Predictions: ಹಿಂದೆಲ್ಲಾ ಕರಾರುವಾಕ್ ಭವಿಷ್ಯ ನುಡಿದಿದ್ದ ಜಾನ್ ಚೇಂಬರ್ಸ್ 2024ಕ್ಕೆ ಭಾರತ, ಎಐ ಟೆಕ್ನಾಲಜಿ ಬಗ್ಗೆ ಹೇಳಿದ್ದೇನು ನೋಡಿ..
John T Chambers Top Predictions For 2024: ಸಿಸ್ಕೋ ಸಿಸ್ಟಮ್ಸ್ನ ಮಾಜಿ ಸಿಇಒ ಜಾನ್ ಟಿ ಚೇಂಬರ್ಸ್ 2024ರ ವರ್ಷಕ್ಕೆ ಭವಿಷ್ಯ ನುಡಿದಿದ್ದಾರೆ. ನಾಲ್ಕು ಟ್ರೆಂಡ್ಗಳನ್ನು ಗುರುತಿಸಿದ್ದಾರೆ. 2020ರಿಂದ 2023ರವರೆಗೆ ಅವರು ಹೇಳಿದ್ದ ಭವಿಷ್ಯವೆಲ್ಲವೂ ಬಹುತೇಕ ನಿಜವಾಗಿವೆ. ಹೀಗಾಗಿ, ಅವರ ಮಾತಿಗೆ ಬೆಲೆ ಕೊಡಬೇಕಿದೆ. 2024ರ ವರ್ಷವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ದಶಕದ ಆರಂಭ ಆಗಿದೆ. ಭಾರತ ಮತ್ತು ಅಮೆರಿಕದ ಸಹಭಾಗಿತ್ವ ಪ್ರಧಾನವಾಗಲಿದೆ ಎಂದು ಚೇಂಬರ್ಸ್ ಹೇಳಿದ್ದಾರೆ.
ನವದೆಹಲಿ, ಡಿಸೆಂಬರ್ 15: ಅಂತಾರಾಷ್ಟ್ರೀಯ ರಾಜಕೀಯ ಅನಿಶ್ಚಿತತೆ ಹೊರತುಪಡಿಸಿದರೆ ಮುಂಬರುವ 2024ರ ವರ್ಷ ಶುಭ ಇರಲಿದೆ ಎಂದು ಸಿಸ್ಕೋ ಸಿಸ್ಟಮ್ಸ್ನ ಮಾಜಿ ಸಿಇಒ ಜಾನ್ ಟಿ ಚೇಂಬರ್ಸ್ (John T Chambers) ಭವಿಷ್ಯ ನುಡಿದಿದ್ದಾರೆ. ತಮ್ಮ ಜಾಗತಿಕ ಮುನ್ನೋಟದಲ್ಲಿ ಜಾನ್ ಚೇಂಬರ್ಸ್ ಅವರು ಭಾರತದ ಆರ್ಥಿಕ ಬೆಳವಣಿಗೆಯ ನಾಗಾಲೋಟದ ಬಗ್ಗೆ ಬೆರಗು ವ್ಯಕ್ತಪಡಿಸಿದ್ದಾರೆ. 2024ರಲ್ಲಿ ಜಾಗತಿಕವಾಗಿ ಪ್ರಧಾನವಾಗಿರುವ ನಾಲ್ಕು ಟ್ರೆಂಡ್ಗಳಲ್ಲಿ ಭಾರತವೂ ಒಂದು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಥವಾ ಎಐ ಟೆಕ್ನಾಲಜಿ ಕಾಲ ಆರಂಭವಾಗಿದ್ದು, ಇಂಟರ್ನೆಟ್ ಮತ್ತು ಕ್ಲೌಡ್ಗಿಂತಲೂ ಈ ಇದು ಮಹತ್ವದ್ದೆನಿಸಿದೆ ಎಂದು ಚೇಂಬರ್ಸ್ ಅಭಿಪ್ರಾಯಪಟ್ಟಿದ್ದಾರೆ.
ಚೇಂಬರ್ಸ್ ಭವಿಷ್ಯ ಸದಾ ನಿಜ…?
