Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಮತ್ತೆ ಕುಸಿತ; ಇಲ್ಲಿದೆ ದರಪಟ್ಟಿ
Bullion Market 2025 April 6th: ಚಿನ್ನ, ಬೆಳ್ಳಿ ಬೆಲೆಗಳ ಇಳಿಕೆ ಮುಂದುವರಿದಿದೆ. ಚಿನ್ನದ ಬೆಲೆ ಗರಿಷ್ಠ ಮಟ್ಟದಿಂದ 250 ರೂ ಇಳಿದರೆ, ಬೆಳ್ಳಿ ಬೆಲೆ 11 ರೂ ಕುಸಿದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 8,310 ರೂ, 24 ಕ್ಯಾರಟ್ ಚಿನ್ನದ ಬೆಲೆ 9,066 ರೂಗೆ ಇಳಿಕೆ ಆಗಿದೆ. ಬೆಳ್ಳಿ ಬೆಲೆ 94 ರೂಗೆ ಕುಸಿದಿದೆ. ಚೆನ್ನೈ ಮೊದಲಾದೆಡೆ ಬೆಲೆ 103 ರೂಗೆ ಇಳಿಕೆ ಆಗಿದೆ.

ಬೆಂಗಳೂರು, ಏಪ್ರಿಲ್ 6: ಚಿನ್ನ ಮತ್ತು ಬೆಳ್ಳಿ ಬೆಲೆಗಳ (Gold and silver rates) ಪ್ರಚಂಡ ಕುಸಿತ ಈ ವಾರಾಂತ್ಯದಲ್ಲೂ ಮುಂದುವರರಿದಿದೆ. ಚಿನ್ನದ ಬೆಲೆ ತನ್ನ ಗರಿಷ್ಠ ಮಟ್ಟದಿಂದ ಗ್ರಾಮ್ಗೆ ಬರೋಬ್ಬರಿ 250 ರೂನಷ್ಟು ಕುಸಿದಿದೆ. ಬೆಳ್ಳಿ ಬೆಲೆಯಂತೂ ಒಂದು ಗ್ರಾಮ್ಗೆ 11 ರೂನಷ್ಟು ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 8,560 ರೂ ಇದ್ದದ್ದು 8,310 ರೂಗೆ ಇಳಿದಿದೆ. ಭಾರತದಲ್ಲಿ ಮಾತ್ರವಲ್ಲ, ಬಹುತೇಕ ಎಲ್ಲಾ ದೇಶಗಳಲ್ಲೂ ಚಿನ್ನದ ಬೆಲೆ ಗಣನೀಯವಾಗಿ ತಗ್ಗಿದೆ. ಚಿನ್ನಕ್ಕಿಂತ ಬೆಳ್ಳಿ ಬೆಲೆ ಸಖತ್ ಕುಸಿತ ಕಾಣುತ್ತಿದೆ. ಮೊನ್ನೆ ನಾಲ್ಕು ರುಪಾಯಿ ಇಳಿದಿದ್ದ ಬೆಳ್ಳಿ ಬೆಲೆ ನಿನ್ನೆ ಬರೋಬ್ಬರಿ 5 ರೂ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಗ್ರಾಮ್ಗೆ 105 ರೂ ಇದ್ದ ಬೆಳ್ಳಿ ಬೆಲೆ ಇವತ್ತು 94 ರೂ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 83,100 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 90,660 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 83,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,400 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 6ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 83,100 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,660 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,990 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 940 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 83,100 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,660 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 940 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 83,100 ರೂ
- ಚೆನ್ನೈ: 83,100 ರೂ
- ಮುಂಬೈ: 83,100 ರೂ
- ದೆಹಲಿ: 83,250 ರೂ
- ಕೋಲ್ಕತಾ: 83,100 ರೂ
- ಕೇರಳ: 83,100 ರೂ
- ಅಹ್ಮದಾಬಾದ್: 83,150 ರೂ
- ಜೈಪುರ್: 83,250 ರೂ
- ಲಕ್ನೋ: 83,250 ರೂ
- ಭುವನೇಶ್ವರ್: 83,100 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 4,300 ರಿಂಗಿಟ್ (82,850 ರುಪಾಯಿ)
- ದುಬೈ: 3,390 ಡಿರಾಮ್ (78,910 ರುಪಾಯಿ)
- ಅಮೆರಿಕ: 920 ಡಾಲರ್ (78,660 ರುಪಾಯಿ)
- ಸಿಂಗಾಪುರ: 1,275 ಸಿಂಗಾಪುರ್ ಡಾಲರ್ (80,900 ರುಪಾಯಿ)
- ಕತಾರ್: 3,425 ಕತಾರಿ ರಿಯಾಲ್ (80,330 ರೂ)
- ಸೌದಿ ಅರೇಬಿಯಾ: 3,460 ಸೌದಿ ರಿಯಾಲ್ (78,830 ರುಪಾಯಿ)
- ಓಮನ್: 360.50 ಒಮಾನಿ ರಿಯಾಲ್ (80,070 ರುಪಾಯಿ)
- ಕುವೇತ್: 279.90 ಕುವೇತಿ ದಿನಾರ್ (77,750 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 9,400 ರೂ
- ಚೆನ್ನೈ: 10,300 ರೂ
- ಮುಂಬೈ: 9,400 ರೂ
- ದೆಹಲಿ: 9,400 ರೂ
- ಕೋಲ್ಕತಾ: 9,400 ರೂ
- ಕೇರಳ: 10,300 ರೂ
- ಅಹ್ಮದಾಬಾದ್: 9,400 ರೂ
- ಜೈಪುರ್: 9,400 ರೂ
- ಲಕ್ನೋ: 9,400 ರೂ
- ಭುವನೇಶ್ವರ್: 10,300 ರೂ
- ಪುಣೆ: 9,400
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








