AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್  ಸರ್ಕಾರ ಇರುವೆಡೆಯೆಲ್ಲ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತವೆ: ಪ್ರಲ್ಹಾದ್ ಜೋಶಿ

ಕಾಂಗ್ರೆಸ್  ಸರ್ಕಾರ ಇರುವೆಡೆಯೆಲ್ಲ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತವೆ: ಪ್ರಲ್ಹಾದ್ ಜೋಶಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Apr 07, 2025 | 10:31 AM

ಪೆಟ್ರೋಲಿಯಂ ಪದಾರ್ಥಗಳಲ್ಲಿ ಕಲಬೆರಕೆ ವಿಷಯದಲ್ಲಿ ಮಾತಾಡಿದ ಪ್ರಲ್ಹಾದ್ ಜೋಶಿ, ಅದು ರಾಜ್ಯದಲ್ಲಿ ನಡೆದಿದ್ದರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ, ಕೇಂದ್ರ ಸರ್ಕಾರ ಕಾನೂನು ಮತ್ತು ನಿಯಮಗಳನ್ನು ರೂಪಿಸುತ್ತದೆ, ಅದರೆ ಅವುಗಳನ್ನು ಜಾರಿಗೊಳಿಸುವುದನ್ನು ರಾಜ್ಯ ಸರ್ಕಾರಗಳು ಮಾಡುತ್ತವೆ, ಗ್ರಾಹಕರು ಸಹಾಯವಾಣಿಯಲ್ಲಿ ದೂರು ದಾಖಲಿಸಿದರೆ ಅದನ್ನು ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಜೋಶಿ ಹೇಳಿದರು.

ಹುಬ್ಬಳ್ಳಿ, ಏಪ್ರಿಲ್ 7: ಕಾಂಗ್ರೆಸ್ ಪಕ್ಷ ಇದ್ದೆಡೆಯೆಲ್ಲ ಕಾನೂನುಬಾಹಿರ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತವೆ, ಕ್ರಿಮಿನಲ್ ಗಳಿಗೆ, ಅಕ್ರಮ ಕೆಲಸಗಳಲ್ಲಿ ಭಾಗಿಯಾಗುವವರಿಗೆ ಕಾಂಗ್ರೆಸ್ ಪಕ್ಷ ಸ್ವರ್ಗವಿದ್ದಂತೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಇದು ಕೇವಲ ರಾಜಕೀಯ ಹೇಳಿಕೆ ಅಲ್ಲ, ಹಿಂದೆ ತಾನು ಕಂಡಿರುವ ಅನುಭವದಿಂದ ಈ ಮಾತನ್ನು ಹೇಳುತ್ತಿದ್ದೇನೆ, ಕ್ರಿಮಿನಲ್ ಗಳಿಗೆ ಕಾಂಗ್ರೆಸ್ ಶಾಸಕರು ಮತ್ತು ಮಂತ್ರಿಗಳೊಂದಿಗೆ ಬಾಂಧ್ಯವ್ಯ ಇರುತ್ತದೆ, ಹಾಗಾಗಿ ಅವರ ವಿರುದ್ಧ ಯಾವ ಕ್ರಮವೂ ಜರುಗಲ್ಲ ಎಂದು ಜೋಶಿ ಹೇಳಿದರು.

ಇದನ್ನೂ ಓದಿ:  ಕೇರಳ ಬಿಜೆಪಿ ಅಧ್ಯಕ್ಷರಾಗಿ ರಾಜೀವ್‌ ಚಂದ್ರಶೇಖರ್‌ ನೇಮಕ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಘೋಷಣೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Apr 07, 2025 10:31 AM