ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡುವ ಆಲೋಚನೆಯಾ? ಫೈವ್ ಸ್ಟಾರ್ ರೇಟಿಂಗ್ ಇರುವ ಜನಪ್ರಿಯ ಫಂಡ್​ಗಳಿವು…

5 Star Rated Mutual Funds: ಮ್ಯುಚುವಲ್ ಫಂಡ್​ಗಳಲ್ಲಿ ನಾನಾ ವಿಧ ಇವೆ. ಮಾರುಕಟ್ಟೆ ಅಧ್ಯಯನ ಮಾಡಿ ಹೂಡಿಕೆ ಮಾಡುವ ತಜ್ಞರಿಂದ ಫಂಡ್ ನಿರ್ವಹಣೆ ಆಗುತ್ತದೆ. ಸಾಕಷ್ಟು ಇರುವ ಮ್ಯೂಚುವಲ್ ಫಂಡ್​ನಲ್ಲಿ ಯಾವುದನ್ನು ಆಯ್ಕೆ ಮಾಡಬೇಕು ಎಂಬುದು ಗೊಂದಲ ಆಗುತ್ತದೆ. ಯಾವ ಮ್ಯುಚುವಲ್ ಫಂಡ್ ಆರಿಸಬೇಕೆಂದು ಮಾನದಂಡಗಳಲ್ಲಿ ರೇಟಿಂಗ್ ಒಂದು. ಫೈವ್ ಸ್ಟಾರ್ ರೇಟಿಂಗ್ ಇರುವ ಫಂಡ್​ಗಳ ಪಟ್ಟಿ ಇಲ್ಲಿದೆ.

ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡುವ ಆಲೋಚನೆಯಾ? ಫೈವ್ ಸ್ಟಾರ್ ರೇಟಿಂಗ್ ಇರುವ ಜನಪ್ರಿಯ ಫಂಡ್​ಗಳಿವು...
ಮ್ಯುಚುವಲ್ ಫಂಡ್

Updated on: Dec 15, 2023 | 5:22 PM

ಇವತ್ತಿನ ದಿನಗಳಲ್ಲಿ ಹೆಚ್ಚು ಆದಾಯ ಕೊಡಬಲ್ಲ ಹೂಡಿಕೆ ಆಯ್ಕೆಗಳಲ್ಲಿ ಮ್ಯುಚುವಲ್ ಫಂಡ್ ಇದೆ. ಷೇರುಗಳ ಮೇಲೆ ನೇರವಾಗಿ ಹೂಡಿಕೆ ಮಾಡಲು ಆಗದೇ ಇರುವವರು ಮ್ಯುಚುವಲ್ ಫಂಡ್ (mutual fund) ಮೂಲಕ ಇನ್ವೆಸ್ಟ್​ಮೆಂಟ್ ಮಾಡಬಹುದು. ಮ್ಯುಚುವಲ್ ಫಂಡ್​ಗಳಲ್ಲೇ ಸಾಕಷ್ಟು ವೈವಿಧ್ಯತೆ ಇದೆ. ಲಾರ್ಜ್ ಕ್ಯಾಪ್ ಫಂಡ್, ಅಂದರೆ ದೊಡ್ಡ ದೊಡ್ಡ ಸಂಸ್ಥೆಗಳ ಷೇರುಗಳ ಮೇಲೆ ಹೂಡಿಕೆ ಮಾಡುವ ಫಂಡ್ ಇರುತ್ತದೆ. ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್ ಫಂಡ್​ಗಳು ಇರುತ್ತವೆ. ಬೇರೆ ಬೇರೆ ಸ್ತರದ ಕಂಪನಿಗಳ ಷೇರುಗಳು, ಸರ್ಕಾರಿ ಬಾಂಡ್​ಗಳು ಇತ್ಯಾದಿ ಮೇಲೆ ಹೂಡಿಕೆ ಮಾಡುವ ಮಲ್ಟಿ ಕ್ಯಾಪ್ ಫಂಡ್​ಗಳು, ಹೈಬ್ರಿಡ್ ಫಂಡ್​ಗಳು ಹೀಗೆ ಬಹಳಷ್ಟು ವೈವಿಧ್ಯತೆ (diversified investment) ಇದೆ.

ಎಲ್ಲಾ ಮ್ಯುಚುವಲ್ ಫಂಡ್​ಗಳು ಲಾಭ ತಂದುಕೊಡಲ್ಲ. ಎಲ್ಲವೂ ಬಾಹ್ಯ ಅಂಶಗಳ ಮೇಲೆ ಅವಲಂಬಿತವಾಗಿರುತ್ತವೆ. ಎಲ್ಲೆಲ್ಲಿ ಹಣ ಹೂಡಿಕೆ ಮಾಡಬೇಕೆಂದು ಫಂಡ್ ಮ್ಯಾನೇಜರುಗಳು ಮಾರುಕಟ್ಟೆ ಅಧ್ಯಯನ ಮಾಡಿ ನಿರ್ಧರಿಸುತ್ತಾರೆ. ಕೆಲವೊಮ್ಮೆ ಅವರ ಲೆಕ್ಕಾಚಾರ ತಲೆಕೆಳಗು ಆಗಬಹುದು. ಹೀಗಾಗಿ, ಹಲವು ಮ್ಯುಚುವಲ್ ಫಂಡ್​ಗಳು ನಷ್ಟ ಮಾಡಿರುವುದು ಉಂಟು.

