ವರ್ಲ್ಡ್​​ಸ್ಕಿಲ್ಸ್ ಶಾಂಘೈ 2026; ಗಾರೆ, ಮರಗೆಲಸದಿಂದ ಹಿಡಿದು ಸಾಫ್ಟ್​ವೇರ್​ವರೆಗೆ 64 ಕೌಶಲ್ಯಗಳಲ್ಲಿ ಸ್ಪರ್ಧೆ; ಭಾರತದ ಭರ್ಜರಿ ಉಪಸ್ಥಿತಿ

ಚೀನಾದ ಶಾಂಘೈನಲ್ಲಿ 48ನೇ ವರ್ಲ್ಡ್​ಸ್ಕಿಲ್ಸ್ ಕೂಟ ನಡೆಯುತ್ತಿದೆ. ಈ ಕೂಟದಲ್ಲಿ 64 ಕೌಶಲ್ಯಗಳಲ್ಲಿ ಜಾಗತಿಕ ಸ್ಪರ್ಧೆ ಇರುತ್ತದೆ. ಇದರಲ್ಲಿ ಭಾರತ 63 ಕೌಶಲ್ಯಗಳಲ್ಲಿ ಪಾಲ್ಗೊಳ್ಳುತ್ತಿದೆ. ಹಿಂದಿನ ಕೂಟ 2024ರಲ್ಲಿ ಫ್ರಾನ್ಸ್​ನಲ್ಲಿ ನಡೆದಿತ್ತು. ಅದರಲ್ಲಿ ಭಾರತ 52 ಕೌಶಲ್ಯಗಳಲ್ಲಿ ಸ್ಪರ್ಧಿಸಿತ್ತು. ಎರಡು ವರ್ಷದಲ್ಲಿ ಭಾರತದ ಸ್ಪರ್ಧೆ ಗಟ್ಟಿಗೊಂಡಿದೆ, ಪ್ರಾತಿನಿಧ್ಯ ಹೆಚ್ಚಾಗಿದೆ.

ವರ್ಲ್ಡ್​​ಸ್ಕಿಲ್ಸ್ ಶಾಂಘೈ 2026; ಗಾರೆ, ಮರಗೆಲಸದಿಂದ ಹಿಡಿದು ಸಾಫ್ಟ್​ವೇರ್​ವರೆಗೆ 64 ಕೌಶಲ್ಯಗಳಲ್ಲಿ ಸ್ಪರ್ಧೆ; ಭಾರತದ ಭರ್ಜರಿ ಉಪಸ್ಥಿತಿ
ವರ್ಲ್ಡ್​ಸ್ಕಿಲ್ಸ್ 2026 ಭಾರತ ತಂಡ

Updated on: Sep 15, 2026 | 6:20 PM

ನವದೆಹಲಿ, ಸೆಪ್ಟೆಂಬರ್ 15: ಶಾಂಘೈನಲ್ಲಿ ನಡೆಯಲಿರುವ ವರ್ಲ್ಡ್​ಸ್ಕಿಲ್ಸ್ 2026 ಕೌಶಲ್ಯ ಕೂಟದಲ್ಲಿ 63 ಅಧಿಕೃತ ಕೌಶಲ್ಯ ಸ್ಪರ್ಧೆಗಳ ಪೈಕಿ ಭಾರತ ತಂಡ 63ರಲ್ಲಿ ಪಾಲ್ಗೊಳ್ಳುತ್ತಿದೆ. ಇದು 48ನೇ ವರ್ಲ್ಡ್​ಸ್ಕಿಲ್ಸ್ ಕೂಟವಾಗಿದೆ. 2024ರಲ್ಲಿ ಫ್ರಾನ್ಸ್​ನ ಲಯಾನ್​ನಲ್ಲಿ ನಡೆದ ಹಿಂದಿನ ಅಂದರೆ, 47ನೇ ವರ್ಲ್ಡ್​ಸ್ಕಿಲ್ಸ್ ಕೂಟದಲ್ಲಿ ಭಾರತ 52 ಕೌಶಲ್ಯಗಳಲ್ಲಿ ಪಾಲ್ಗೊಂಡಿತ್ತು. ಈ ಬಾರಿ ಭಾರತ ಹೆಚ್ಚು ಸ್ಪರ್ಧಾತ್ಮಕವಾಗಿದೆ ಮತ್ತು ಪ್​ರಾತಿನಿಧ್ಯವೆನಿಸಿದೆ. ಇದಷ್ಟೇ ಆಗಿದ್ದರೆ ದೊಡ್ಡ ವಿಚಾರ ಎನಿಸುತ್ತಿರಲಿಲ್ಲ. ಆದರೆ, ಭಾರತದಲ್ಲಿ ಕೌಶಲ್ಯ ಶ್ರೇಷ್ಠತೆ ಹೆಚ್ಚುವಂತಹ ವಾತಾವರಣ ನಿರ್ಮಾಣವಾಗುತ್ತಿರುವುದರ ಕುರುಹು ಇದಾಗಿದೆ. ದೇಶಾದ್ಯಂತ ಕೌಶಲ್ಯಪೂರ್ಣ ವೃತ್ತಿಗಳಿಗೆ ಹೊಸ ಗೌರವ ಹಾಗೂ ಬಲವಾದ ಇಕೋಸಿಸ್ಟಂ (Ecosystem) ನಿರ್ಮಿಸುವ ನಿಟ್ಟಿನಲ್ಲಿ ಭಾರತವು ಮಹತ್ವದ ಹೆಜ್ಜೆ ಇಟ್ಟಿದೆ.

