ಭಾರತದಲ್ಲಿ ಟೆಸ್ಲಾ ಮಾಡಲ್ ವೈ ಇವಿ ಕಾರು ಖರೀದಿಸಿದ ಮೊದಲ ವ್ಯಕ್ತಿ ಇವರೇ; ಏನೀ ಕಾರಿನ ವಿಶೇಷತೆ?

Tesla delivers first Model Y car in India: ಭಾರತದಲ್ಲಿ ಟೆಸ್ಲಾ ಕಂಪನಿಯ ಮೊದಲ ಶೋರೂಮ್ ಜುಲೈ 15ರಂದು ಮುಂಬೈನಲ್ಲಿ ತೆರೆಯಲಾಗಿದೆ. ಮೊದಲ ಕಾರಿನ ಡೆಲಿವರಿ ಇವತ್ತು ಆಗಿದೆ. ಮಹಾರಾಷ್ಟ್ರದ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಈ ಕಾರು ಖರೀದಿಸಿದ್ದಾರೆ. ಟೆಸ್ಲಾದ ಜನಪ್ರಿಯ ಕಾರು ಮಾಡಲ್​ಗಳಲ್ಲಿ ಮಾಡಲ್ ವೈ ಒಂದು. ಸಂಪೂರ್ಣ ಸುರಕ್ಷಿತ ಕಾರೆಂದು ಪರಿಗಣಿತವಾಗಿದೆ.

ಭಾರತದಲ್ಲಿ ಟೆಸ್ಲಾ ಮಾಡಲ್ ವೈ ಇವಿ ಕಾರು ಖರೀದಿಸಿದ ಮೊದಲ ವ್ಯಕ್ತಿ ಇವರೇ; ಏನೀ ಕಾರಿನ ವಿಶೇಷತೆ?
ಟೆಸ್ಲಾ ಮಾಡಲ್ ವೈ

Updated on: Sep 05, 2025 | 3:43 PM

ನವದೆಹಲಿ, ಸೆಪ್ಟೆಂಬರ್ 5: ಭಾರತದಲ್ಲಿ ಮಾರಾಟ ಕೇಂದ್ರ ತೆರೆದಿರುವ ಟೆಸ್ಲಾ ಸಂಸ್ಥೆ ಇದೀಗ ತನ್ನ ಮಾಡಲ್ ವೈ ಎಲೆಕ್ಟ್ರಿಕ್ ಕಾರುಗಳ (Tesla Model Y) ಡೆಲಿವರಿ ಆರಂಭಿಸಿದೆ. ಭಾರತದಲ್ಲಿ ಮೊದಲ ಮಾಡಲ್ ವೈ ಕಾರನ್ನು ಮಹಾರಾಷ್ಟ್ರದ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಖರೀದಿಸಿದ್ದಾರೆ. ಮುಂಬೈನ ಬಾಂದ್ರ ಕುರ್ಲಾ ಕಾಂಪ್ಲೆಕ್ಸ್​ನಲ್ಲಿರುವ ಟೆಸ್ಲಾ ಎಕ್ಸ್​ಪೀರಿಯೆನ್ಸ್ ಸೆಂಟರ್ ಎಂದು ಕರೆಯಲಾಗುವ ಶೋರೂಮ್​ನಲ್ಲಿ ಸರ್ನಾಯಕ್ ಅವರು ಟೆಸ್ಲಾ ಮಾಡಲ್ ವೈ ಪಡೆದಿದ್ದಾರೆ.

ಇಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿ ಮುಂಬೈನಲ್ಲಿ ಜುಲೈನಲ್ಲಿ ಶೋರೂಮ್ ತೆರೆದಿತ್ತು. ಅದಾಗಿ ಮರುದಿನವೇ ಪ್ರತಾಪ್ ಸರ್ನಾಯಕ್ ಅವರು ಮಾಡಲ್ ವೈ ಕಾರನ್ನು ಬುಕ್ ಮಾಡಿದ್ದರು. ಇದೀಗ ಆ ಕಾರು ಡೆಲಿವರಿ ಆಗಿದೆ. ಸಚಿವರು ಈ ಕಾರನ್ನು ತಮ್ಮ ಮೊಮ್ಮಗನಿಗೆ ಗಿಫ್ಟ್ ಆಗಿ ನೀಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಯಾವುದೇ ಒಪ್ಪಂದದಲ್ಲೂ ರೈತರು, ಮೀನುಗಾರರ ಹಿತಾಸಕ್ತಿ ಬಲಿಕೊಡೋದಿಲ್ಲ: ಸಚಿವ ಪೀಯೂಶ್ ಗೋಯಲ್