ಜಾನ್ ಚೇಂಬರ್ಸ್ ಈಗ್ಗೆ ಕೆಲ ವರ್ಷಗಳಿಂದಲೂ ಆರ್ಥಿಕ ಮತ್ತು ಹಣಕಾಸು ವಿಚಾರದಲ್ಲಿ ಮುನ್ನೋಟ ನುಡಿಯುತ್ತಿದ್ಧಾರೆ. ಅವರ ಬಹುತೇಕ ಅಂದಾಜುಗಳು ವಾಸ್ತವಕ್ಕೆ ಹತ್ತಿರ ಇವೆ. 2020ರಲ್ಲಿ ಅವರು ಕೋವಿಡ್ನಿಂದ ಆರ್ಥಿಕವಾಗಿ ನಿರೀಕ್ಷೆಮೀರಿದಷ್ಟು ಪರಿಣಾಮ ಆಗುತ್ತದೆ ಎಂದಿದ್ದರು. ಅದು ನಿಜವಾಗಿದೆ.
ಚೀನಾದಲ್ಲಿ ತಾನು ಹೂಡಿಕೆ ನಿಲ್ಲಿಸಿದ್ದೇನೆ. ತಾವೂ ಕೂಡ ಚೀನಾದಲ್ಲಿ ಹೂಡಿಕೆ ಮಾಡಬೇಡಿ ಎಂದು ಜಾನ್ ಚೇಂಬರ್ಸ್ 2021ರಲ್ಲಿ ಕರೆ ನೀಡಿದ್ದರು. ಅದರಂತೆ, ಚೀನಾ ಮೇಲೆ ಅವಲಂಬಿತವಾಗಿದ್ದ ಜಾಗತಿಕ ಲಾಜಿಸ್ಟಿಕ್ಸ್ ವ್ಯವಸ್ಥೆ ದುರ್ಬಲಗೊಂಡಿತ್ತು.
ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಹೆಚ್ಚು ವೇಗ: ಶೇ. 6.3ರಿಂದ ಶೇ. 6.7ಕ್ಕೆ ನಿರೀಕ್ಷೆ ಹೆಚ್ಚಿಸಿದ ಎಡಿಬಿ
2022ರಲ್ಲಿ ಸಾಂಕ್ರಾಮಿಕ ರೋಗಕ್ಕಿಂತ ಹಣದುಬ್ಬರ ದೊಡ್ಡ ಸಮಸ್ಯೆಯಾಗಲಿದೆ ಎಂದಿದ್ದರು. ಅದರಂತೆ ಬಹಳಷ್ಟು ದೇಶಗಳು ಹಣದುಬ್ಬರದಿಂದ ತತ್ತರಿಸಿವೆ.
2023ರಲ್ಲಿ ಸ್ಟಾರ್ಟಪ್ಗಳಿಗೆ ಫಂಡಿಂಗ್ ಸಿಗುವುದು ಕಷ್ಟವಾಗುತ್ತದೆ. ರಿಸ್ಕ್ ತೆಗೆದುಕೊಳ್ಳುವುದು ಕಡಿಮೆ ಆಗುತ್ತದೆ ಎಂದಿದ್ದರು. ಈ ವರ್ಷ ಜಾಗತಿಕವಾಗಿ ಹಣಕಾಸು ಮಾರುಕಟ್ಟೆ ಎಚ್ಚರಿಕೆಯಿಂದ ನಡೆಯುತ್ತಿದೆ.
2024ಕ್ಕೆ ಜಾನ್ ಟಿ ಚೇಂಬರ್ಸ್ ಅವರು ಹೇಳಿದ ನಾಲ್ಕು ಟ್ರೆಂಡ್ಗಳಿವು
- ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನ ದಶಕ ಆರಂಭವಾಗಿದೆ. ಇದು ಕ್ಲೌಡ್ ಮತ್ತು ಇಂಟರ್ನೆಟ್ಗಿಂತಲೂ ಬೃಹತ್ತಾದುದು.
- ಸೈಬರ್ ಸೆಕ್ಯೂರಿಟಿ; ಎಐ ತಂತ್ರಜ್ಞಾನದ ಒಳ್ಳೆಯದು, ಕೆಟ್ಟದ್ದು ಎಲ್ಲದರ ಹರಿವು ಕಾಣಬಹುದು.