ವರ್ಲ್ಡ್‌ಸ್ಕಿಲ್ಸ್ ಲಿಯಾನ್ 2024ರ ಸಾಧನೆ

ಫ್ರಾನ್ಸ್‌ನ ಲಿಯಾನ್‌ನಲ್ಲಿ ನಡೆದ ಕೂಟದಲ್ಲಿ ಭಾರತವು 52 ಸ್ಕಿಲ್ಸ್ ವಿಭಾಗಗಳಲ್ಲಿ ಸ್ಪರ್ಧಿಸಿ, 4 ಕಂಚು ಪದಕಗಳು ಹಾಗೂ 12 ಎಕ್ಸಲೆನ್ಸ್ ಮೆಡಲಿಯನ್‌ಗಳನ್ನು (Medallions for Excellence) ಗೆದ್ದು 13 ನೇ ಸ್ಥಾನ ಪಡೆದಿತ್ತು. 60 ಸ್ಪರ್ಧಿಗಳು ಮತ್ತು 52 ತಜ್ಞರನ್ನು ಒಳಗೊಂಡ ಭಾರತೀಯ ತಂಡವು ಉತ್ತಮ ಪ್ರದರ್ಶನ ನೀಡಿತ್ತು.

ವರ್ಲ್ಡ್‌ಸ್ಕಿಲ್ಸ್ ಶಾಂಘೈ 2026: ಇತಿಹಾಸದಲ್ಲೇ ಅತಿದೊಡ್ಡ ತಂಡ

ಶಾಂಘೈನಲ್ಲಿ ನಡೆಯಲಿರುವ ವರ್ಲ್ಡ್​ಸ್ಕಿಲ್ಸ್ ಕೂಟದಲ್ಲಿ ಭಾರತವು ಒಟ್ಟು 64 ಪ್ರಮುಖ ಕೌಶಲ್ಯ ವಿಭಾಗಗಳ ಪೈಕಿ 63 ವಿಭಾಗಗಳಲ್ಲಿ ಸ್ಪರ್ಧಿಸಲಿದೆ. ಈ ಬಾರಿ 70 ಸ್ಪರ್ಧಿಗಳು ಮತ್ತು 63 ತಜ್ಞರನ್ನೊಳಗೊಂಡ ಭಾರತದ ಅತ್ಯಂತ ಬೃಹತ್ ತಂಡವು ಭಾಗವಹಿಸುತ್ತಿದೆ. ಈ ತಂಡಕ್ಕೆ ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರದಿಂದ 150ಕ್ಕೂ ಹೆಚ್ಚು ಪಾರ್ಟ್ನರ್​ಗಳ (Industry & Academic Partners) ಬೆಂಬಲ ಇದೆ.

