AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನಲ್ಲಿ ನೂರಾರು ಕೋಟಿ ರೂ ಲೂಟಿ; ಹೂಡಿಕೆದಾರರಿಗೆ 14,000 ಕೋಟಿ ರೂ ನಷ್ಟ; ಏನಿದು ಹಗರಣ?

IDFC First Bank's Rs 590 fraud case: company shares hit 20pc lower circuit: ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ ಷೇರುಗಳು ಸೋಮವಾರ ಶೇ. 20ರಷ್ಟು ಬೆಲೆ ಕಳೆದುಕೊಂಡಿವೆ. ಹೂಡಿಕೆದಾರರು ಷೇರುಗಳನ್ನು ಮಾರಲು ಮುಗಿಬೀಳುತ್ತಿದ್ದಾರೆ. ಬ್ಯಾಂಕ್​ನ ಚಂಡೀಗಡ ಬ್ರ್ಯಾಂಚ್​ನಲ್ಲಿ ಒಟ್ಟು 590 ಕೋಟಿ ರೂ ಮೌಲ್ಯದ ಅನಧಿಕೃತ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ. ಹರ್ಯಾಣ ಸರ್ಕಾರದ ಇಲಾಖೆಗಳಿಗೆ ಸೇರಿದ ಬ್ಯಾಂಕ್ ಖಾತೆಗಳಲ್ಲಿ ಅನಧಿಕೃತ ವಹಿವಾಟು ಆಗಿದೆ.

ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನಲ್ಲಿ ನೂರಾರು ಕೋಟಿ ರೂ ಲೂಟಿ; ಹೂಡಿಕೆದಾರರಿಗೆ 14,000 ಕೋಟಿ ರೂ ನಷ್ಟ; ಏನಿದು ಹಗರಣ?
ಐಡಿಎಫ್​ಸಿ ಫಸ್ಟ್ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 23, 2026 | 1:25 PM

Share

ನವದೆಹಲಿ, ಫೆಬ್ರುವರಿ 23: ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ (IDFC First Bank) ಚಂಡೀಗಡ ಶಾಖೆಯಲ್ಲಿ 590 ಕೋಟಿ ರೂ ವಂಚನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಈ ಬ್ಯಾಂಕ್​ನ ಷೇರುಗಳು ತರಗೆಲೆಯಲ್ಲಿ ಉದುರುತ್ತಿವೆ. ಸೋಮವಾರ ಈ ಬ್ಯಾಂಕ್​ನ ಷೇರುಬೆಲೆ ಶೇ. 20ರ ಕೆಳಗಿನ ಮಿತಿಯಷ್ಟು ಕುಸಿದಿದೆ. ಇದರ ಷೇರುಗಳಲ್ಲಿ ಹೂಡಿಕೆ ಮಾಡಿದವರಿಗೆ ಒಂದೇ ದಿನ 14,000 ಕೋಟಿ ರೂಗೂ ಅಧಿಕ ಮೊತ್ತದ ನಷ್ಟ ಆಗಿದೆ.

ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ ಈ ಪ್ರಕರಣವೇನು?

ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ ಚಂಡೀಗಡ ಶಾಖೆಯ ಸಿಬ್ಬಂದಿಯಿಂದ ವಂಚನೆ ನಡೆದಿರುವ ಆರೋಪ ಇದೆ. ಹರ್ಯಾಣ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಸಂಸ್ಥೆಗಳ ಅಕೌಂಟ್​ಗಳಲ್ಲಿ ಅನಧಿಕೃತ ವಹಿವಾಟುಗಳು ನಡೆದಿರುವುದು ಬೆಳಕಿಗೆ ಬಂದಿದೆ. ಸರ್ಕಾರವು ಈ ಅಕೌಂಟ್​ಗಳನ್ನು ಮುಚ್ಚಲು ಹೋದಾಗ ಅಕೌಂಟ್ ಬ್ಯಾಲನ್ಸ್​ನಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಆಗ ಒಟ್ಟು 590 ಕೋಟಿ ರೂ ಹಣಕಾಸು ಅಕ್ರಮ ನಡೆದಿರುವುದು ಗೊತ್ತಾಗಿದೆ. ಈ ಬ್ಯಾಂಕ್​ನ ಮೂರನೇ ಕ್ವಾರ್ಟರ್​ನ ನಿವ್ವಳ ಆದಾಯವೇ 503 ಕೋಟಿ ರೂ ಇದೆ. ಅದಕ್ಕಿಂತಲೂ ಹೆಚ್ಚಿನ ಮೊತ್ತದ ಅಕ್ರಮವನ್ನು ಕೆಲ ಸಿಬ್ಬಂದಿ ಎಸಗಿದ್ದಾರೆ.

