Cryptocurrency Index IC15: ಭಾರತದ ಮೊದಲ ಕ್ರಿಪ್ಟೋಕರೆನ್ಸಿಗಳ ಸೂಚ್ಯಂಕ ಐಸಿ15 ಪ್ರಾರಂಭಿಸಿದ ಕ್ರಿಪ್ಟೋವೈರ್

ಕ್ರಿಪ್ಟೋ ಸೂಪರ್ ಆ್ಯಪ್ ಆದ ಕ್ರಿಪ್ಟೋವೈರ್​ನಿಂದ ಭಾರತದ ಮೊದಲ ಕ್ರಿಪ್ಟೋಕರೆನ್ಸಿ ಸೂಚ್ಯಂಕವನ್ನು ಆರಂಭಿಸಲಾಗಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Cryptocurrency Index IC15: ಭಾರತದ ಮೊದಲ ಕ್ರಿಪ್ಟೋಕರೆನ್ಸಿಗಳ ಸೂಚ್ಯಂಕ ಐಸಿ15 ಪ್ರಾರಂಭಿಸಿದ ಕ್ರಿಪ್ಟೋವೈರ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 03, 2022 | 7:25 PM

ಕ್ರಿಪ್ಟೋ ಸೂಪರ್ ಅಪ್ಲಿಕೇಷನ್ ಆದ ಕ್ರಿಪ್ಟೋವೈರ್ ಸೋಮವಾರದಂದು ಭಾರತದ ಮೊದಲ ಕ್ರಿಪ್ಟೋಕರೆನ್ಸಿಗಳ ಸೂಚ್ಯಂಕವಾದ IC15 (ಐಸಿ15) ಪ್ರಾರಂಭಿಸಿದೆ ಎಂದು ಹೇಳಿದೆ. ಇದು ಮಾರುಕಟ್ಟೆ ಬಂಡವಾಳ ಮೌಲ್ಯದ ಮತ್ತು ಲಿಕ್ವಿಡಿಟಿಯ ಆಧಾರದಲ್ಲಿ ಟಾಪ್ 15 ಜಾಗತಿಕ ಕ್ರಿಪ್ಟೋಕರೆನ್ಸಿಗಳನ್ನು ಟ್ರ್ಯಾಕ್ ಮಾಡುತ್ತದೆ. ಕಂಪೆನಿಯ ಹೇಳಿಕೆ ಪ್ರಕಾರ, IC15 ಸೂಚ್ಯಂಕವು ಮಾರುಕಟ್ಟೆ ಬಂಡವಾಳ ಮೌಲ್ಯದ ನಿಯಮ ಆಧಾರಿತ ವಿಶಾಲ ಮಾರುಕಟ್ಟೆ ಸೂಚ್ಯಂಕವಾಗಿದೆ. ಇದು ವಿಶ್ವದ ಪ್ರಮುಖ ಕ್ರಿಪ್ಟೋ ವಿನಿಮಯ ಕೇಂದ್ರಗಳಲ್ಲಿ ಲಿಸ್ಟ್ ಮಾಡಲಾದ, ವ್ಯಾಪಕವಾಗಿ ವ್ಯಾಪಾರ ಮಾಡುವ ಟಾಪ್ 15 ಲಿಕ್ವಿಡ್ ಕ್ರಿಪ್ಟೋಕರೆನ್ಸಿಗಳ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡುತ್ತದೆ ಹಾಗೂ ಅಳೆಯುತ್ತದೆ. 15 ಕ್ರಿಪ್ಟೋಕರೆನ್ಸಿಗಳಲ್ಲಿ ಬಿಟ್‌ಕಾಯಿನ್, ಎಥೆರಿಯಮ್, ಬಿನಾನ್ಸ್ ಕಾಯಿನ್, ಸೋಲಾನಾ, ಕಾರ್ಡಾನೊ, ರಿಪಲ್, ಟೆರಾ, dogecoin ಮತ್ತು ಶಿಬಾ ಇನು ಸಹ ಸೇರಿವೆ.

ಡೊಮೇನ್ ತಜ್ಞರು, ಉದ್ಯಮದ ಅಭ್ಯಾಸನಿರತರು ಮತ್ತು ಶಿಕ್ಷಣತಜ್ಞರನ್ನು CryptoWireನ ಸೂಚ್ಯಂಕ ಆಡಳಿತ ಸಮಿತಿಯು ಒಳಗೊಂಡಿರುತ್ತದೆ. ಪ್ರತಿ ತ್ರೈಮಾಸಿಕದಲ್ಲಿ ಸೂಚ್ಯಂಕವನ್ನು ಮರುಸಮತೋಲನ ಮಾಡುವಾಗ ಅದನ್ನು ನಿರ್ವಹಿಸುತ್ತದೆ, ಮೇಲ್ವಿಚಾರಣೆ ಮಾಡುತ್ತದೆ ಮತ್ತು ನಿರ್ವಹಿಸುತ್ತದೆ. ಸೂಚ್ಯಂಕದ ಮೂಲ ಮೌಲ್ಯವನ್ನು 10,000ಕ್ಕೆ ಹೊಂದಿಸಲಾಗಿದೆ ಹಾಗೂ ಮೂಲ ದಿನಾಂಕ 1 ಏಪ್ರಿಲ್, 2018 ಆಗಿದೆ. 1 ಜನವರಿ 2022ರಂತೆ IC15 ಸೂಚ್ಯಂಕ ಮುಕ್ತ ಮೌಲ್ಯವು 71,463.30 ಪಾಯಿಂಟ್‌ಗಳಲ್ಲಿದೆ.

