ಪಾಂಡಿ, ಕರ್ನಾಟಕ, ಯುಪಿಗೆ ಹೆಚ್ಚು ಅಬಕಾರಿ ಆದಾಯ; ಮದ್ಯ ಮಾರಾಟದಿಂದ ಯಾವ್ಯಾವ ಸರ್ಕಾರಗಳ ಖಜಾನೆ ಎಷ್ಟು ಭರ್ತಿ? ಇಲ್ಲಿದೆ ಪಟ್ಟಿ

Alcohol Tax Source for Governments: ಆಲ್ಕೋಹಾಲ್​ಗೆ ವಿಧಿಸಲಾಗುವ ಅಬಕಾರಿ ತೆರಿಗೆ ಬಹುತೇಕ ಸರ್ಕಾರಗಳಿಗೆ ಪ್ರಮುಖ ಆದಾಯ ಮೂಲವಾಗಿದೆ. ಕೇಂದ್ರಾಡಳಿತ ಪ್ರದೇಶ ಪಾಂಡಿಚೆರಿಯ ಒಟ್ಟೂ ಆದಾಯದಲ್ಲಿ ಮದ್ಯ ತೆರಿಗೆಯ ಪಾಲು ಶೇ. 40ರಷ್ಟು ಪಾಲು ಇದೆ. ಉತ್ತರಪ್ರದೇಶ, ಕರ್ನಾಟಕ, ಬಂಗಾಳ ಆದಾಯದಲ್ಲಿ ಅಬಕಾರಿ ಪಾಲು ಶೇ. 20ಕ್ಕಿಂತಲೂ ಹೆಚ್ಚಿದೆ.

ಪಾಂಡಿ, ಕರ್ನಾಟಕ, ಯುಪಿಗೆ ಹೆಚ್ಚು ಅಬಕಾರಿ ಆದಾಯ; ಮದ್ಯ ಮಾರಾಟದಿಂದ ಯಾವ್ಯಾವ ಸರ್ಕಾರಗಳ ಖಜಾನೆ ಎಷ್ಟು ಭರ್ತಿ? ಇಲ್ಲಿದೆ ಪಟ್ಟಿ
ಲಿಕ್ಕರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 15, 2023 | 12:25 PM

ಭಾರತದಲ್ಲಿ ಮದ್ಯ ಮಾರಾಟ ಯಾವತ್ತೂ ಕಡಿಮೆ ಆಗದ ಟ್ರೆಂಡ್. ಬಹಳಷ್ಟು ಪಕ್ಷಗಳು ಮದ್ಯ ಮಾರಾಟ ನಿಷೇಧಿಸುತ್ತೇವೆಂದು ಚುನಾವಣೆ ವೇಳೆ ಹೇಳುತ್ತಾವಾದರೂ ಅಧಿಕಾರಕ್ಕೆ ಬಂದ ಮೇಲೆ ಆ ಆಲೋಚನೆಯೇ ಇರುವುದಿಲ್ಲ. ಅದಕ್ಕೆ ಕಾರಣ, ಲಿಕ್ಕರ್​ನಿಂದ ಸರ್ಕಾರಕ್ಕೆ ಬರುವ ಭರ್ಜರಿ ಆದಾಯ. ವಿವಿಧ ಯೋಜನೆಗಳಿಗೆ ಬೇಕಾದ ಹಣವನ್ನು ಹೊಂದಿಸಲು ಹರಸಾಹಸ ಪಡುವ ಸರ್ಕಾರಗಳಿಗೆ ಖಜಾನೆ ತುಂಬಿಸಲು ಅಬಕಾರಿ ತೆರಿಗೆ (Excise tax) ಪ್ರಮುಖ ದಾರಿ. ಅಂತೆಯೇ, ಮದ್ಯ ಮಾರಾಟ ನಿಯಂತ್ರಿಸಲು ಅಬಕಾರಿ ತೆರಿಗೆ ಹೆಚ್ಚಿಸುತ್ತಾ ಹೋದಷ್ಟೂ ಖಜಾನೆ ತುಂಬುತ್ತಾ ಹೋಗುತ್ತದೆ. ಒಂದು ಕಡೆ ಮದ್ಯದ ವಿರುದ್ಧ ಇದೆ ಎಂದು ತೋರಿಸಿಕೊಂಡಂತೆ ಆಯಿತು, ಮತ್ತೊಂದು ಕಡೆ ಖಜಾನೆಯನ್ನೂ ತುಂಬಿಸಿಕೊಂಡಂತೆ ಆಯಿತು ಸರ್ಕಾರದ ಕ್ರಮ.

ಇನ್ನು, ಅಬಕಾರಿ ಆದಾಯದ ವಿಚಾರಕ್ಕೆ ಬಂದರೆ ಪಾಂಡಿಚೆರಿ ನಂಬರ್ ಒನ್ ಎನಿಸಿದೆ. ಈ ಪುಟ್ಟ ಕೇಂದ್ರಾಡಳಿತ ಪ್ರದೇಶದ ಒಟ್ಟೂ ಆದಾಯದಲ್ಲಿ ಅಬಕಾರಿ ತೆರಿಗೆಯ ಪಾಲು ಶೇ. 40ರಷ್ಟು ಇದೆ. ಉತ್ತರಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಅಬಕಾರಿ ಆದಾಯ ಶೇ. 20ಕ್ಕಿಂತಲೂ ಹೆಚ್ಚಿದೆ. ಇವು ಕಾರ್ತಿಕ್ ಬಾಲಚಂದ್ರನ್ ಎಂಬುವವರು ಆರ್​ಬಿಐ ದತ್ತಾಂಶವನ್ನು ಉಲ್ಲೇಖಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್​ನ ಅಂಶಗಳು.

