ಕುಟುಂಬ ರಾಜಕಾರಣದಿಂದ ಬಿಜೆಪಿ ಹೊರಬರುವ ವರೆಗೂ ಮತ್ತೆ ಪಕ್ಷಕ್ಕೆ ಬರಲ್ಲ: ಯತ್ನಾಳ್ ಖಡಕ್ ನುಡಿ
ಕುಟುಂಬ ರಾಜಕಾರಣದ ವಶದಿಂದ ಬಿಜೆಪಿ ಹೊರ ಬರುವ ವರೆಗೂ ಪಕ್ಷಕ್ಕೆ ಮತ್ತೆ ಸೇರುವುದಿಲ್ಲ ಎಂದು ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಅಲ್ಲದೆ, ಬಿಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಮಾತಿನ ವಿಡಿಯೋ ಇಲ್ಲಿದೆ.
ಬೆಳಗಾವಿ, ಏಪ್ರಿಲ್ 7: ಒಂದೆಡೆ, ಪ್ರಧಾನಿ ನರೇಂದ್ರ ಮೋದಿ ಕುಟುಂಬ ರಾಜಕಾರಣದ ವಿರುದ್ಧ ಮಾತನಾಡುತ್ತಾರೆ. ಮತ್ತೊಂದೆಡೆ, ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಕುಟುಂಬದ ರಾಜಕಾರಣ ನಡೆಯುತ್ತಿದೆ ಎಂದು ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಮತ್ತೆ ಬಿಜೆಪಿಗೆ ಯಾಕೆ ಬರಬೇಕು? ವಿಜಯೇಂದ್ರನ ಗೆಲ್ಲಿಸಲು ಬರಬೇಕಾ? ಕುಟುಂಬ ರಾಜಕಾರಣ ತೊಲಗುವ ವರೆಗೂ ಬಿಜೆಪಿಗೆ ಬರಲ್ಲ ಎಂದರು.
Published on: Apr 07, 2025 11:45 AM