AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಎಐ ಸೌಕರ್ಯ ನಿರ್ಮಾಣಕ್ಕೆ ಮೈಕ್ರೋಸಾಫ್ಟ್​ನಿಂದ 1.50 ಲಕ್ಷ ಕೋಟಿ ರೂ ಹೂಡಿಕೆ

Microsoft CEO Satya Nadella announces 17.5 billion USD investment in India: ಭಾರತದಲ್ಲಿ ಮೈಕ್ರೋಸಾಫ್ಟ್ ಬರೋಬ್ಬರಿ 17.5 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಎಐ ಇನ್​ಫ್ರಾಸ್ಟ್ರಕ್ಚರ್, ಸ್ಕಿಲ್ಲಿಂಗ್ ಮತ್ತು ಸ್ವಾವಲಂಬನೆ ಸಾಮರ್ಥ್ಯ ನಿರ್ಮಿಸಲು ಮೈಕ್ರೋಸಾಫ್ಟ್ ಉದ್ದೇಶಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಈ ಹೂಡಿಕೆಯನ್ನು ಪ್ರಕಟಿಸಿದ್ದಾರೆ.

ಭಾರತದಲ್ಲಿ ಎಐ ಸೌಕರ್ಯ ನಿರ್ಮಾಣಕ್ಕೆ ಮೈಕ್ರೋಸಾಫ್ಟ್​ನಿಂದ 1.50 ಲಕ್ಷ ಕೋಟಿ ರೂ ಹೂಡಿಕೆ
ನರೇಂದ್ರ ಮೋದಿ, ಸತ್ಯ ನಾದೆಲ್ಲಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 09, 2025 | 7:28 PM

Share

ನವದೆಹಲಿ, ಡಿಸೆಂಬರ್ 9: ಭಾರತದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ನ ಮೂಲಸೌಕರ್ಯ, ಕೌಶಲ್ಯ ಮತ್ತು ಸ್ವಾವಲಂಬನೆಯನ್ನು ನಿರ್ಮಿಸಲು ಮೈಕ್ರೋಸಾಫ್ಟ್ 17.5 ಬಿಲಿಯನ್ ಡಾಲರ್ (1.5 ಲಕ್ಷ ಕೋಟಿ ರೂ) ಹೂಡಿಕೆ ಮಾಡಲಿದೆ ಎಂದು ಸಂಸ್ಥೆಯ ಸಿಇಒ ಸತ್ಯ ನಾದೆಲ್ಲಾ (Satya Nadella) ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಮಂಗಳವಾರ ಭೇಟಿ ಮಾಡಿದ ಬಳಿಕ ಸತ್ಯ ನಾದೆಲ್ಲಾ ಈ ಹೂಡಿಕೆಯನ್ನು ಘೋಷಿಸಿದ್ದಾರೆ.

ಭಾರತದಲ್ಲಿ ಕ್ಲೌಡ್ ಮತ್ತು ಕಂಪ್ಯೂಟಿಂಗ್ ಇನ್​ಫ್ರಾಸ್ಟ್ರಕ್ಚರ್ ಹೆಚ್ಚಿಸುವುದು, ಎಐ ಕೌಶಲ್ಯ ಯೋಜನೆಗಳನ್ನು ವಿಸ್ತರಿಸುವುದು, ಎಲ್ಲಾ ಸೆಕ್ಟರ್​ಗಳಲ್ಲಿ ಸ್ಥಳೀಯ ಡಾಟಾ ಸಿಸ್ಟಂಗಳನ್ನು ಸ್ಥಾಪಿಸಿವುದು, ಇವು ಮುಖ್ಯವಾಗಿ ಮೈಕ್ರೋಸಾಫ್ಟ್ ಕಂಪನಿಯ ಗುರಿಗಳಾಗಿವೆ.

