ಆರ್ಬಿಐ ಕಾನೂನು ಪ್ರಕಾರ ಒಂದು ಬ್ಯಾಂಕ್ ಖಾತೆ 10 ವರ್ಷ ಕಾಲ ಯಾವ ವಿತ್ಡ್ರಾಯಲ್ ಇಲ್ಲದೇ ನಿಷ್ಕ್ರಿಯವಾಗಿದ್ದರೆ (Inoperative account) ಅಂಥವನ್ನು ಅನ್ಕ್ಲೇಮ್ಡ್ ಡೆಪಾಸಿಟ್ ಎಂದು ವರ್ಗೀಕರಿಸಲಾಗುತ್ತದೆ. ಇದು ಉಳಿತಾಯ ಖಾತೆ ಆಗಿರಬಹುದು, ಚಾಲ್ತಿ ಖಾತೆ ಆಗಿರಬಹುದು, ನಿಶ್ಚಿತ ಠೇವಣಿ ಆಗಿರಬಹುದು, ರೆಕರಿಂಗ್ ಡೆಪಾಸಿಟ್ ಆಗಿರಬಹುದು, ಯಾವುದೇ ಖಾತೆ ಸತತ 10 ವರ್ಷ ಕಾಲ ನಿಷ್ಕ್ರಿಯವಾಗಿದ್ದರೆ ಅದು ಅನ್ಕ್ಲೇಮ್ಡ್ ಹಣವೆನಿಸಿ, ಡೆಪಾಸಿಟರ್ ಎಜುಕೇಶ್ ಅಂಡ್ ಅವೇರ್ನೆಸ್ ಫಂಡ್ (DEAF- Depositor education and awareness fund) ಅಥವಾ ಕಾರ್ಪಸ್ ಫಂಡ್ಗೆ ವರ್ಗಾವಣೆ ಆಗುತ್ತದೆ.
ಆರ್ಬಿಐ ಇತ್ತೀಚೆಗೆ ಬಹಿರಂಗಪಡಿಸಿದ ಮಾಹಿತಿ ಪ್ರಕಾರ 2022-23ರ ಕೊನೆಯಲ್ಲಿ ಡಿಇಎಎಫ್ನಲ್ಲಿ ಇರುವ ಅನ್ಕ್ಲೇಮ್ಡ್ ಡೆಪಾಸಿಟ್ ಮೊತ್ತ 62,225 ಕೋಟಿ ರೂ. ಇದರಲ್ಲಿರುವ ಹಣ ಸುರಕ್ಷಿತವಾಗಿರುತ್ತದಾದರೂ ಅದನ್ನು ಆಯಾ ಖಾತೆದಾರ ಅಥವಾ ವಾರಸುದಾರರಿಗೆ ತಲುಪಿಸುವ ಜವಾಬ್ದಾರಿ ಆರ್ಬಿಐ ಮೇಲಿದೆ. ಈ ಹಣಕ್ಕೆ ನಿಗದಿತ ಬಡ್ಡಿ ಸಿಗುತ್ತಾ ಹೋಗುತ್ತದೆ.
ಇದನ್ನೂ ಓದಿ: ನವೆಂಬರ್ನಲ್ಲಿ ಭಾರತದ ಟ್ರೇಡ್ ಡೆಫಿಸಿಟ್ 20.58 ಬಿಲಿಯನ್ ಡಾಲರ್; ರಫ್ತು ಮತ್ತು ಆಮದು ಅಂತರದಲ್ಲಿ ಗಣನೀಯ ಇಳಿಕೆ
ಪ್ರತಿಯೊಂದು ಬ್ಯಾಂಕ್ ಕೂಡ ತಮ್ಮಲ್ಲಿನ ಅನ್ಕ್ಲೇಮ್ಡ್ ಅಕೌಂಟ್ಗಳ ಪಟ್ಟಿ ಪ್ರಕಟಿಸುತ್ತದೆ. ಯಾರು ಬೇಕಾದರೂ ಕೂಡ ಖಾತೆದಾರರ ಹೆಸರು, ಅಕೌಂಟ್ ನಂಬರ್ ಇತ್ಯಾದಿ ವಿವರ ಹುಡುಕಿ ತಿಳಿದುಕೊಳ್ಳಬಹುದು.
ಬ್ಯಾಂಕ್ನಲ್ಲಿ ನಿಮ್ಮ ಖಾತೆ ಅನ್ಕ್ಲೈಮ್ಡ್ ಅಕೌಂಟ್ ಎಂದು ವರ್ಗೀಕರಣಗೊಂಡಿದ್ದರೆ ಬ್ಯಾಂಕ್ ಕಚೇರಿಗೆ ಹೋಗಿ ಸೂಕ್ತ ಫಾರ್ಮ್ ಪಡೆದು ಭರ್ತಿ ಮಾಡಬೇಕು. ಪ್ಯಾನ್, ಆಧಾರ್ ಇತ್ಯಾದಿ ಕೆವೈಸಿ ದಾಖಲೆ ಸಲ್ಲಿಸಬೇಕು.
ಇದನ್ನೂ ಓದಿ: Corporate FD: ಕಾರ್ಪೊರೇಟ್ ಠೇವಣಿ ಎಂದರೇನು? ಬ್ಯಾಂಕ್ ಎಫ್ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದು ಉತ್ತಮ?
ಖಾತೆದಾರ ಮೃತಪಟ್ಟಿದ್ದರೆ ಅವರ ವಾರಸುದಾರರು ಅಥವಾ ನಾಮಿನಿಗಳಾದವರು ಹಣ ಕ್ಲೈಮ್ ಮಾಡಬಹುದು. ಅದಕ್ಕೆ ಖಾತೆದಾರರ ಡೆತ್ ಸರ್ಟಿಫಿಕೇಟ್ ಕೊಡಬೇಕಾಗುತ್ತದೆ. ಅಗತ್ಯಬಿದ್ದಲ್ಲಿ ವಾರಸುದಾರ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ. ಒಬ್ಬರಿಗಿಂತ ಹೆಚ್ಚು ವಾರಸುದಾರರಿದ್ದರೆ ಎಲ್ಲರಿಂದಲೂ ಇಂಡೆಮ್ನಿಟಿ ಬಾಂಡ್ ಅನ್ನು ಬ್ಯಾಂಕ್ ಪಡೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