Cryptowire ಪ್ರಕಾರ, ವೈವಿಧ್ಯಮಯ ಪೋರ್ಟ್‌ಫೋಲಿಯೊ ಹೊಂದುವುದಕ್ಕೆ ಅನುಸರಿಸಲು ಸುಲಭವಾದ ಸಲ್ಯೂಷನ್ ಪ್ರಸ್ತುತಪಡಿಸುವ ಉದ್ದೇಶದಿಂದ IC15 ಸೂಚ್ಯಂಕವನ್ನು ವಿನ್ಯಾಸಗೊಳಿಸಲಾಗಿದೆ. ಫಂಡ್ ಮ್ಯಾನೇಜರ್‌ಗಳಿಗೆ ಕಾರ್ಯಕ್ಷಮತೆ ಮಾನದಂಡವಾಗಿ ಇದು ಕಾರ್ಯನಿರ್ವಹಿಸುತ್ತದೆ ಮತ್ತು ಸೂಚ್ಯಂಕದ ನಿಖರವಾದ ಪ್ರತಿಕೃತಿಯಂತೆ ಇರುತ್ತದೆ. ಉದಾಹರಣೆಗೆ: ಇಂಡೆಕ್ಸ್ ಫಂಡ್, ಇಟಿಎಫ್, ಇತ್ಯಾದಿಗಳಂತೆ ಸೂಚ್ಯಂಕಕ್ಕೆ ಜೋಡಣೆಯಾದ ಸಂಯೋಜಿತ ಉತ್ಪನ್ನಗಳ ಆದ್ಯತೆ ಸೂಚ್ಯಂಕವಾಗಿದೆ.

“ಕ್ರಿಪ್ಟೋ IC15ರ ಭಾರತದ ಮೊದಲ ಸೂಚ್ಯಂಕವನ್ನು ಪ್ರಾರಂಭಿಸುವುದರೊಂದಿಗೆ ನಾವು ಸಂಪೂರ್ಣ ಕ್ರಿಪ್ಟೋ ಮತ್ತು ಬ್ಲಾಕ್‌ಚೈನ್ ಎಕೋ ಸಿಸ್ಟಮ್​ಗೆ ಜ್ಞಾನದ ವಲಯವನ್ನು ಪೂರ್ಣಗೊಳಿಸಲು ಉದ್ದೇಶಿಸಿದ್ದೇವೆ. ಇದು ‘ಸಂಪಾದಿಸುವ ಮೊದಲು ಕಲಿಯಿರಿ’ ಉಪಕ್ರಮವನ್ನು ಹಬ್ಬಿಸುವುದು ಮಾತ್ರವಲ್ಲದೆ ಮತ್ತೊಂದು ಪ್ರಬಲವಾದ ಮಧ್ಯಪ್ರವೇಶದೊಂದಿಗೆ ಉದ್ಯಮಕ್ಕೆ ಸೇವೆ ಸಲ್ಲಿಸುತ್ತದೆ. CryptoWireನಲ್ಲಿ ಸಾಧ್ಯತೆಗಳನ್ನು ಮೌಲ್ಯಮಾಪನ ಮಾಡಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿರುವ ಎಲ್ಲ ಸಾಧನಗಳನ್ನು ಪ್ರಸ್ತುತಪಡಿಸುವ ಮೂಲಕ ಮಾರುಕಟ್ಟೆ ಅಭಿವೃದ್ಧಿಯನ್ನು ಸುಲಭಗೊಳಿಸುವುದು ಮತ್ತು ಅಪಾಯವನ್ನು ತಗ್ಗಿಸುವುದು ನಮ್ಮ ವಿಧಾನವಾಗಿದೆ,” ಎಂದು ಕ್ರಿಪ್ಟೋವೈರ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಗೀಶ್ ಸೋನಗಾರ ಹೇಳಿದ್ದಾರೆ.

63 ಮೂನ್ಸ್ ಟೆಕ್ನಾಲಜೀಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಟಿಕ್ಕರ್‌ಪ್ಲಾಂಟ್ ಡಿಸೆಂಬರ್‌ನಲ್ಲಿ ಕ್ರಿಪ್ಟೋವೈರ್ ಎಂಬ ಜಾಗತಿಕ ಕ್ರಿಪ್ಟೋ ಸೂಪರ್ ಅಪ್ಲಿಕೇಷನ್ ಅನ್ನು ಪ್ರಾರಂಭಿಸಿತು. ಇದು ವಿಶ್ವಾಸಾರ್ಹತೆ ಮತ್ತು ಸ್ಥಿರತೆಯ ತತ್ವಗಳ ಆಧಾರದ ಮೇಲೆ ಜ್ಞಾನ, ಸಂಶೋಧನೆ, ತರಬೇತಿ, ಅರಿವು, ಮಾಹಿತಿ ಮತ್ತು ಡೇಟಾವನ್ನು ಒದಗಿಸುವತ್ತ ಗಮನಹರಿಸಿದೆ.

ಇದನ್ನೂ ಓದಿ: Binance Coin: ಈ ವರ್ಷ ಶೇ 1300ರಷ್ಟು ಏರಿಕೆ ಕಂಡ ಕ್ರಿಪ್ಟೋಕರೆನ್ಸಿಗೆ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಮೂರನೇ ಸ್ಥಾನ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