Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೆಂಬರ್​ನಲ್ಲಿ ಭಾರತದ ಟ್ರೇಡ್ ಡೆಫಿಸಿಟ್ 20.58 ಬಿಲಿಯನ್ ಡಾಲರ್; ರಫ್ತು ಮತ್ತು ಆಮದು ಅಂತರದಲ್ಲಿ ಗಣನೀಯ ಇಳಿಕೆ

India Trade Deficit 2023 November: ಭಾರತದ ಟ್ರೇಡ್ ಡೆಫಿಸಿಟ್ ಅಥವಾ ಸರಕು ವ್ಯಾಪಾರ ಅಂತರ ನವೆಂಬರ್ ತಿಂಗಳಲ್ಲಿ 20.58 ಬಿಲಿಯನ್ ಡಾಲರ್​ಗೆ ಇಳಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆಮದು ಮತ್ತು ರಫ್ತು ಎರಡೂ ಕೂಡ ನವೆಂಬರ್​ನಲ್ಲಿ ಇಳಿಮುಖ ಆಗಿದೆ. ಆಮದು ಹೆಚ್ಚು ಇಳಿಕೆ ಕಂಡಿದೆ. 2022ರ ನವೆಂಬರ್ ತಿಂಗಳು ಹಾಗೂ 2023ರ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ 2023ರ ನವೆಂಬರ್​ನಲ್ಲಿ ಟ್ರೇಡ್ ಡೆಫಿಸಿಟ್ ಬಹಳ ಕಡಿಮೆ ಆಗಿದೆ.

ನವೆಂಬರ್​ನಲ್ಲಿ ಭಾರತದ ಟ್ರೇಡ್ ಡೆಫಿಸಿಟ್ 20.58 ಬಿಲಿಯನ್ ಡಾಲರ್; ರಫ್ತು ಮತ್ತು ಆಮದು ಅಂತರದಲ್ಲಿ ಗಣನೀಯ ಇಳಿಕೆ
ಟ್ರೇಡ್ ಡೆಫಿಸಿಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 15, 2023 | 4:34 PM

ನವದೆಹಲಿ, ಡಿಸೆಂಬರ್ 15: ಭಾರತದ ಅಂತಾರಾಷ್ಟ್ರೀಯ ಸರಕು ವಹಿವಾಟಿನಲ್ಲಿ (Merchandise trading) ಟ್ರೇಡ್ ಡೆಫಿಸಿಟ್ ಅಥವಾ ವ್ಯಾಪಾರ ಅಂತರ (Trade Deficit) ನವೆಂಬರ್ ತಿಂಗಳಲ್ಲಿ 20.58 ಬಿಲಿಯನ್ ಡಾಲರ್​ಗೆ ಇಳಿದಿದೆ. ಹಿಂದಿನ ಅಕ್ಟೋಬರ್ ತಿಂಗಳಲ್ಲಿ ಇದ್ದ 31.46 ಬಿಲಿಯನ್ ಡಾಲರ್​ಗೆ ಹೋಲಿಸಿದರೆ ನವೆಂಬರ್​ನಲ್ಲಿ ಟ್ರೇಡ್ ಡೆಫಿಸಿಟ್ ಗಣನೀಯವಾಗಿ ತಗ್ಗಿದೆ. 2022ರ ನವೆಂಬರ್​ನಲ್ಲಿ ವ್ಯಾಪಾರ ಅಂತರ 32 ಬಿಲಿಯನ್ ಡಾಲರ್ ಇತ್ತು. ಕಳೆದ ವರ್ಷದ ನವೆಂಬರ್​ಗೆ ಹೋಲಿಸಿದರೆ ಈ ನವೆಂಬರ್​ನಲ್ಲಿ ಆಮದು ಮತ್ತು ರಫ್ತು ಎರಡೂ ಕೂಡ ಕಡಿಮೆ ಆಗಿವೆ. ಆದರೆ, ರಫ್ತು ಕಡಿಮೆ ಆಗಿರುವುದಕ್ಕಿಂತ ಆಮದು ಕಡಿಮೆ ಆಗಿರುವ ಪ್ರಮಾಣ ಹೆಚ್ಚಿದೆ. ಹೀಗಾಗಿ, ಟ್ರೇಡ್ ಡೆಫಿಸಿಟ್ ಕೂಡ ಕಡಿಮೆ ಆಗಿದೆ.

ಸರ್ಕಾರ ಇಂದು ಶುಕ್ರವಾರ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ 2023ರ ನವೆಂಬರ್ ತಿಂಗಳಲ್ಲಿ 54.48 ಬಿಲಿಯನ್ ಡಾಲರ್​ನಷ್ಟು ಆಮದು ಮಾಡಿಕೊಳ್ಳಲಾಗಿದೆ. ಇನ್ನು, ರಫ್ತು 33.90 ಬಿಲಿಯನ್ ಡಾಲರ್ ಆಗಿದೆ.

