ವಾರ್ನರ್ ಬ್ರದರ್ಸ್ ಡಿಸ್ಕವರಿಯ ಹೈದರಾಬಾದ್ ಕೇಂದ್ರವನ್ನು ಉದ್ಘಾಟಿಸಿದ ಸಚಿವ ಕೆಟಿ ರಾಮರಾವ್

|

Updated on: Sep 20, 2023 | 8:03 PM

Warner Bros Discovery’s Hyderabad Delivery Centre Inaguration; ವಾರ್ನರ್ ಬ್ರದರ್ಸ್ ಕಂಪನಿಯು ಕಂಪನಿಯು ಟಿವಿ ಚಾನೆಲ್ ಬ್ರಾಂಡ್‌ಗಳಾದ ಹೆಚ್​ಬಿಒ, ಸಿಎನ್​ಎನ್, ಡಿಸ್ಕವರಿ, ಡಬ್ಲ್ಯುಬಿ, ಅನಿಮಲ್ ಪ್ಲಾನೆಟ್, ಕಾರ್ಟೂನ್ ನೆಟ್‌ವರ್ಕ್ ಮತ್ತು ಪೊಗೊವನ್ನು ಒಳಗೊಂಡಿದೆ. 2023 ರ ಮೇ ತಿಂಗಳಲ್ಲಿ ಹೈದರಾಬಾದ್​ನಲ್ಲಿ ಕೇಂದ್ರ ತೆರೆಯುವ ಬಗ್ಗೆ ಘೋಷಣೆ ಮಾಟಲಾಗಿತ್ತು.

ವಾರ್ನರ್ ಬ್ರದರ್ಸ್ ಡಿಸ್ಕವರಿಯ ಹೈದರಾಬಾದ್ ಕೇಂದ್ರವನ್ನು ಉದ್ಘಾಟಿಸಿದ ಸಚಿವ ಕೆಟಿ ರಾಮರಾವ್
ವಾರ್ನರ್ ಬ್ರದರ್ಸ್ ಡಿಸ್ಕವರಿಯ ಹೈದರಾಬಾದ್ ಕೇಂದ್ರವನ್ನು ಉದ್ಘಾಟಿಸಿದ ಸಚಿವ ಕೆಟಿ ರಾಮರಾವ್
Follow us on

ಹೈದರಾಬಾದ್, ಸೆಪ್ಟೆಂಬರ್ 20: ತೆಲಂಗಾಣ ಸಚಿವ ಕೆಟಿ ರಾಮರಾವ್ (KT Rama Rao) ಅವರು ಮಾದಾಪುರದ ಇಂಟರ್ನ್ಯಾಷನಲ್ ಟೆಕ್ ಪಾರ್ಕ್‌ನಲ್ಲಿ ವಾರ್ನರ್ ಬ್ರದರ್ಸ್ ಡಿಸ್ಕವರಿಯ (Warner Bros Discovery) ಹೈದರಾಬಾದ್ ಡೆಲಿವರಿ ಕೇಂದ್ರವನ್ನು ಬುಧವಾರ ಉದ್ಘಾಟಿಸಿದರು. ಮೇ ತಿಂಗಳಲ್ಲಿ ರಾಮರಾವ್ ಅವರು ನ್ಯೂಯಾರ್ಕ್‌ನಲ್ಲಿ ವಾರ್ನರ್ ಬ್ರದರ್ಸ್‌ನೊಂದಿಗೆ ಮಾತುಕತೆ ನಡೆಸಿದ್ದರು. ಅದಾದ ನಾಲ್ಕು ತಿಂಗಳ ನಂತರ ಇದೀಗ ರಾಜ್ಯದಲ್ಲಿ ಕಂಪನಿಯ ಡೆಲಿವರಿ ಕೇಂದ್ರವನ್ನು ಉದ್ಘಾಟಿಸಿದ್ದಾರೆ. ವಾರ್ನರ್ ಬ್ರದರ್ಸ್ ಕಂಪನಿಯು ಕಂಪನಿಯು ಟಿವಿ ಚಾನೆಲ್ ಬ್ರಾಂಡ್‌ಗಳಾದ ಹೆಚ್​ಬಿಒ, ಸಿಎನ್​ಎನ್, ಡಿಸ್ಕವರಿ, ಡಬ್ಲ್ಯುಬಿ, ಅನಿಮಲ್ ಪ್ಲಾನೆಟ್, ಕಾರ್ಟೂನ್ ನೆಟ್‌ವರ್ಕ್ ಮತ್ತು ಪೊಗೊವನ್ನು ಒಳಗೊಂಡಿದೆ.

