ಹಾಸನ: ಆಸ್ತಿ, ಜಮೀನು ವಿಚಾರಗಳು ವ್ಯಕ್ತಿಯನ್ನ ಎಂತಹ ತಪ್ಪುಗಳನ್ನು ಬೇಕಾದರೂ ಮಾಡಲು ಪ್ರೇರೇಪಿಸುತ್ತವೆ. ಅದೇ ರೀತಿ ತಪ್ಪು ಮಾಡಿ ಶಿಕ್ಷೆ ಅನುಭವಿಸಿದವರು ಬಹಳ ಮಂದಿ. ಜಮೀನು ವಿಚಾರಕ್ಕೆ ವ್ಯಕ್ತಿ ಮೇಲೆ ಹಲ್ಲೆ ನಡೆಸಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಮದನೆ ಗ್ರಾಮದ ತೆಂಗಿನ ತೋಟದಲ್ಲಿ ನಡೆದಿದೆ.
ಜಮೀನು ವಿಚಾರವಾಗಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುನಿಲ್ ಕುಮಾರ್ ಮೇಲೆ ಗ್ರಾಮದ ಧನಂಜಯ್, ಸತೀಶ್, ಜವರೇಗೌಡ, ಕುಮಾರ್, ನಟೇಶ್ ಎಂಬುವವರು ಸೇರಿ ಹಲ್ಲೆ ಮಾಡಿದ್ದಾರೆ. ಈ ಐವರು ದೊಣ್ಣೆ, ಬಡಿಗೆಗಳನ್ನು ಹಿಡಿದು ಸುನಿಲ್ ಕುಮಾರ್ ತಪ್ಪಿಸಿಕೊಂಡು ಓಡಲೆತ್ನಿಸಿದರೂ ಹಿಂಬಾಲಿಸಿ, ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Published On - 8:22 am, Mon, 1 June 20