‘ಯುವ ಪೀಳಿಗೆಯವರಿಗೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಸಣ್ಣ ವಯಸ್ಸಿನಲ್ಲೇ ಅರಿವು ಮೂಡಿಸುವ ಉದ್ದೇಶ ಇದೆ. ಈ ಕಾರಿನ ಬೆಲೆ ಇವತ್ತು ಹೆಚ್ಚು ಇರಬಹುದು. ಆದರೆ, ಎಲೆಕ್ಟ್ರಿಕ್ ವಾಹನಗಳ ಬಳಕೆ ವಿಚಾರದಲ್ಲಿ ಜನರಿಗೆ ಉದಾಹರಣೆಯಾಗಿ ನಿಲ್ಲಲು ಈ ಕಾರನ್ನು ಖರೀದಿಸಿದ್ದೇನೆ’ ಎಂದು ಪ್ರತಾಪ್ ಸರ್ನಾಯಕ್ ತಿಳಿಸಿದ್ದಾರೆ.

ಎಎನ್​ಐ ತನ್ನ ಎಕ್ಸ್​ನಲ್ಲಿ ಹಾಕಿದ ಪೋಸ್ಟ್

ಯಾವುದಿದು ಟೆಸ್ಲಾ ಮಾಡಲ್ ವೈ ಕಾರು?

ಟೆಸ್ಲಾ ಕಂಪನಿ ಪೂರ್ಣವಾಗಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುತ್ತದೆ. ಮಾಡಲ್ ಎಸ್, ಮಾಡಲ್ 3, ಮಾಡಲ್ ವೈ ಮತ್ತು ಮಾಡಲ್ ಎಕ್ಸ್ ಎನ್ನುವ ಕಾರು ಮಾದರಿಗಳನ್ನು ಈವರೆಗೂ ಅದು ಪರಿಚಯಿಸಿದೆ. ಸೈಬರ್​ಟ್ರಕ್ ಎನ್ನುವ ಎಲೆಕ್ಟ್ರಿಕ್ ಟ್ರಕ್ ಕೂಡ ಬಂದಿದೆ. ಮಾಡಲ್ ಎಸ್ ಬಹಳ ಜನಪ್ರಿಯವಾಗಿದ್ದ ಕಾರು. ಈಗ ಟೆಸ್ಲಾ ಮಾಡಲ್ ಎಕ್ಸ್ ಅಮೆರಿಕ ಮತ್ತು ಚೀನಾದಲ್ಲಿ ಟ್ರೆಂಡಿಂಗ್​ನಲ್ಲಿದೆ.

ಇದನ್ನೂ ಓದಿ: ಸಿಗರೇಟುಗಳಿಗೆ ಶೇ. 40 ಜಿಎಸ್​ಟಿ ಜೊತೆಗೆ ಹೆಚ್ಚುವರಿ ಸುಂಕ ಕ್ರಮ ಮುಂದುವರಿಕೆ

ಟೆಸ್ಲಾ ಮಾಡಲ್ ವೈ ಎಂಬುದು 2019ರಲ್ಲಿ ಶುರುವಾದ ಕಾರು. ಮಾಡಲ್ 3 ಮತ್ತು ಮಾಡಲ್ ಎಕ್ಸ್ ನಡುವಿನ ವರ್ಗಕ್ಕೆ ಸೇರಿದೆ. ಸದ್ಯ ಐದು ಸೀಟರ್ ಆಗಿ ಇದು ಸಾಮಾನ್ಯವಾಗಿ ಲಭ್ಯ ಇದೆ. ಕೆಲವೆಡೆ ಏಳು ಸೀಟರ್ ಸೌಲಭ್ಯವೂ ಇದೆ.

ಮಾಡಲ್ ವೈ ಟೆಸ್ಲಾದ ಕಾರುಗಳ ಪೈಕಿ ಅತ್ಯಂತ ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಆಟೊಪೈಲಟ್ ಫೀಚರ್ಸ್, ಕ್ರ್ಯಾಷ್ ಸೇಫ್ಟಿ ಡಿಸೈನ್ ಇತ್ಯಾದಿ ಇವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