AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ರಾಜೀನಾಮೆ ನೀಡುತ್ತೇನೆ : ಏಳು ಪದಗಳಲ್ಲೇ ರಾಜೀನಾಮೆ ಪತ್ರ ಬರೆದು ಕೆಲಸ ತೊರೆದ ಉದ್ಯೋಗಿ

ಕೆಲವರು ತಮ್ಮ ಕೆಲಸದ ಸ್ಥಳದಲ್ಲಿ ಅನುಭವಿಸುವ ಕಷ್ಟ ಹೇಳಲಾಗದು. ಈ ಒತ್ತಡಭರಿತ ಕೆಲಸದಿಂದಾಗಿ ಈ ಕೆಲಸವೇ ಬೇಡ ಎನ್ನುವ ನಿರ್ಧಾರಕ್ಕೆ ಬರುವವರೇ ಹೆಚ್ಚು. ಹೀಗಾಗಿ ತಾವು ಮಾಡುತ್ತಿರುವ ಉದ್ಯೋಗ ತೊರೆಯಲು ಔಪಚಾರಿಕವಾಗಿ ರಾಜೀನಾಮೆ ನೀಡುವುದನ್ನು ನೀವು ನೋಡಿರಬಹುದು. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಉದ್ಯೋಗಿಯೊಬ್ಬನು ಏಳು ಪದಗಳಲ್ಲೇ ರಾಜೀನಾಮೆ ಪತ್ರ ಬರೆದು ಕೆಲಸವನ್ನು ತೊರೆದಿದ್ದಾರೆ. ಈ ಫೋಟೋವೊಂದು ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರು ಈತನ ಕ್ರಿಯೇಟಿವಿ ಮೆಚ್ಚಿಕೊಂಡಿದ್ದಾರೆ.

ನಾನು ರಾಜೀನಾಮೆ ನೀಡುತ್ತೇನೆ : ಏಳು ಪದಗಳಲ್ಲೇ ರಾಜೀನಾಮೆ ಪತ್ರ ಬರೆದು ಕೆಲಸ ತೊರೆದ ಉದ್ಯೋಗಿ
ವೈರಲ್ ಪೋಸ್ಟ್
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 07, 2025 | 10:50 AM

ಕೈ ತುಂಬಾ ಸಂಬಳ (Job) ಸಿಗುವ ಕೆಲಸ ಸಿಕ್ಕರೆ ಸಾಕು ಎಂದು ಬಯಸುವುದು ಸಹಜ. ಅದಲ್ಲದೇ, ಹೆಚ್ಚಿನವರು ಐಟಿ ಬಿಟಿ ಸಂಸ್ಥೆಗಳು (IT Company), ಖಾಸಗಿ ಕಂಪೆನಿ (Private company) ಗಳು ಮತ್ತು ಬಹುರಾಷ್ಟ್ರೀಯ ಕಂಪೆನಿ (Multinational company) ಗಳಲ್ಲಿ ಉದ್ಯೋಗ ಸಿಗಬೇಕೆಂದು ಬಯಸುತ್ತಾರೆ. ಆದರೆ ಕಂಪೆನಿಗಳಿಗೆ ಸೇರುವಾದಾಗಿನಿಂದ ಹಿಡಿದು ಉದ್ಯೋಗ ತೊರೆಯುವವರೆಗೂ ಒಂದಷ್ಟು ನಿಯಮ (rules) ಗಳನ್ನು ಪಾಲಿಸಬೇಕಾಗುತ್ತದೆ. ಆದರೆ ಕೆಲವು ಉದ್ಯೋಗಿಗಳು ಈ ನಿಯಮಗಳನ್ನು ಬೇಕಂತಲೇ ಬ್ರೇಕ್ ಮಾಡುವುದನ್ನು ನೋಡಿರಬಹುದು. ಆದರೆ ಇದೀಗ ಇಲ್ಲೊಬ್ಬ ಉದ್ಯೋಗಿಯೂ ರಾಜೀನಾಮೆ (Resignation) ಯನ್ನು ಏಳು ಪದಗಳಲ್ಲಿ ಬರೆದು ಮುಗಿಸಿದ್ದಾನೆ. ಈ ರಾಜೀನಾಮೆ ಪತ್ರದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ರೆಡ್ಡಿಟ್ ಬಳಕೆದಾರರೊಬ್ಬರು recruiting hell ಹೆಸರಿನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಜೊತೆಗೆ ಮಾಡುವ ವ್ಯಕ್ತಿಯೂ ನೀಡಿದ ರಾಜೀನಾಮೆ ಪತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದೊಂದಿಗೆ ನನ್ನ ಸಹೋದ್ಯೋಗಿಯೊಬ್ಬರು ಇದ್ದಕ್ಕಿಂತ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದಾಗ ಅವರ ಟೇಬಲ್ ಗಮನಿಸಿದಾಗ ಈ ರಾಜೀನಾಮೆ ಪತ್ರವು ಸಿಕ್ಕಿತು ಎಂದಿದ್ದಾರೆ. ಈ ಪತ್ರದಲ್ಲಿ ಲೆಕ್ಕಪತ್ರ ನಿರ್ವಹಣೆ ನನ್ನಿಂದ ಅಸಾಧ್ಯ. ನಾನು ರಾಜೀನಾಮೆ ನೀಡುತ್ತೇನೆ ಎಂದು ಬರೆದಿರುವುದನ್ನು ನೋಡಬಹುದು. ಇದರಲ್ಲಿ ಯಾವುದೇ ವಿವರಣೆ ನೀಡದೇ ಕಂಪೆನಿಗೆ ಧನ್ಯವಾದ ತಿಳಿಸದೇನೇ ವಿಭಿನ್ನವಾಗಿ ರಾಜೀನಾಮೆ ನೀಡಲಾಗಿದೆ.

