕಾಯ್ದೆಯ ಯಾವುದೇ ಇತರ ನಿಬಂಧನೆಗಳ ವಿರುದ್ಧ VDA ನಷ್ಟವನ್ನು ಹೊಂದಿಸುವುದಕ್ಕೆ ಹೂಡಿಕೆದಾರರಿಗೆ ಅವಕಾಶ ನೀಡುವುದಿಲ್ಲ. ಪ್ರಸಕ್ತ ಹಣಕಾಸು ವರ್ಷ 2021-22 ಅಂತ್ಯಗೊಳ್ಳುವ ಮೊದಲು ಹೂಡಿಕೆದಾರರು ಅಂತಹ ಸ್ವತ್ತುಗಳನ್ನು ಮಾರಾಟ ಮಾಡಬೇಕಾದರೆ ಲಾಭವನ್ನು ಆದಾಯಕ್ಕೆ ಸೇರಿಸಲಾಗುತ್ತದೆ ಮತ್ತು ಕನಿಷ್ಠ ಪ್ರಮಾಣದಲ್ಲಿ ಅನ್ವಯವಾಗುವ ದರಗಳಲ್ಲಿ ತೆರಿಗೆ ವಿಧಿಸಲಾಗುತ್ತದೆ.
ಇದನ್ನೂ ಓದಿ: Cryptocurrency Index IC15: ಭಾರತದ ಮೊದಲ ಕ್ರಿಪ್ಟೋಕರೆನ್ಸಿಗಳ ಸೂಚ್ಯಂಕ ಐಸಿ15 ಪ್ರಾರಂಭಿಸಿದ ಕ್ರಿಪ್ಟೋವೈರ್