ಹೊಸ ಟ್ಯಾರಿಫ್​ಗೆ ನೆಪಗಳ ಹುಡುಕಾಟ; ಭಾರತ ಸೇರಿ 16 ಟ್ರೇಡಿಂಗ್ ಪಾರ್ಟ್ನರ್ಸ್ ಮೇಲೆ ಅಮೆರಿಕ ತನಿಖೆ

US launches ‘unfair’ trade probe into India & 15 other countries: ಅಮೆರಿಕವು ತನ್ನ ಕೆಲ ಪ್ರಮುಖ ಟ್ರೇಡಿಂಗ್ ಪಾರ್ಟ್ನರ್ಸ್ ಮೇಲೆ ಅನ್​ಫೇರ್ ಟ್ರೇಡ್ ಪ್ರಾಕ್ಟೀಸ್ ಶಂಕೆಯ ಮೇಲೆ ತನಿಖೆ ಆರಂಭಿಸಿದೆ. ಸರ್ಕಾರದ ಸಬ್ಸಿಡಿ ಇತ್ಯಾದಿ ಸವಲತ್ತುಗಳನ್ನು ಪಡೆದು ಕಡಿಮೆ ಬೆಲೆಗೆ ಸರಕುಗಳನ್ನು ತಯಾರಿಸಿ ರಫ್ತು ಮಾಡುತ್ತಿರಬಹುದಾ ಎಂದು ತಿಳಿಯಲು ಭಾರತ ಸೇರಿ 16 ದೇಶಗಳನ್ನು ತನಿಖೆಗೆ ಒಳಪಡಿಸಿದೆ.

ಹೊಸ ಟ್ಯಾರಿಫ್​ಗೆ ನೆಪಗಳ ಹುಡುಕಾಟ; ಭಾರತ ಸೇರಿ 16 ಟ್ರೇಡಿಂಗ್ ಪಾರ್ಟ್ನರ್ಸ್ ಮೇಲೆ ಅಮೆರಿಕ ತನಿಖೆ
ಡೊನಾಲ್ಡ್ ಟ್ರಂಪ್

Updated on: Mar 12, 2026 | 8:58 PM

ನವದೆಹಲಿ, ಮಾರ್ಚ್ 12: ಹೆಚ್ಚು ಕೈಗಾರಿಕಾ ಸಾಮರ್ಥ್ಯ ಹೊಂದಲಾಗಿರುವ ಕುರಿತಂತೆ ವಿವಿಧ ದೇಶಗಳ ಮೇಲೆ ಅಮೆರಿಕ ತನಿಖೆ ಆರಂಭಿಸಿದೆ. ಅಮೆರಿಕದ ಕಾನೂನಿನ ಸೆಕ್ಷನ್ 301 ಅಡಿಯಲ್ಲಿ ಅನ್ಯಾಯದ ವ್ಯಾಪಾರ ಕ್ರಮಗಳನ್ನು ನಡೆಸಲಾಗುತ್ತಿರುವ ಆರೋಪದ ಮೇಲೆ ತನಿಖೆ ನಡೆಸಲಾಗುತ್ತದೆ. ಭಾರತವೂ ಒಳಗೊಂಡಂತೆ ಅಮೆರಿಕದ 16 ಟ್ರೇಡಿಂಗ್ ಪಾರ್ಟ್ನರ್ ದೇಶಗಳ ಕೈಗಾರಿಕಾ ನೀತಿಗಳನ್ನು ಅಮೆರಿಕ ಅವಲೋಕಿಸಲಿದೆ.

ಟ್ರಂಪ್ ಸರ್ಕಾರದ ಟ್ಯಾರಿಫ್ ಕ್ರಮವನ್ನು ಅಮೆರಿಕದ ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ಅನೂರ್ಜಿತಗೊಳಿಸಿ, ಶೇ. 10ರ ಬೇಸ್​ಲೈನ್ ಟ್ಯಾರಿಫ್ ನಿಗದಿ ಮಾಡಿತ್ತು. ಕೋರ್ಟ್​ನ ಈ ತೀರ್ಪಿನ ವಿರುದ್ಧ ನಿಂತಿರುವ ಟ್ರಂಪ್ ಸರ್ಕಾರ ಪದೇ ಪದೇ ತನ್ನ ಟ್ಯಾರಿಫ್ ನೀತಿಯನ್ನು ಸಮರ್ಥಿಸಿಕೊಳ್ಳುತ್ತಲೇ ಇದೆ. ಈ ನಿಟ್ಟಿನಲ್ಲಿ ಅನ್​ಫೇರ್ ಟ್ರೇಡ್ ಪ್ರಾಕ್ಟಿಸಸ್ ಶಂಕೆಯ ಮೇಲೆ 16 ದೇಶಗಳಿಗೆ ಅಮೆರಿಕದ ತನಿಖೆಯ ಬಿಸಿ ಶುರುವಾಗಿದೆ.

