UPI: ಯುಪಿಐ ವಿಶ್ವದ ಅತಿದೊಡ್ಡ ರೀಟೇಲ್ ಫಾಸ್ಟ್ ಪೇಮೆಂಟ್ ಸಿಸ್ಟಂ: ಐಎಂಎಫ್

World's largest real-time payment system UPI: ಭಾರತದ ಯುನಿಫೈಡ್ ಪೇಮೆಂಟ್ ಇಂಟರ್​ಫೇಸ್ ಅಥವಾ ಯುಪಿಐ ವಿಶ್ವದಲ್ಲೇ ಅತಿದೊಡ್ಡ ರಿಯಲ್ ಟೈಮ್ ಪೇಮೆಂಟ್ ಸಿಸ್ಟಂ ಎನಿಸಿದೆ. ಐಎಂಎಫ್ ವರದಿ ಪ್ರಕಾರ ವಿಶ್ವದ ಶೇ. 49ರಷ್ಟು ರಿಯಲ್ ಟೈಮ್ ಪೇಮೆಂಟ್​ಗಳು ಯುಪಿಐ ಮೂಲಕ ಆಗುತ್ತದೆ. ಬ್ರೆಜಿಲ್ ಮೊದಲಾದ ಇತರ ದೇಶಗಳ ಪೇಮೆಂಟ್ ಸಿಸ್ಟಂಗಳಿಗಿಂತಲೂ ಯುಪಿಐ ಅಗಾಧ ಎನಿಸಿದೆ.

UPI: ಯುಪಿಐ ವಿಶ್ವದ ಅತಿದೊಡ್ಡ ರೀಟೇಲ್ ಫಾಸ್ಟ್ ಪೇಮೆಂಟ್ ಸಿಸ್ಟಂ: ಐಎಂಎಫ್
ಯುಪಿಐ

Updated on: Dec 09, 2025 | 4:18 PM

ನವದೆಹಲಿ, ಡಿಸೆಂಬರ್ 9: ಭಾರತದ ಪೇಮೆಂಟ್ ಸಿಸ್ಟಂ ಆದ ಯುಪಿಐ (UPI) ಬಹಳ ಅಗಾಧವಾಗಿ ಬೆಳೆಯುತ್ತಿದೆ. ವಿಶ್ವದ ಅನೇಕ ದೇಶಗಳ ಗಮನವನ್ನು ಇದು ಸೆಳೆದಿದೆ. ಭಾರತದಲ್ಲಿ ಬಹುತೇಕ ರೀಟೇಲ್ ಪೇಮೆಂಟ್​ಗಳು ಯುಪಿಐನಿಂದಲೇ ಆಗುತ್ತಿವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಏಜೆನ್ಸಿಗಳು ಯುಪಿಐ ಉಪಯುಕ್ತತೆಯನ್ನು ಗುರುತಿಸಿವೆ. ಐಎಂಎಫ್​ನ ಇತ್ತೀಚಿನ ವರದಿಯೊಂದರ ಪ್ರಕಾರ ವಹಿವಾಟು ಸಂಖ್ಯೆಯಲಲ್ಲಿ ಯುಪಿಐ ವಿಶ್ವದ ಅತಿದೊಡ್ಡ ರೀಟೇಲ್ ಫಾಸ್ಟ್ ಪೇಮೆಂಟ್ ಸಿಸ್ಟಂ ಎನಿಸಿದೆ.

ಜಾಗತಿಕವಾಗಿ ರಿಯಲ್ ಟೈಮ್ ಪೇಮೆಂಟ್ ಸಿಸ್ಟಂಗಳ ಪೈಕಿ ಯುಪಿಐ ಬಳಕೆ ಶೇ. 49ರಷ್ಟಿದೆ. ಎಂದರೆ, ಅರ್ಧದಷ್ಟು ಜಾಗತಿಕ ರಿಯಲ್ ಟೈಮ್ ಪೇಮೆಂಟ್​ಗಳು ಯುಪಿಐ ಮೂಲಕ ಆಗುತ್ತಿರುವುದು ಗಮನಾರ್ಹ.

ಅತಿಹೆಚ್ಚು ರೀಟೇಲ್ ಪೇಮೆಂಟ್ ವಹಿವಾಟು ಹೊಂದಿರುವ ದೇಶಗಳು

ಜಾಗತಿಕವಾಗಿ ಒಟ್ಟು ವಹಿವಾಟು ಸಂಖ್ಯೆ: 26,620 ಕೋಟಿ

  • ಭಾರತ: 12,930 ಕೋಟಿ
  • ಬ್ರೆಜಿಲ್: 3,740 ಕೋಟಿ
  • ಥಾಯ್ಲೆಂಡ್: 2,040 ಕೋಟಿ
  • ಚೀನಾ: 1,720 ಕೋಟಿ
  • ಸೌತ್ ಕೊರಿಯಾ: 910 ಕೋಟಿ
  • ಇತರೆ: 5,280 ಕೋಟಿ

ಇದನ್ನೂ ಓದಿ: ನವೆಂಬರ್​ನಲ್ಲಿ ವಾಹನಗಳ ಮಾರಾಟ ಹೆಚ್ಚಳ; ಡಿಸೆಂಬರ್​ನಲ್ಲೂ ಇದೇ ಟ್ರೆಂಡ್

ಬ್ರೆಜಿಲ್​ನಲ್ಲಿ ಪಿಕ್ಸ್ ಎನ್ನುವ ರಿಯಲ್ ಟೈಮ್ ಪೆಮೆಂಟ್ ಸಿಸ್ಟಂ ಇದೆ. ಇದು ಬ್ರೆಜಿಲ್​ನಲ್ಲಿ ಅತಿಹೆಚ್ಚು ಬಳಕೆಯಲ್ಲಿರುವ ರೀಟೇಲ್ ಫಾಸ್ಟ್ ಪೇಮೆಂಟ್ ಸಿಸ್ಟಂ ಎನಿಸಿದೆ. ಥಾಯ್ಲೆಂಡ್ ದೇಶದ ಪ್ರಾಂಪ್ಟ್​ಪೆ, ಹೀಗೆ ವಿವಿಧ ದೇಶಗಳಲ್ಲಿ ರಿಯಲ್ ಟೈಮ್​ನಲ್ಲಿ ಪಾವತಿಸಬಹುದಾದ ಪೇಮೆಂಟ್ ಸಿಸ್ಟಂಗಳಿವೆ. ಆದರೆ, ಯುಪಿಐ ರೀತಿ ಇಂಟರಾಪರಾಬಿಲಿಟಿ ಮತ್ತು ವ್ಯಾಪ್ತಿ ವಿಶ್ವದಲ್ಲಿ ಬೇರಾವ ಪೇಮೆಂಟ್ ಸಿಸ್ಟಂಗೂ ಇಲ್ಲ ಎನ್ನುವುದು ಗಮನಾರ್ಹ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:15 pm, Tue, 9 December 25