- ಭಾರತದ ಪ್ರಗತಿ
- ಆರ್ಥಿಕತೆ ಮತ್ತು ಐಪಿಒಗಳು
ಇದನ್ನೂ ಓದಿ: Success: ಬೆಂಗಳೂರಿನಲ್ಲಿ ಓದಿದ, ಯಾವತ್ತೂ ಕುಡಿಯದ ಲಲಿತ್ ಲಿಕ್ಕರ್ ದೊರೆಯಾಗಿದ್ದು; 80ರ ವಯಸ್ಸಿನಲ್ಲಿ ಬಿಲಿಯನೇರ್ ಆದ ಕಥೆ
ಕೃತಕ ಬುದ್ಧಿಮತ್ತೆ ಟೆಕ್ನಾಲಜಿ ಬಗ್ಗೆ ಪ್ರಸ್ತಾಪಿಸಿದ ಮಾಜಿ ಸಿಸ್ಕೋ ಸಿಸ್ಟಮ್ಸ್ ಸಿಇಒ ಜಾನ್ ಚೇಂಬರ್ಸ್, ಎಐ ಟೆಕ್ನಾಲಜಿ ಬಳಸದೇ ಇರುವ ಸ್ಟಾರ್ಟಪ್ಗಳು ಬೇಗನೇ ಪತನಗೊಳ್ಳುತ್ತವೆ ಎಂದು ಎಚ್ಚರಿಸಿದ್ದಾರೆ.
My top predictions for 2024, which revolve around AI, cyber, India & the economy. I think next year will be better than most expect – but the current geopolitical climate is a real wildcard. Check out my LinkedIn post where I expand on my thinking: https://t.co/EG8Nr7jEUU pic.twitter.com/M6Neyj9dsN
— John T. Chambers (@JohnTChambers) December 14, 2023
ಎಐ ನಾವು ಅಂದಾಜು ಮಾಡಿದ್ದಕ್ಕಿಂತಲೂ ಹೆಚ್ಚು ಮಾರುಕಟ್ಟೆ ಮತ್ತು ಮನಸ್ಸನ್ನು ಆಕ್ರಮಿಸಿಕೊಳ್ಳುತ್ತದೆ. ಬಿಸಿನೆಸ್ ಉತ್ತಮಪಡಿಸಲು ಅದು ಬಹಳ ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.
ಭಾರತ ವಿಶ್ವದ ನಂಬರ್ ಒನ್ ಆಗುತ್ತದೆ
ಮುಂಬರುವ ವರ್ಷಗಳಲ್ಲಿ ಭಾರತ ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ. ಭಾರತ ಮತ್ತು ಅಮೆರಿಕ ನಡುವಿನ ಸಹಭಾಗಿತ್ವವು ಜಾಗತಿಕವಾಗಿ ಉದ್ಯೋಗಸೃಷ್ಟಿ ಹಾಗೂ ಕ್ರಿಯಾಶೀಲತೆಗೆ ಪುಷ್ಟಿ ಕೊಡಲಿದೆ ಎಂದು ಜಾನ್ ಟಿ ಚೇಂಬರ್ಸ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಈ ಬಾರಿಯೂ ಬಡ್ಡಿದರ ಯಥಾಸ್ಥಿತಿ; ಮುಂದಿನ ವರ್ಷ ದರ ಇಳಿಸುವ ಸುಳಿವು ನೀಡಿದ ಫೆಡರಲ್ ರಿಸರ್ವ್
ಡೀಪ್ಫೇಕ್ ಇತ್ಯಾದಿ ಸೈಬರ್ ಸೆಕ್ಯೂರಿಟಿ ಸಮಸ್ಯೆ…
ಎಐ ತಂತ್ರಜ್ಞಾನ ಬೆಳೆದಂತೆ ಸೈಬರ್ ಸೆಕ್ಯೂರಿಟಿ ಸಮಸ್ಯೆ ಹೆಚ್ಚಾಗಬಹುದು. ಡೀಪ್ಫೇಕ್ಗಳು ಅತಿದೊಡ್ಡ ಸೈಬರ್ ಸಮಸ್ಯೆಯಾಗಬಹುದು ಎಂದು ಎಚ್ಚರಿಸುವ ಚೇಂಬರ್ಸ್, ಇದೆಲ್ಲವನ್ನೂ ಅರಗಿಸಿಕೊಂಡು ಉದ್ಯಮಗಳು ಎಐ ಅನ್ನು ಸ್ವೀಕರಿಸಬೇಕಾಗುತ್ತದೆ ಎಂದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:32 am, Fri, 15 December 23