ಇದನ್ನೂ ಓದಿ: ಫೆಬ್ರುವರಿ 2026ರಲ್ಲಿ ರೀಟೇಲ್ ಹಣದುಬ್ಬರ ಶೇ. 3.21ಕ್ಕೆ ಏರಿಕೆ; ಆರ್​ಬಿಐ ಮಿತಿಯಲ್ಲಿ ಬೆಲೆ ಏರಿಕೆ

ಭಾರತ ಅಲ್ಲದೇ, ಚೀನಾ, ಐರೋಪ್ಯ ಒಕ್ಕೂಟ, ಜಪಾನ್, ಸೌತ್ ಕೊರಿಯಾ, ಮೆಕ್ಸಿಕೋ, ತೈವಾನ್, ವಿಯೆಟ್ನಾಂ, ಥಾಯ್ಲೆಂಡ್, ಮಲೇಷ್ಯಾ, ಕಾಂಬೋಡಿಯಾ, ಸಿಂಗಾಪುರ್, ಇಂಡೋನೇಷ್ಯಾ, ಬಾಂಗ್ಲಾದೇಶ, ಸ್ವಿಟ್ಜರ್​ಲ್ಯಾಂಡ್ ಮತ್ತು ನಾರ್ವೆ ದೇಶಗಳು ಈ ತನಿಖೆಗೆ ಒಳಪಡುತ್ತಿವೆ. ಈ 16 ದೇಶಗಳು ಅಮೆರಿಕದ ಪ್ರಮುಖ ಟ್ರೇಡಿಂಗ್ ಪಾರ್ಟ್ನರ್​ಗಳ ಪೈಕಿ ಇವೆ. ಅಮೆರಿಕದ ಎರಡನೇ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್ ಆದ ಕೆನಡಾವನ್ನು ಈ ತನಿಖೆಯಿಂದ ಹೊರತುಪಡಿಸಲಾಗಿದೆ.

ಯಾವ ಅಂಶಗಳ ಮೇಲೆ ನಡೆಯುತ್ತೆ ತನಿಖೆ?

ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ಗಳಲ್ಲಿ ಹೆಚ್ಚಿನ ಉತ್ಪಾದನೆ ಮತ್ತು ಸಾಮರ್ಥ್ಯ ಇರುವುದು, ಸರ್ಕಾರದ ಸಬ್ಸಿಡಿಗಳು, ಕಡಿಮೆ ವೇತನ, ಸರ್ಕಾರಿ ಉದ್ದಿಮೆಗಳ ವಾಣಿಜ್ಯೇತರ ಚಟುವಟಿಕೆ, ಅಸಮರ್ಪಕ ಪರಿಸರ ಮತ್ತು ಕಾರ್ಮಿಕ ವ್ಯವಸ್ಥೆಯ ಗುಣಮಟ್ಟ, ಸಬ್ಸಿಡಿಯಲ್ಲಿ ಸಾಲ ಇತ್ಯಾದಿ ಅಂಶಗಳನ್ನು ಅವಲೋಕಿಸಲಾಗುತ್ತದೆ.

ಇದನ್ನೂ ಓದಿ: ಪೆಟ್ರೋಲ್, ಎಲ್​ಪಿಜಿ ಕೊರತೆ ಇಲ್ಲ: ಸಂಸತ್​ನಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

ಒಟ್ಟಾರೆ, ಸರ್ಕಾರದ ಸಬ್ಸಿಡಿ ಇತ್ಯಾದಿ ಉತ್ತೇಜನಕಾರಿ ಸವಲತ್ತುಗಳ ನೆರವಿನಿಂದ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳು ಕಡಿಮೆ ಬೆಲೆಗೆ ಸರಕುಗಳನ್ನು ತಯಾರಿಸಿ ರಫ್ತು ಮಾಡುತ್ತಿವೆಯಾ ಎಂಬುದನ್ನು ಅಮೆರಿಕ ತನಿಖೆಯಲ್ಲಿ ಪತ್ತೆ ಮಾಡಲು ಹೊರಟಿದೆ. ಈ ರೀತಿ ಸವಲತ್ತು ಪಡೆದು ಕಡಿಮೆ ಬೆಲೆ ಸರಕುಗಳನ್ನು ತಯಾರಿಸಿ ಮಾರುತ್ತಿದ್ದರೆ ಅದು ಅಮೆರಿಕನ್ ಕಾನೂನು ಪ್ರಕಾರ ಅನ್​ಫೇರ್ ಟ್ರೇಡ್ ಪ್ರಾಕ್ಟಿಸಸ್ ಆಗುತ್ತದೆ. ತನಿಖೆಯಲ್ಲಿ ಇದು ಋಜುವಾತಾದರೆ, ಅಂಥ ದೇಶಗಳು ಮತ್ತು ಕಂಪನಿಗಳು, ಹಾಗು ಸರಕುಗಳ ಮೇಲೆ ಅಮೆರಿಕ ಹೆಚ್ಚಿನ ಟ್ಯಾರಿಫ್ ವಿಧಿಸಲು ಯೋಜಿಸುತ್ತಿದ್ದಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us