ಇದನ್ನೂ ಓದಿ: ಮಧ್ಯಂತರ ಟ್ರೇಡ್ ಡೀಲ್​ಗೆ ಮಾತುಕತೆ: ಭಾರತ ತಂಡದ ಅಮೆರಿಕ ಭೇಟಿ ಮುಂದೂಡಿಕೆ

ಸದ್ಯ ಐಡಿಎಫ್​ಸಿ ಬ್ಯಾಂಕ್​ನ ಚಂಡೀಗಡ ಬ್ರ್ಯಾಂಚ್​ನಿಂದ ಅನಧಿಕೃತವಾಗಿ ನಡೆದಿರುವ ವಹಿವಾಟುಗಳನ್ನು ಟ್ರ್ಯಾಕ್ ಮಾಡಲಾಗುತ್ತಿದೆ. ಈ ಹಣವನ್ನು ಫ್ರೀಜ್ ಮಾಡುವಂತೆ ಸಂಬಂಧಿಸಿದ ಎಲ್ಲಾ ಬ್ಯಾಂಕುಗಳಿಗೂ ಮನವಿ ಮಾಡಲಾಗಿದೆ. ಎಷ್ಟು ಸಾಧ್ಯವೋ ಎಷ್ಟು ಹಣ ರಿಕವರ್ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಹರ್ಯಾಣ ಸರ್ಕಾರವು ತನ್ನ ಎಂಪ್ಯಾನಲ್ ಪಟ್ಟಿಯಿಂದ ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಅನ್ನು ತೆಗೆದುಹಾಕಿದೆ. ತನ್ನ ಅಧೀನದ ಇಲಾಖೆಗಳು ಈ ಬ್ಯಾಂಕ್​ನಲ್ಲಿ ಹೊಂದಿರುವ ಅಕೌಂಟ್​ಗಳನ್ನು ಮುಚ್ಚುವಂತೆಯೂ ಸರ್ಕಾರ ತಿಳಿಸಿದೆ.

ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಈ ಅಕ್ರಮದ ಬಗ್ಗೆ ತನ್ನ ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ತಿಳಿಸಿದೆ. ಬ್ಯಾಂಕ್​ನ ಸಿಸ್ಟಂನಲ್ಲಿ ಯಾವುದೇ ಲೋಪ ಇಲ್ಲ. ನಿರ್ದಿಷ್ಟ ಬ್ರ್ಯಾಂಚ್​ನ ಕೆಲ ಸಿಬ್ಬಂದಿ ಹಾಗೂ ನಿರ್ದಿಷ್ಟ ಖಾತೆಗಳಿಗೆ ಮಾತ್ರವೇ ಈ ಅಕ್ರಮ ಸೀಮಿತವಾಗಿದೆ ಎಂದು ಬ್ಯಾಂಕ್ ಹೇಳಿಕೊಂಡಿದೆ. ಹಾಗೆಯೇ, ಬ್ಯಾಂಕ್ ಆಂತರಿಕ ತನಿಖೆ ನಡೆಸಿದ್ದು, ಅಕ್ರಮ ಎಸಗಿದ ಶಂಕೆಯ ಮೇಲೆ ನಾಲ್ವರು ಬ್ಯಾಂಕ್ ಅಧಿಕಾರಿಗಳನ್ನು ಅಮಾನತಿನಲ್ಲಿ ಇಡಲಾಗಿದೆ. ಬ್ಯಾಂಕ್​ನಿಂದ ಪೊಲೀಸ್ ದೂರು ಕೂಡ ಸಲ್ಲಿಕೆಯಾಗಿದೆ. ಸರ್ಕಾರಿ ಆಡಿಟಿಂಗ್​ಗೆ ಸೂಚಿಸಲಾಗಿದೆ. ಸ್ವತಂತ್ರವಾದ ಫೋರೆನ್ಸಿಕ್ ತನಿಖೆ ನಡೆಸುವಂತೆ ಕೆಪಿಎಂಜಿ ಸಂಸ್ಥೆಗೂ ತಿಳಿಸಲಾಗಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್ ಆದೇಶಕ್ಕೆ ಸೆಡ್ಡು ಹೊಡೆದ ಟ್ರಂಪ್; ಅಮೆರಿಕದ ಸುಂಕ ಮತ್ತೆ ಶೇ. 15ಕ್ಕೆ ಹೆಚ್ಚಳ

ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನಲ್ಲಿ ಸರ್ಕಾರದ ಷೇರುಪಾಲು ಅಧಿಕ

ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನಲ್ಲಿ ಅತಿಹೆಚ್ಚು ಷೇರುಮಾಲಿಕತ್ವ ಹೊಂದಿರುವುದು ಸರ್ಕಾರವೇ. ಶೇ. 7.75 ಷೇರುಪಾಲು ಹೊಂದಿದೆ. 66 ಕೋಟಿಗೂ ಅಧಿಕ ಷೇರುಗಳನ್ನು ಸರ್ಕಾರ ಹೊಂದಿದೆ. ಎಲ್​ಐಸಿ, ಟಾಟಾ ಎಐಎ ಲೈಫ್ ಇನ್ಷೂರೆನ್ಸ್, ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಷೂರೆನ್ಸ್, ಎಚ್​ಡಿಎಫ್​ಸಿ ಲೈಫ್ ಇನ್ಷೂರೆನ್ಸ್ ಸಂಸ್ಥೆಗಳು ಗಣನೀಯ ಪ್ರಮಾಣದ ಷೇರುಪಾಲು ಹೊಂದಿವೆ. ರೀಟೇಲ್ ಹೂಡಿಕೆದಾರರ ಬಳಿ 129 ಕೋಟಿಗೂ ಅಧಿಕ ಷೇರುಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!