ದೆಹಲಿ: 6 ಸ್ನೇಹಿತರಿಂದ ಅಪ್ರಾಪ್ತ ಬಾಲಕನ ಕೊಲೆ

ಆರು ಮಂದಿ ಸ್ನೇಹಿತರು ಸೇರಿ ಅಪ್ರಾಪ್ತ ಬಾಲಕನ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಮೃತನನ್ನು 17 ವರ್ಷದ ವಿವೇಕ್ ಎಂದು ಗುರುತಿಸಲಾಗಿದೆ. ಸ್ನೇಹಿತರಲ್ಲಿ ಒಬ್ಬಾತ ಮದ್ಯಪಾನ ಮಾಡಲೆಂದು ಆತನನ್ನು ಆಹ್ವಾನಿಸಿದ್ದ ಬಳಿಕ ಆರು ಮಂದಿ ಸ್ನೇಹಿತರು ಸೇರಿ ಚಾಕು ಬಳಸಿ, ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ.

ದೆಹಲಿ: 6 ಸ್ನೇಹಿತರಿಂದ ಅಪ್ರಾಪ್ತ ಬಾಲಕನ ಕೊಲೆ
ಪೊಲೀಸ್

Updated on: Dec 16, 2023 | 3:39 PM

ಆರು ಮಂದಿ ಸ್ನೇಹಿತರು ಸೇರಿ ಅಪ್ರಾಪ್ತ ಬಾಲಕನ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಮೃತನನ್ನು 17 ವರ್ಷದ ವಿವೇಕ್ ಎಂದು ಗುರುತಿಸಲಾಗಿದೆ. ಸ್ನೇಹಿತರಲ್ಲಿ ಒಬ್ಬಾತ ಮದ್ಯಪಾನ ಮಾಡಲೆಂದು ಆತನನ್ನು ಆಹ್ವಾನಿಸಿದ್ದ ಬಳಿಕ ಆರು ಮಂದಿ ಸ್ನೇಹಿತರು ಸೇರಿ ಚಾಕುವಿನಿಂದ ತಿವಿದು, ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ.

ಸತ್ಪುಲಾ ಪಾರ್ಕ್​ಗೆ ಕರೆದೊಯ್ದು ಹತ್ಯೆ ಮಾಡಲಾಗಿದೆ. ಐವರು ಆರೋಪಿಗಳು ಉದ್ಯಾನದಲ್ಲಿ ಕಾದು ಕುಳಿತಿದ್ದು, ವಿವೇಕ್ ಒಳಗೆ ಬಂದ ತಕ್ಷಣ  ಚಾಕು ಮತ್ತು ಇಟ್ಟಿಗೆಗಳಿಂದ ಹಲ್ಲೆ ನಡೆಸಿದ್ದಾರೆ.

ದೇಹದ ಮುಖ, ಕುತ್ತಿಗೆ, ಎದೆ ಮತ್ತು ಹೊಟ್ಟೆಯ ಮೇಲೆ ಚಾಕು ಗಾಯಗಳಿವೆ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಚಂದನ್ ಚೌಧರಿ ಹೇಳಿದ್ದಾರೆ.
ಶುಕ್ರವಾರ ಬೆಳಗ್ಗೆ 7.30ರ ಸುಮಾರಿಗೆ ಸತ್ಪುಲಾ ಪಾರ್ಕ್‌ನಲ್ಲಿ ಪತ್ತೆಯಾದ ಮೃತದೇಹದ ಕುರಿತು ಪಿಸಿಆರ್ ಕರೆ ಬಂದಿತ್ತು. ಖಿರ್ಕಿ ಗ್ರಾಮದ ಬಳಿ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಹೊಟ್ಟೆ, ಎದೆ, ಕುತ್ತಿಗೆ ಮತ್ತು ಮುಖದ ಮೇಲೆ ಗಾಯದ ಗುರುತುಗಳನ್ನು ಹೊತ್ತಿರುವುದು ಕಂಡುಬಂದಿದೆ.

ಮತ್ತಷ್ಟು ಓದಿ: ಮಹಾರಾಷ್ಟ್ರ: ಜಗಳ ಅತಿರೇಕಕ್ಕೇರಿ ಗೆಳತಿ ಕಾಲಿನ ಮೇಲೆ ಕಾರು ಹತ್ತಿಸಿದ ಪ್ರಿಯಕರ

ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವಿವೇಕ್​ ವಿರುದ್ಧ ಹಗೆ ಸಾಧಿಸಲು ಈ ಸಂಚು ರೂಪಿಸಿದ್ದರು. ಬಾಲಕ ಮನೆಯಿಂದ ಹೊರಹೋಗುವಾಗ ತಂದೆಯನ್ನು ಭೇಟಿಯಾಗಲು ಹೋಗುವುದಾಗಿ ಸುಳ್ಳು ಹೇಳಿದ್ದ, ಹಿಂದಿರುಗದಿದ್ದಾಗ ಹಲವು ಬಾರಿ ಕರೆ ಮಾಡಿದ್ದಾರೆ ಆದರೆ ಮೊಬೈಲ್ ಸ್ವಿಚ್ಡ್​ ಆಫ್ ಆಗಿತ್ತು ಎಂದು ಪೋಷಕರು ತಿಳಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  

 

Published On - 3:34 pm, Sat, 16 December 23

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us