ಇದನ್ನೂ ಓದಿ: ಕಾಲೇಜಿನ ಬೀಳ್ಕೊಡುಗೆ ಸಮಾರಂಭದಂದು ಭಾಷಣ ಮಾಡುತ್ತಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

ವೈರಲ್​​​ ಪೋಸ್ಟ್​​​ ಇಲ್ಲಿದೆ ನೋಡಿ:

Our newest employee was MIA then we found this on his desk byu/when_air_was_breath inrecruitinghell

ಇದನ್ನೂ ಓದಿ
Image
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
Image
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
Image
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
Image
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಈ ಪೋಸ್ಟ್ ಗೆ ಅಧಿಕ ವೀಕ್ಷಣೆ ಕಂಡುಕೊಂಡಿದ್ದು, ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ಉದ್ಯೋಗದಲ್ಲಿ ಪ್ರಾಮಾಣಿಕವಲ್ಲದ ವ್ಯಕ್ತಿಗಳು ಮಾತ್ರ ಈ ರೀತಿ ಮಾಡಲು ಸಾಧ್ಯ’ ಎಂದಿದ್ದಾರೆ. ಮತ್ತೊಬ್ಬರು, ‘ಈ ರಾಜೀನಾಮೆ ಪತ್ರವು ಕೆಲಸದ ಸ್ಥಳದಲ್ಲಿ ಆ ವ್ಯಕ್ತಿಯ ಮನಸ್ಥಿತಿ ಹಾಗೂ ಒತ್ತಡ ಎಷ್ಟಿದೆ’ ಎಂದು ಸ್ಪಷ್ಟವಾಗಿ ಹೇಳುತ್ತದೆ. ಇನ್ನೊಬ್ಬ ಬಳಕೆದಾರರು, ‘ನಾನು ಕೂಡ ಈ ಹಿಂದೆ ಮ್ಯಾನೇಜರ್ ಟೇಬಲ್ ಮೇಲೆ ಈ ರೀತಿ ರಾಜೀನಾಮೆ ಪತ್ರ ಅಂಟಿಸಿ ಬಂದಿದ್ದೆ ಎಂದಿದ್ದಾರೆ. ಕೆಲವರು, ಒತ್ತಡಭರಿತ ಕೆಲಸದ ಸ್ಥಳಗಳಲ್ಲಿ ಉದ್ಯೋಗಿಗಳಿಂದ ಈ ರೀತಿಯ ಹಠಾತ್ ರಾಜೀನಾಮೆ ಪತ್ರಗಳು ಬರಲು ಸಾಧ್ಯ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!