ಇದನ್ನೂ ಓದಿ: Predictions: ಹಿಂದೆಲ್ಲಾ ಕರಾರುವಾಕ್ ಭವಿಷ್ಯ ನುಡಿದಿದ್ದ ಜಾನ್ ಚೇಂಬರ್ಸ್ 2024ಕ್ಕೆ ಭಾರತ, ಎಐ ಟೆಕ್ನಾಲಜಿ ಬಗ್ಗೆ ಹೇಳಿದ್ದೇನು ನೋಡಿ..

ಆಲ್ಕೋಹಾಲ್​ಗೆ ವಿಧಿಸುವ ಅಬಕಾರಿ ತೆರಿಗೆಯಿಂದ ವಿವಿಧ ಸರ್ಕಾರಗಳ ಖಜಾನೆಗೆ ಎಷ್ಟು ಭರ್ತಿ ಆಗುತ್ತದೆ, ವಿವರ…

  • ಪಾಂಡಿಚೆರಿ: ಶೇ. 40
  • ಉತ್ತರಪ್ರದೇಶ: ಶೇ. 22.1
  • ಕರ್ನಾಟಕ: ಶೇ. 20.8
  • ಬಂಗಾಳ: ಶೇ. 20.2
  • ಉತ್ತರಾಖಂಡ್: ಶೇ. 19.8
  • ಪಂಜಾಬ್: ಶೇ. 18.9
  • ಸಿಕ್ಕಿಂ: ಶೇ. 18.2
  • ಹಿಮಾಚಲಪ್ರದೇಶ: ಶೇ. 18
  • ಆಂಧ್ರ: ಶೇ. 17.5
  • ಛತ್ತೀಸ್​ಗಡ: ಶೇ. 17.3
  • ಮಧ್ಯಪ್ರದೇಶ: ಶೇ. 16
  • ರಾಜಸ್ಥಾನ: ಶೇ. 14.9
  • ಒಡಿಶಾ: ಶೇ. 14.6
  • ತೆಲಂಗಾಣ: 15.2
  • ಹರ್ಯಾಣ: ಶೇ. 15.2
  • ತ್ರಿಪುರ: ಶೇ. 14.2
  • ದೆಹಲಿ: ಶೇ. 13.7
  • ಮೇಘಾಲಯ: ಶೇ. 12.9
  • ಜಮ್ಮು ಕಾಶ್ಮೀರ: ಶೇ. 11.8
  • ಗೋವಾ: ಶೇ. 9.8
  • ಅರುಣಾಚಲಪ್ರದೇಶ: ಶೇ. 9.4
  • ಮಹಾರಾಷ್ಟ್ರ: ಶೇ. 8.5
  • ಅಸ್ಸಾಂ: ಶೇ. 7.8
  • ತಮಿಳುನಾಡು: ಶೇ. 6.5
  • ಕೇರಳ: ಶೇ. 3.7
  • ಮಣಿಪುರ: ಶೇ. 0.6
  • ಮಿಝೋರಾಂ: ಶೇ. 0.2
  • ನಾಗಾಲ್ಯಾಂಡ್: ಶೇ. 0.2
  • ಗುಜರಾತ್: ಶೇ. 0.1

ಇದನ್ನೂ ಓದಿ: Success: ಬೆಂಗಳೂರಿನಲ್ಲಿ ಓದಿದ, ಯಾವತ್ತೂ ಕುಡಿಯದ ಲಲಿತ್ ಲಿಕ್ಕರ್ ದೊರೆಯಾಗಿದ್ದು; 80ರ ವಯಸ್ಸಿನಲ್ಲಿ ಬಿಲಿಯನೇರ್ ಆದ ಕಥೆ

ಗೋವಾ, ಕೇರಳ, ತಮಿಳುನಾಡು ರಾಜ್ಯಗಳಿಗೂ ಲಿಕ್ಕರ್ ಪ್ರಮುಖ ಆದಾಯ ಮೂಲವಾಗಿದೆ. ಆದರೆ, ಅಲ್ಲಿ ಲಿಕ್ಕರ್ ಮಾರಾಟದಿಂದ ಅಬಕಾರಿ ಟ್ಯಾಕ್ಸ್ ಬದಲು ಸೇಲ್ಸ್ ಟ್ಯಾಕ್ಸ್ ಇದೆ. ಕಾರ್ತಿಕ್ ಬಾಲಚಂದ್ರನ್ ಅವರು ತಮ್ಮ ಗ್ರಾಫಿಕ್ಸ್​ನಲ್ಲಿರುವ ಮಾಹಿತಿ ಅಬಕಾರಿ ತೆರಿಗೆಯದ್ದು ಎಂದು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