2022ರ ನವೆಂಬರ್​ನಲ್ಲಿ ಆಮದುಗಳ ಪ್ರಮಾಣ 56.95 ಬಿಲಿಯನ್ ಡಾಲರ್ ಇದ್ದರೆ, ರಫ್ತುಗಳು 34.89 ಬಿಲಿಯನ್ ಡಾಲರ್ ಆಗಿದ್ದವು. ರಫ್ತು ಈ ವರ್ಷ ಶೇ. 2.8ರಷ್ಟು ಕಡಿಮೆ ಆಗಿದ್ದರೆ, ಆಮದುಗಳು ಶೇ. 4.3ರಷ್ಟು ಇಳಿಮುಖ ಆಗಿವೆ.

ಇದನ್ನೂ ಓದಿ: ಪಾಂಡಿ, ಕರ್ನಾಟಕ, ಯುಪಿಗೆ ಹೆಚ್ಚು ಅಬಕಾರಿ ಆದಾಯ; ಮದ್ಯ ಮಾರಾಟದಿಂದ ಯಾವ್ಯಾವ ಸರ್ಕಾರಗಳ ಖಜಾನೆ ಎಷ್ಟು ಭರ್ತಿ? ಇಲ್ಲಿದೆ ಪಟ್ಟಿ

ಹಾಗೆಯೇ, ಈ ಹಣಕಾಸು ವರ್ಷದ ಮೊದಲ ಎಂಟು ತಿಂಗಳು, ಅಂದರೆ ಏಪ್ರಿಲ್​ನಿಂದ ನವೆಂಬರ್​ವರೆಗಿನ ಅವಧಿಯಲ್ಲಿ ರಫ್ತು ಪ್ರಮಾಣ 278.8 ಬಿಲಿಯನ್ ಡಾಲರ್​ನಷ್ಟಿತ್ತು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ರಫ್ತು ಶೇ. 6.51ರಷ್ಟು ಕಡಿಮೆ ಆಗಿದೆ. ಇನ್ನು, ಆಮದು ಶೇ. 8.67ರಷ್ಟು ಕಡಿಮೆ ಆಗಿರುವುದು ಗಮನಾರ್ಹ.

ರಫ್ತು ಮತ್ತು ಆಮದು ಯಾಕೆ ಕಡಿಮೆ ಆಗುತ್ತಿದೆ?

ಕಳೆದ ಕೆಲ ತಿಂಗಳಿಂದಲೂ ರಫ್ತು ಮತ್ತು ಆಮದು ಎರಡೂ ಕೂಡ ಕಡಿಮೆ ಆಗುತ್ತಿವೆ. ಇದಕ್ಕೆ ಕಾರಣಗಳು ಭಿನ್ನ. ಸರ್ಕಾರ ಸಾಧ್ಯವಾದೆಡೆಯೆಲ್ಲಾ ಆಮದನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದೆ.

ಇದನ್ನೂ ಓದಿ: Predictions: ಹಿಂದೆಲ್ಲಾ ಕರಾರುವಾಕ್ ಭವಿಷ್ಯ ನುಡಿದಿದ್ದ ಜಾನ್ ಚೇಂಬರ್ಸ್ 2024ಕ್ಕೆ ಭಾರತ, ಎಐ ಟೆಕ್ನಾಲಜಿ ಬಗ್ಗೆ ಹೇಳಿದ್ದೇನು ನೋಡಿ..

ಇನ್ನು, ರಫ್ತು ಕಡಿಮೆಗೊಳ್ಳಲು ಬೇರೆ ಕಾರಣಗಳಿವೆ. ಅಂತಾರಾಷ್ಟ್ರೀಯ ವಿದ್ಯಮಾನ, ಹೆಚ್ಚಿನ ಹಣದುಬ್ಬರ, ಮುಂದುವರಿದ ದೇಶಗಳಲ್ಲಿ ಮಂದಗತಿಯ ಆರ್ಥಿಕತೆ, ರಷ್ಯಾ ಉಕ್ರೇನ್ ಸಮಸ್ಯೆ, ಇಸ್ರೇಲ್ ಪ್ಯಾಲಸ್ಟೀನ್ ಬಿಕ್ಕಟ್ಟು, ಚೀನಾ, ತೈವಾನ್, ಅಮೆರಿಕ ಇತ್ಯಾದಿ ಅಂಶಗಳೆಲ್ಲವೂ ಭಾರತದ ರಫ್ತಿನ ಮೇಲೆ ಪರಿಣಾಮ ಬೀರುತ್ತಿವೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