ಇದನ್ನೂ ಓದಿ: ಎಸ್​ಐಪಿ ಪ್ಲಾನ್​ಗಳಿಗೆ ಮುಗಿಬೀಳುತ್ತಿರುವ ಜನರು; ನವೆಂಬರ್​ನಲ್ಲಿ ದಾಖಲೆಯ 17,000 ಕೋಟಿ ರೂ ಹೂಡಿಕೆ

ಈ ಹಿನ್ನೆಲೆಯಲ್ಲಿ ಯಾವ ಮ್ಯುಚುವಲ್ ಫಂಡ್ ಮೇಲೆ ಹೂಡಿಕೆ ಮಾಡಬಹುದು ಎಂದು ನಿರ್ಧರಿಸುವುದು ಸವಾಲಿನ ಕೆಲಸ. ಈ ಕಾರ್ಯದಲ್ಲಿ ನಮಗೆ ನೆರವಾಗುವುದು ರೇಟಿಂಗ್ ಏಜೆನ್ಸಿಗಳು. ಕ್ರಿಸಿಲ್ ಇತ್ಯಾದಿ ರೇಟಿಂಗ್ ಸಂಸ್ಥೆಗಳು ಕೊಡುವ ರೇಟಿಂಗ್​ಗಳು ಸೂಕ್ತ ಮ್ಯುಚುವಲ್ ಫಂಡ್ ಆಯ್ಕೆ ಮಾಡುವ ನಮ್ಮ ಕೆಲಸವನ್ನು ಸುಲಭಗೊಳಿಸುತ್ತವೆ.

ಕ್ರಿಸಿಲ್​ನಿಂದ ಐದಕ್ಕೆ ಐದು ರೇಟಿಂಗ್ ಪಡೆದ ಹಲವು ಮ್ಯುಚುವಲ್ ಫಂಡ್​ಗಳಿವೆ. ಅದರಲ್ಲಿ ಆಯ್ದ ಕೆಲ ಫಂಡ್​ಗಳು ಹಾಗೂ ಅವು ಒಂದು ವರ್ಷದಲ್ಲಿ ತಂದಿರುವ ರಿಟರ್ನ್ ಎಷ್ಟು ಎಂಬ ಟಾಪ್-10 ಪಟ್ಟಿ ಇಲ್ಲಿದೆ:

ಇದನ್ನೂ ಓದಿ: ಮ್ಯೂಚುವಲ್ ಫಂಡ್​ನಲ್ಲಿ ಹಣ ಹಾಕಿದರೆ ಗ್ಯಾರಂಟಿ ಲಾಭ ಬರುತ್ತದೆಂಬುದು ಭ್ರಮೆ; ಹೂಡಿಕೆಗೆ ಮುಂಚೆ ಕೆಲ ವಿಚಾರಗಳು ತಿಳಿದಿರಲಿ

  1. ಎಸ್​ಬಿಐ ಕಾಂಟ್ರಾ ಫಂಡ್: ಶೇ. 22.84ರಷ್ಟು ವಾರ್ಷಿಕ ರಿಟರ್ನ್
  2. ಎಸ್​ಬಿಐ ಲಾಂಗ್ ಟರ್ಮ್ ಈಕ್ವಿಟಿ ಫಂಡ್ (ಇಎಲ್​ಎಸ್​ಎಸ್ ಸ್ಕೀಮ್): ಶೇ. 25.13ರಷ್ಟು ವಾರ್ಷಿಕ ರಿಟರ್ನ್
  3. ಎಚ್​ಡಿಎಫ್​ಸಿ ಫ್ಲೆಕ್ಸಿ ಕ್ಯಾಪ್ ಫಂಡ್: ಶೇ. 21.38ರಷ್ಟು ವಾರ್ಷಿಕ ರಿಟರ್ನ್
  4. ಜೆಎಂ ಫೋಕಸ್ಡ್ ಫಂಡ್: ಶೇ. 24.24ರಷ್ಟು ವಾರ್ಷಿಕ ರಿಟರ್ನ್
  5. ಎಚ್​ಡಿಎಫ್​ಸಿ ಲಾರ್ಜ್ ಅಂಡ್ ಮಿಡ್ ಕ್ಯಾಪ್ ಫಂಡ್: ಶೇ. 25.75ರಷ್ಟು ವಾರ್ಷಿಕ ರಿಟರ್ನ್
  6. ಐಸಿಐಸಿಐ ಪ್ರುಡೆನ್ಷಿಯಲ್ ಬ್ಲ್ಯೂಚಿಪ್ ಫಂಡ್ (ಲಾರ್ಜ್ ಕ್ಯಾಪ್): ಶೇ. 19.03ರಷ್ಟು ವಾರ್ಷಿಕ ರಿಟರ್ನ್
  7. ಎಚ್​ಡಿಎಫ್​ಸಿ ಮಿಡ್ ಕ್ಯಾಪ್ ಆಪೋರ್ಚುನಿಟೀಸ್ ಫಂಡ್: ಶೇ. 29.66ರಷ್ಟು ವಾರ್ಷಿಕ ರಿಟರ್ನ್
  8. ಇನ್ವೆಸ್ಕೋ ಇಂಡಿಯಾ ಇನ್​ಫ್ರಾಸ್ಟ್ರಕ್ಚರ್ ಫಂಡ್: ಶೇ. 31.85ರಷ್ಟು ವಾರ್ಷಿಕ ರಿಟರ್ನ್
  9. ನಿಪ್ಪೋನ್ ಇಂಡಿಯಾ ಸ್ಮಾಲ್ ಕ್ಯಾಪ್ ಫಂಡ್: ಶೇ. 30.52ರಷ್ಟು ವಾರ್ಷಿಕ ರಿಟರ್ನ್
  10. ಜೆಎಂ ವ್ಯಾಲ್ಯೂ ಫಂಡ್: ಶೇ. 30.15ರಷ್ಟು ವಾರ್ಷಿಕ ರಿಟರ್ನ್

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us