
ನವದೆಹಲಿ, ಫೆಬ್ರುವರಿ 23: ಹತ್ತು ಕೋಟಿ ರೂಗೂ ಅಧಿಕ ಮೌಲ್ಯದ ಅತಿ ಐಷಾರಾಮಿ ಮನೆಗಳಿಗೆ (Ultra-luxury homes) ದೇಶದಲ್ಲೇ ಅತಿದೊಡ್ಡ ಮಾರುಕಟ್ಟೆ ಎಂದರೆ ಬೆಂಗಳೂರು, ಮುಂಬೈ, ದೆಹಲಿ ಮುಂತಾದ ನಗರಗಳ ಹೆಸರು ಮೊದಲು ಎದುರಾಗುತ್ತದೆ. ಆದರೆ, 2025ರಲ್ಲಿ ಅಲ್ಟ್ರಾ ಲಕ್ಷುರಿ ಮನೆಗಳಿಗೆ ದೇಶದಲ್ಲೇ ಅತಿದೊಡ್ಡ ಮಾರುಕಟ್ಟೆ ಎನಿಸಿದ್ದು ಗುರುಗ್ರಾಮ್ ಅಂತೆ. ಇಂಡಿಯಾ ಸೋತೆಬೈಸ್ ಇಂಟರ್ನ್ಯಾಷನಲ್ ರಿಯಾಲ್ಟಿ ಹಾಗೂ ಸಿಆರ್ಇ ಮ್ಯಾಟ್ರಿಕ್ಸ್ನ ಇತ್ತೀಚಿನ ಹೈ ಎಂಡ್ ಲಕ್ಸುರಿ ಹೌಸಿಂಗ್ ರಿಪೋರ್ಟ್ ಪ್ರಕಾರ 10 ಕೋಟಿ ರೂಗೂ ಅಧಿಕ ಮೌಲ್ಯದ ಮನೆಗಳು ಅತಿಹೆಚ್ಚು ಸೇಲ್ ಆಗಿದ್ದು ಗುರುಗ್ರಾಮ್ನಲ್ಲಿ.
ದೆಹಲಿ ಎಡಬದಿಯಲ್ಲಿರುವ, ಹಾಗೂ ಹರ್ಯಾಣ ರಾಜ್ಯಕ್ಕೆ ಸೇರಿದ ಗುರುಗ್ರಾಮ್ನಲ್ಲಿ 2025ರ ಕ್ಯಾಲಂಡರ್ ವರ್ಷದಲ್ಲಿ 24,120 ಕೋಟಿ ರೂ ಮೊತ್ತದ ಅಲ್ಟ್ರಾ ಲಕ್ಷುರಿ ಮನೆಗಳು ಮಾರಾಟವಾಗಿವೆಯಂತೆ. ಇದು ದೇಶದಲ್ಲೇ ಗರಿಷ್ಠ.
ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಗಳು ಅತಿಯಾಗಿ ಏರಿದ್ದು ಯಾಕೆಂದು ಕಾರಣ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್
ಈ ವರದಿ ಪ್ರಕಾರ, 2025ರಲ್ಲಿ ಗುರುಗ್ರಾಮ್ನಲ್ಲಿ ಮಾರಾಟವಾದ 10 ಕೋಟಿ ರೂಗೂ ಅಧಿಕ ಮೌಲ್ಯದ ಐಷಾರಾಮಿ ಮನೆಗಳ ಸಂಖ್ಯೆ 1,494. ಕೇವಲ ಎರಡು ವರ್ಷಗಳ ಹಿಂದೆ (2023) ಇಲ್ಲಿ ಮಾರಾಟವಾದ ಇಂಥ ಮನೆಗಳ ಸಂಖ್ಯೆ ಕೇವಲ 155. ಈಗ ಇಷ್ಟು ಸಂಖ್ಯೆಯಲ್ಲಿ ಮಾರಾಟ ಹೆಚ್ಚಳ ಆಗಿರುವುದು ಸೋಜಿಗದ ಸಂಗತಿ. ಎರಡೇ ವರ್ಷದಲ್ಲಿ ಬಹುತೇಕ ಹತ್ತು ಪಟ್ಟು ಹೆಚ್ಚು ಮನೆಗಳು ಸೇಲ್ ಆಗಿವೆ.
ಇದನ್ನೂ ಓದಿ: ಐಡಿಎಫ್ಸಿ ಫಸ್ಟ್ ಬ್ಯಾಂಕ್ನಲ್ಲಿ ನೂರಾರು ಕೋಟಿ ರೂ ಲೂಟಿ; ಹೂಡಿಕೆದಾರರಿಗೆ 14,000 ಕೋಟಿ ರೂ ನಷ್ಟ; ಏನಿದು ಹಗರಣ?
ಗುರುಗ್ರಾಮ್ ಕಳೆದ ಎರಡು ವರ್ಷದಲ್ಲಿ ಐಷಾರಾಮಿ ಮನೆಗಳಿಗೆ ದೊಡ್ಡ ಮಾರುಕಟ್ಟೆಯಾಗಿ ಬೆಳೆದಿರುವುದು ಹೇಗೆ? ಗುರುಗ್ರಾಮ್ನಲ್ಲಿ ಲಕ್ಷುರಿ ಕಾರಿಡಾರ್ಗಳು ಹೆಚ್ಚುತ್ತಿವೆ. ದ್ವಾರಕಾ ಎಕ್ಸ್ಪ್ರೆಸ್ವೇ, ಗಾಲ್ಫ್ ಕೋರ್ಸ್ ರೋಡ್, ಗಾಲ್ಫ್ ಕೋರ್ಸ್ ಎಕ್ಸ್ಟೆನ್ಷನ್ ರೋಡ್ ಇತ್ಯಾದಿ ಸ್ಥಳಗಳು, ಮೂಲಸೌಕರ್ಯ ಅಭಿವೃದ್ಧಿ, ವಿವಿಧ ಪ್ರದೇಶಗಳ ನಡುವೆ ಸಂಪರ್ಕ ಹೆಚ್ಚಳ ಇತ್ಯಾದಿ ಕಾರಣಗಳಿಂದ ಶ್ರೀಮಂತರು ಗುರುಗ್ರಾಮ್ನಲ್ಲಿ ಮನೆ ಮಾಡಿಕೊಂಡು ನೆಲಸಲು ಬಯಸುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