ಕೇಂದ್ರವು ಹೆಚ್​​ಬಿಒ, ಸಿಎನ್​ಎನ್, ಟಿಎಲ್​ಸಿ, ಡಿಸ್ಕವರಿ, ಡಬ್ಲ್ಯುಬಿ, ಡಿಸಿ ಕಾಮಿಕ್ಸ್, ಕಾರ್ಟೂನ್ ನೆಟ್‌ವರ್ಕ್‌ಗಳಿಗೆ 1200 ವೃತ್ತಿಪರರನ್ನು ನೇಮಿಸಿಕೊಳ್ಳಲಿದೆ.

2023 ರ ಮೇ ತಿಂಗಳಲ್ಲಿ ತೆಲಂಗಾಣ ನಿಯೋಗದ ಅಮೆರಿಕ ಪ್ರವಾಸದ ಭಾಗವಾಗಿ, ನಾವು ನ್ಯೂಯಾರ್ಕ್‌ನಲ್ಲಿ ವಾರ್ನರ್ ಬ್ರದರ್ಸ್‌ ಡಿಸ್ಕವರಿಯ ಅಲೆಕ್ಸ್ ಕಾರ್ಟರ್ ಅವರನ್ನು ಭೇಟಿ ಮಾಡಿದ್ದೆವು ಮತ್ತು ಹೈದರಾಬಾದ್‌ನಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರದ ಪ್ರವೇಶವನ್ನು ಘೋಷಿಸಿದ್ದೆವು. ಅದಾದ 4 ತಿಂಗಳೊಳಗೆ ಕೇಂದ್ರ ಉದ್ಘಾಟನೆಯಾಗಿರುವುದು ಸಂತಸ ತಂದಿದೆ. ಮಾಧ್ಯಮ, ಮನರಂಜನೆ ಮತ್ತು ಗೇಮಿಂಗ್‌ಗೆ ಹೆಚ್ಚಿನ ಒತ್ತು ನೀಡುವ ಮೂಲಕ ಹೈದರಾಬಾದ್ ಬೆಳೆಯುತ್ತಿರುವ ನಗರವಾಗಿದೆ. ವಾರ್ನರ್ ಬ್ರದರ್ಸ್ ಡಿಸ್ಕವರಿಯಂತಹ ಕಂಪನಿಗಳು ವೈವಿಧ್ಯತೆಯನ್ನು ತರುತ್ತವೆ ಮತ್ತು ಹೈದರಾಬಾದ್‌ನಲ್ಲಿರುವ ವ್ಯಾಪಕ ಶ್ರೇಣಿಯ ಸಂಸ್ಥೆಗಳ ಜತೆಗೂಡಲಿವೆ ಎಂದು ಕೆಟಿ ರಾಮರಾವ್ ಹೇಳಿದರು.

ವಾರ್ನರ್ ಬ್ರದರ್ಸ್ ಡಿಸ್ಕವರಿಯ ಸಿಎಫ್‌ಒ ಗುನ್ನಾರ್ ವೈಡೆನ್‌ಫೆಲ್ಸ್, ಹಿರಿಯ ಉಪಾಧ್ಯಕ್ಷ (ಹಣಕಾಸು ವಿಭಾಗ) ಅಲೆಕ್ಸಾಂಡ್ರಾ ಕಾರ್ಟರ್, ಹೈದರಾಬಾದ್ ಕೇಂದ್ರದ ನಾಯಕ ಜೈದೀಪ್ ಅಗರ್ವಾಲ್, ವಾರ್ನರ್ ಬ್ರದರ್ಸ್ ಡಿಸ್ಕವರಿ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಹೊಸ ವಾಟ್ಸಾಪ್ ಚಾನಲ್; ಒಂದೇ ದಿನದಲ್ಲಿ 10 ಲಕ್ಷ ಫಾಲೋಯರ್ಸ್

ಹೈದರಾಬಾದ್‌ನಲ್ಲಿರುವ ಯುಎಸ್ ಕಾನ್ಸುಲ್ ಜನರಲ್ ಜೆನ್ನಿಫರ್ ಲಾರ್ಸನ್ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ವಾರ್ನರ್ ಬ್ರದರ್ಸ್ ಡಿಸ್ಕವರಿ ಒಂದು ಪ್ರಮುಖ ಜಾಗತಿಕ ಮಾಧ್ಯಮ ಮತ್ತು ಮನರಂಜನಾ ಕಂಪನಿಯಾಗಿದೆ. 220 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳು ಮತ್ತು 50 ಭಾಷೆಗಳಲ್ಲಿ ವಾರ್ನರ್ ಬ್ರದರ್ಸ್ ಲಭ್ಯವಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