
ವಾಷಿಂಗ್ಟನ್, ನವೆಂಬರ್ 12: ಎನ್ವಿಡಿಯ ಸಿಇಒ ಜೆನ್ಸೆನ್ ಹುವಾಂಗ್ ಅವರು ಚೀನೀ ಗೂಢಚಾರಣಿ ಜೊತೆ ಸಂಬಂಧ ಹೊಂದಿದ್ದ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವಿವಿಧ ರೀತಿಯ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಟೆಲಿಗ್ರಾಮ್ (Telegram) ಮೆಸೇಜಿಂಗ್ ಆ್ಯಪ್‌ನ ಮುಖ್ಯಸ್ಥ ಪಾವೆಲ್ ದುರೋವ್ (Pavel Durov) ಅವರು ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಗುಪ್ತಚರ ಸಂಸ್ಥೆಗಳು ಮತ್ತು ಟೆಕ್ ಸಿಇಒಗಳ ನಡುವಿನ ನಂಟಿನ ಕುರಿತು ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ.
ತಮಗೆ ಅಂತಹ ಯಾವುದೇ ಗೂಢಚಾರಿ ಮಹಿಳೆಯರ (Spy/Honeypot) ಆಫರ್‌ಗಳು ಅಥವಾ ಡೇಟಿಂಗ್ ಆಯ್ಕೆಗಳೇ ಸಿಗುತ್ತಿಲ್ಲ ಎಂದು ಟೆಲಿಗ್ರಾಮ್ ಸಿಇಒ ಹಾಸ್ಯಮಯವಾಗಿ ಬರೆದುಕೊಂಡಿರುವುದು ಆನ್‌ಲೈನ್‌ನಲ್ಲಿ ಚರ್ಚೆಗೆ ತಿರುಗಿದೆ.
ಇದನ್ನೂ ಓದಿ: ಚೀನಾದ ಗೂಢಚಾರಿಣಿ ಸೇರಿ ಇಬ್ಬರ ಜತೆ ವಿವಾಹೇತರ ಸಂಬಂಧದ ಆರೋಪ, ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಕುರ್ಚಿಗೆ ಕಂಟಕ
ಪಾವೆಲ್ ದುರೋವ್ ಅವರ ಈ ಲಘು ಧೋರಣೆಯ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಟೆಕ್ ದಿಗ್ಗಜರು ಗಂಭೀರ ವಿಷಯಗಳ ಬಗ್ಗೆ ಈ ರೀತಿಯಾಗಿ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮುಂಚೆ ಫ್ರಾನ್ಸ್‌ನಲ್ಲಿ ಪಾವೆಲ್ ದುರೋವ್ ಬಂಧನಕ್ಕೊಳಗಾದ ಸಂದರ್ಭದಲ್ಲೂ ಅವರ ಜೊತೆಗಿದ್ದ ಸ್ನೇಹಿತೆ ಹಾಗೂ ಕ್ರಿಪ್ಟೋ ಕೋಚ್ ಜೂಲಿ ವಾವಿಲೋವಾ (Yulia Vavilova) ಅವರ ನಂಟಿನ ಬಗ್ಗೆ ಹನಿಟ್ರ್ಯಾಪ್ ವಾದಗಳು ಮುನ್ನೆಲೆಗೆ ಬಂದಿದ್ದು, ಈಗ ಅವರೇ ಈ ಕುರಿತು ವ್ಯಂಗ್ಯವಾಡಿರುವುದು ಕುತೂಹಲ ಮೂಡಿಸಿದೆ.
ಎನ್‌ವಿಡಿಯಾ ಸಹ-ಸಂಸ್ಥಾಪಕ ಮತ್ತು ಸಿಇಒ ಜೆನ್ಸೆನ್ ಹುವಾಂಗ್ ಅವರು ಕೆಲ ದಿನಗಳ ಹಿಂದಷ್ಟೇ ತಮ್ಮ ಅಕ್ರಮ ಸಂಬಂಧದ ಬಗ್ಗೆ ಬಹಿರಂಗವಾಗಿ ತಪ್ಪೊಪ್ಪಿಕೊಂಡಿದ್ದಾರೆ. ಚೀನಾದ ಗೂಢಚಾರಿಣಿ ಎಂದು ಶಂಕಿಸಲಾದ ಮಹಿಳೆ ಜೊತೆ ಅವರು ಅಫೇರ್ ಹೊಂದಿದ್ದರು. ತಮ್ಮದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಹಿರಿಯ ಅಧಿಕಾರಿಯೊಬ್ಬಳೊಂದಿಗೂ ಅವರು ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವಿಷಯವೂ ಬೆಳಕಿಗೆ ಬಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