ಇದನ್ನೂ ಓದಿ: ಎಐ ಬಳಸಿ ಅದ್ಭುತ ಕಂಟೆಂಟ್ ಕೊಡಬಲ್ಲಿರಾ? ಇಗೋ ಇಲ್ಲಿದೆ ಟಿವಿ9 ನೆಟ್ವರ್ಕ್ AI² ಅವಾರ್ಡ್ಸ್ 2026

‘ಭಾರತದ ಮಹತ್ವಾಕಾಂಕ್ಷೆಗೆ ಪೂರಕವಾಗಿ ಮೈಕ್ರೋಸಾಫ್ಟ್ ಸಂಸ್ಥೆ 17.5 ಬಿಲಿಯನ್ ಡಾಲರ್ ಹೂಡಿಕೆಗೆ ಬದ್ಧವಾಗಿದೆ. ಭಾರತದ ಎಐ ಆದ್ಯತೆಯ ಭವಿಷ್ಯಕ್ಕೆ ಬೇಕಾದ ಮೂಲಸೌಕರ್ಯ, ಕೌಶಲ್ಯ ಮತ್ತು ಸ್ವಾವಲಂಬನೆ ಸಾಮರ್ಥ್ಯ ನಿರ್ಮಿಸಲು ನೆರವಾಗಲಿರುವ ಇದು ಏಷ್ಯಾದಲ್ಲಿ ನಮ್ಮ ಅತಿದೊಡ್ಡ ಹೂಡಿಕೆಯಾಗಿದೆ’ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಹೇಳಿದ್ದಾರೆ.

ಇದೇ ವರ್ಷದ ಜನವರಿಯಲ್ಲಿ ಮೈಕ್ರೋಸಾಫ್ಟ್ ಮುಂದಿನ ಎರಡು ವರ್ಷಗಳಿಗೆ ಭಾರತದಲ್ಲಿ ಕ್ಲೌಡ್ ಮತ್ತು ಎಐ ಸೌಕರ್ಯ ನಿರ್ಮಿಸಲು 3 ಬಿಲಿಯನ್ ಡಾಲರ್ ಹೂಡಿಕೆ ಪ್ರಕಟಿಸಿತ್ತು. ಮುಂದಿನ ಐದು ವರ್ಷದಲ್ಲಿ ಒಂದು ಕೋಟಿಗೂ ಅಧಿಕ ಜನರಿಗೆ ಎಐ ಕೌಶಲ್ಯಗಳ ತರಬೇತಿ ನೀಡಿ ಅವರನ್ನು ಸ್ಪರ್ಧಾತ್ಮಕಗೊಳಿಸಲು ಈ ವ್ಯವಸ್ಥೆ ಸಹಾಯವಾಗಲಿದೆ ಎಂದು ಮೈಕ್ರೋಸಾಫ್ಟ್ ಹೇಳಿತ್ತು.

ಇದನ್ನೂ ಓದಿ: ಭಾರತೀಯ ಅಕ್ಕಿ ಮೇಲೆ ಟ್ರಂಪ್ ಕಣ್ಣು; ಟ್ಯಾರಿಫ್ ಹೆಚ್ಚಿಸಿದರೆ ಭಾರತದ ಮೇಲೇನು ಪರಿಣಾಮ?

ಮೈಕ್ರೋಸಾಫ್ಟ್ ಮಾತ್ರವಲ್ಲ, ಇತರ ಕೆಲ ಜಾಗತಿಕ ಟೆಕ್ ಕಂಪನಿಗಳು ಕೂಡ ಭಾರತದ ಮಾರುಕಟ್ಟೆಯಲ್ಲಿ ಗಮನ ಹರಿಸುತ್ತಿವೆ. ಅಮೇಜಾನ್ ಸಂಸ್ಥೆ 12.7 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸುತ್ತಿದೆ. ಇದೂ ಕೂಡ ಕ್ಲೌಡ್ ಮತ್ತು ಎಐ ಇನ್​ಫ್ರಾಸ್ಟ್ರಕ್ಚರ್ ನಿರ್ಮಿಸುವ ಉದ್ದೇಶ ಹೊಂದಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ತರಬೇತಿ ನೀಡುವುದು, ಸಣ್ಣ ಉದ್ದಿಮೆಗಳಿಗೆ ಅನುಕೂಲ ಮಾಡುವುದು ಅಮೇಜಾನ್​ನ ಗುರಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