ಇದನ್ನೂ ಓದಿ: ಎರಡು ಸಾವಿರ ರೂವರೆಗಿನ ಯುಪಿಐ ಪಾವತಿಗೆ ಇರೋದಿಲ್ಲ ಯಾವುದೇ ಶುಲ್ಕ; ಕೇಂದ್ರದಿಂದ ಪೇಮೆಂಟ್ಸ್ ಕಾಯ್ದೆಗೆ ತಿದ್ದುಪಡಿ

ಎರಡು ವರ್ಷದಲ್ಲಿ ಭಾರತಕ್ಕೆ ಬಲಿಷ್ಠ ಕೌಶಲ್ಯ ತಂಡ ಸಿಕ್ಕಿದ್ದು ಹೇಗೆ?

ಶಾಂಘೈ ಕೂಟಕ್ಕೆ ಭಾರತ ಬಹಳ ಪೂರ್ವದಲ್ಲೇ ತಯಾರಿ ಮಾಡಿದೆ. ಕೌಶಲ್ಯವಂತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಲು ಹಂತ-ಹಂತದ ಚೌಕಟ್ಟು ನಿರ್ಮಿಸಲಾಗಿದೆ. ಗ್ರಾಸ್​ರೂಟ್ ಅಥವಾ ತಳಮಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸುವುದು ಮೊದಲ ಹಂತ. ಆ ಬಳಿಕ ಪ್ರತಿಭೆಗಳ ಪ್ರಯಾಣವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತದೆ. ಕೌಶಲ್ ಮಹೋತ್ಸವ್, ಇಂಡಿಯಾ ಸ್ಕಿಲ್ಸ್, ನ್ಯಾಷನಲ್ ಚಾಂಪಿಯನ್ಸ್, ವರ್ಲ್ಡ್​ಸ್ಕಿಲ್ಸ್ ಮತ್ತು ಚಾಂಪಿಯನ್ ಕ್ಲಬ್, ಹೀಗೆ ಹಂತ ಹಂತವಾಗಿ ಅವರ ಪ್ರಯಾಣ ಇರುತ್ತದೆ.

WorldSkills Shanghai 2026, India's rapid rise in the global skills competition

ವರ್ಲ್ಡ್​ಸ್ಕಿಲ್ಸ್ 2026 ಭಾರತ ತಂಡ

ವಿಶೇಷ ಹೊಸ ಉಪಕ್ರಮಗಳು

  • ಚಾಂಪಿಯನ್ ಕ್ಲಬ್ (Champion Club): ಹಳೆಯ ಸ್ಪರ್ಧಿಗಳು ಮತ್ತು ವಿಜೇತರು ಮುಂದಿನ ಪೀಳಿಗೆಯ ಹೊಸ ಸ್ಪರ್ಧಿಗಳಿಗೆ ಮಾರ್ಗದರ್ಶನ (Mentorship) ನೀಡಲು ಈ ವೇದಿಕೆ ನೆರವಾಗಲಿದೆ.
  • ವಾಲ್ ಆಫ್ ಫೇಮ್ (Wall of Fame): ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಯುವ ಕೌಶಲ್ಯ ಸಾಧಕರನ್ನು ಗೌರವಿಸಲು ಮತ್ತು ಇತರರಿಗೆ ಪ್ರೇರಣೆ ನೀಡಲು ಇದನ್ನು ಸ್ಥಾಪಿಸಲಾಗಿದೆ.
  • ಪಾರದರ್ಶಕ ಆಯ್ಕೆ ಸೂತ್ರ (Selection Matrix): ತಾಂತ್ರಿಕ ಸಾಮರ್ಥ್ಯ ಹಾಗೂ ನಿರಂತರ ಅತ್ಯುತ್ತಮ ಪ್ರದರ್ಶನವನ್ನು ಆಧರಿಸಿ ಸ್ಪರ್ಧಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ.

ಇದನ್ನೂ ಓದಿ: ಸೆಮಿಕಾನ್ ಇಂಡಿಯಾ 2026, ಮೂರು ದಿನಗಳ ಮಹಾಮೇಳಕ್ಕೆ ಸೆ. 17ರಂದು ಪ್ರಧಾನಿ ಮೋದಿ ಚಾಲನೆ; ಭಾರತದ ‘ಚಿಪ್’ ಕ್ರಾಂತಿ ಅನಾವರಣ

ಶಾಂಘೈನಲ್ಲಿ ಯಾವ್ಯಾವ ಕೌಶಲ್ಯಗಳ ಸ್ಪರ್ಧೆ ಇರುತ್ತದೆ?

