ಪ್ರತಿನಿತ್ಯ ಅಡಿಕೆ (Arecanut Price) ದರಗಳಲ್ಲಿ ವ್ಯತ್ಯಾಸಗಳಾಗುತ್ತಿರುತ್ತವೆ. ಇದೇ ಕಾರಣಕ್ಕೆ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂದು ಬೆಳೆಗಾರರು ಪರಿಶೀಲಿಸುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಆಗಸ್ಟ್ 11) ಅಡಿಕೆ ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ನೋಡೋಣ.
ಕಳೆದ ಮೂರು ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ದರದಲ್ಲಿ ಏರಿಕೆಯಾಗುತ್ತಿದ್ದು, ಕಿಲೋಗೆ 500 ರೂ. ಸಮೀಪ ತಲುಪಿದೆ. ಪ್ರಸ್ತುತ ಮಂಗಳೂರಿನಲ್ಲಿ ಹೊಸ ಅಡಕೆ ಬೆಲೆ 447 ರೂಪಾಯಿ ಇದ್ದು, ಹಳೆ ಅಡಿಕೆಗೆ 485 ರೂ. ಇದೆ. ಕ್ಯಾಂಪ್ಕೋದಲ್ಲಿ ಪ್ರಸ್ತುತ ಕ್ವಿಂಟಾಲ್ ಹಳೆ ಅಡಕೆ 43500 ರಿಂದ 47000 ರೂ. ವರೆಗೆ ಮಾರಾಟವಾಗುತ್ತಿದ್ದು, ಕಿಂಟ್ವಾಲ್ ಹೊಸ ದಾಸ್ತಾನು 30000 ರಿಂದ 45000 ರೂ. ವರೆಗೆ ಮಾರಾಟವಾಗುತ್ತಿದೆ.
ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಮತ್ತು ಕೋಕೋ ಧಾರಣೆ ಈ ಕೆಳಗಿನಂತಿವೆ. ಇಲ್ಲಿ ನೀಡಲಾದ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.
ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