ವರ್ಲ್ಡ್​ಸ್ಕಿಲ್ಸ್ ಶಾಂಘೈ 2026 ಕೂಟದಲ್ಲಿ ಒಟ್ಟು 64 ಸ್ಕಿಲ್ಸ್​ಗಳ ಪ್ರದರ್ಶನ ಮತ್ತು ಸ್ಪರ್ಧೆ ಇರುತ್ತದೆ. ಗಾರೆ ಕೆಲಸದ ಕೌಶಲ್ಯದಿಂದ ಹಿಡಿದು ಆ್ಯಪ್ ಡೆವಲಪ್ಮೆಂಟ್​ವರೆಗೂ ಬಹುತೇಕ ಎಲ್ಲಾ ಕ್ಷೇತ್ರಗಳ ಕೌಶಲ್ಯಗಳನ್ನು ಇದು ಒಳಗೊಂಡಿದೆ. ಈ ಕೌಶಲ್ಯಗಳ ಪಟ್ಟಿ ಈ ಕೆಳಕಂಡಂತಿದೆ:

  1. 3ಡಿ ಡಿಜಿಟಲ್ ಗೇಮ್
  2. ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್
  3. ಏರ್​ಕ್ರಾಫ್ಟ್ ಮೈಂಟೆನೆನ್ಸ್
  4. ಆಟೊಬಾಡಿ ರಿಪೇರ್
  5. ಆಟೊಮೊಬೈಲ್ ಟೆಕ್ನಾಲಜಿ
  6. ಆಟೊನಾಮಸ್ ಮೊಬೈಲ್ ರೋಬೋಟಿಕ್ಸ್
  7. ಬೇಕರಿ
  8. ಬ್ಯೂಟಿ ಥೆರಪಿ
  9. ಬ್ರಿಕ್ ಲೇಯಿಂಗ್
  10. ಕ್ಯಾಬಿನೆಟ್ ಮೇಕಿಂಗ್
  11. ಕಾರ್ ಪೇಂಟಿಂಗ್
  12. ಕಾರ್ಪೆಂಟರಿ
  13. ಕೆಮಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ
  14. ಕ್ಲೌಡ್ ಕಂಪ್ಯೂಟಿಂಗ್
  15. ಸಿಎನ್​ಸಿ ಮಿಲ್ಲಿಂಗ್
  16. ಸಿಎನ್​ಸಿ ಟರ್ನಿಂಗ್
  17. ಕಾಂಕ್ರೀಟ್ ಕಟ್ಟಡ ಕೆಲಸ
  18. ಅಡುಗೆ
  19. ಸೈಬರ್ ಸೆಕ್ಯೂರಿಟಿ
  20. ಡೆಂಟಲ್ ಪ್ರೋಸ್ತೆಟಿಕ್ಸ್
  21. ಡಿಜಿಟಲ್ ಕನ್ಸ್​ಟ್ರಕ್ಷನ್
  22. ಡಿಜಿಟಲ್ ಇಂಟರಾಕ್ಟಿವ್ ಮೀಡಿಯಾ ಡಿಸೈನ್
  23. ಎಲೆಕ್ಟ್ರಿಕಲ್ ಇನ್ಸ್ಟಲೇಶನ್ಸ್
  24. ಎಲೆಕ್ಟ್ರಾನಿಕ್ಸ್
  25. ಫ್ಯಾಶನ್ ಟೆಕ್ನಾಲಜಿ
  26. ಫ್ಲೋರಿಸ್ಟ್ರಿ
  27. ಗ್ರಾಫಿಕ್ ಡಿಸೈನ್ ಟೆಕ್ನಾಲಜಿ
  28. ಹೇರ್ ಡ್ರೆಸಿಂಗ್
  29. ಹೆಲ್ತ್ ಮತ್ತು ಸೋಷಿಯಲ್ ಕೇರ್
  30. ಹೆವಿ ವೆಹಿಕಲ್ ಟೆಕ್ನಾಲಜಿ
  31. ಹೋಟೆಲ್ ರಿಸೆಪ್ಷನ್
  32. ಐಸಿಟಿ ನೆಟ್ವರ್ಕ್ ಇನ್​ಫ್ರಾಸ್ಟ್ರಕ್ಚರ್
  33. ಇಂಡಸ್ಟ್ರಿಯಲ್ ಕಂಟ್ರೋಲ್
  34. ಇಂಡಸ್ಟ್ರಿಯಲ್ ಡಿಸೈನ್ ಟೆಕ್ನಾಲಜಿ
  35. ಇಂಡಸ್ಟ್ರಿಯಲ್ ಮೆಕಾನಿಕ್ಸ್
  36. ಇಂಡಸ್ಟ್ರಿ 4.0
  37. ಇಂಟೆಲಿಜೆಂಟ್ ಸೆಕ್ಯೂರಿಟಿ ಟೆಕ್ನಾಲಜಿ
  38. ಐಟಿ ನೆಟ್ವರ್ಕ್ ಸಿಸ್ಟಮ್ಸ್ ಅಡ್ಮಿನಿಸ್ಟ್ರೇಶನ್
  39. ಜ್ಯುವೆಲರಿ
  40. ಜಾಯ್ನರಿ
  41. ಲ್ಯಾಂಡ್​ಸ್ಕೇಪ್ ಗಾರ್ಡನಿಂಗ್
  42. ಲಾಜಿಸ್ಟಿಕ್ಸ್ ಮತ್ತು ಫ್ರೇಟ್ ಫಾರ್ವರ್ಡಿಂಗ್
  43. ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಿಎಡಿ
  44. ಮೆಕಾಟ್ರಾನಿಕ್ಸ್
  45. ಮೊಬೈಲ್ ಆ್ಯಪ್ ಡೆವಲಪ್ಮೆಂಟ್
  46. ಆಪ್ಟೋಎಲೆಕ್ಟ್ರಾನಿಕ್ ಟೆಕ್ನಾಲಜಿ
  47. ಪೇಂಟಿಂಗ್ ಮತ್ತು ಡೆಕೋರೇಟಿಂಗ್
  48. ಪ್ಯಾಟಿಸ್ಸೆರಿ ಮತ್ತು ಕನ್ಫೆಕ್ಷನರಿ (ಮಿಠಾಯಿಗಳು)
  49. ಪ್ಲಾಸ್ಟರಿಂಗ್ (ಕಟ್ಟಡ ನಿರ್ಮಾಣ)
  50. ಪ್ಲಂಬಿಂಗ್ ಮತ್ತು ಹೀಟಿಂಗ್
  51. ರೈಲ್ ವೆಹಿಕಲ್ ಟೆಕ್ನಾಲಜಿ
  52. ರೆಫ್ರಿಜರೇಶನ್ ಮತ್ತು ಎಸಿ
  53. ರಿನಿವಬಲ್ ಎನರ್ಜಿ
  54. ರೆಸ್ಟಾರೆಂಟ್ ಸರ್ವಿಸ್
  55. ರೀಟೇಲ್ ಮಾರಾಟ
  56. ರೋಬೋಟ್ ಸಿಸ್ಟಮ್ಸ್ ಇಂಟಿಗ್ರೇಶನ್
  57. ಸಾಫ್ಟ್​ವೇರ್ ಅಪ್ಲಿಕೇಶನ್ ಡೆವಲಪ್ಮೆಂಟ್
  58. ಸಾಫ್ಟ್​ವೇರ್ ಟೆಸ್ಟಿಂಗ್
  59. ಅನ್​ಮ್ಯಾನ್ಡ್ ಏರಿಯಲ್ ಸಿಸ್ಟಮ್ಸ್
  60. ವಿಶುವಲ್ ಮರ್ಕಾಂಡೈಸಿಂಗ್
  61. ಗೋಡೆ ಮತ್ತು ನೆಲಕ್ಕೆ ಟೈಲ್ ಹಾಸುವುದು
  62. ನೀರಿನ ತಂತ್ರಜ್ಞಾನ
  63. ವೆಬ್ ಟೆಕ್ನಾಲಜಿ
  64. ವೆಲ್ಡಿಂಗ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us