ದೇವರನಾಡು ಕೇರಳಕ್ಕೂ ಚಿನ್ನಕ್ಕೂ ವಿಶೇಷ ನಂಟು ಇದೆ! ಹಾಗಂತ ಕೇರಳ ಜನ ಸಿಕ್ಕಾಪಟ್ಟೆ ಚಿನ್ನ ಇಷ್ಟಪಡ್ತಾರೆ. ಬಳಕೆ ಮಾಡ್ತಾರೆ ಅಂತಲ್ಲ. ಹೆಚ್ಚಾಗಿ ಕೊಲ್ಲಿ ರಾಷ್ಟ್ರಗಳ ಸಂಪರ್ಕದಲ್ಲಿ ನಡೆಯುವ ಗೋಲ್ಡ್ ಸ್ಮಗ್ಲಿಂಗ್ ದಂಧೆಯೇ ಇಲ್ಲಿನ ಚಿನ್ನ ವ್ಯಾಪಾರದ ಜೀವಾಳ. ಆದ್ರೆ ಅದೀಗ ಕುಕ್ಕರ್ನಲ್ಲೂ ಪತ್ತೆಯಾಗಿದೆ ಎಂಬುದೇ ಸದ್ಯದ ಕುತೂಹಲ!!!
ಹೌದು, ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಿಕನೊಬ್ಬ ವಿಮಾನ ನಿಲ್ದಾಣ ಗುಪ್ತದಳ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಅವರಿಂದ 700 ಗ್ರಾಂ ತೂಕದಷ್ಟು ಕರಗಿರುವ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನವನ್ನು ಎಲ್ಲೆಲ್ಲೋ ಇಟ್ಕೊಂಡು ಕಳ್ಳ ಸಾಗಾಣೆ ಮಾಡುವುದು ಮಾಮೂಲು. ಆದ್ರೆ ಈ ಬಾರಿ ಹೊಚ್ಚಹೊಸ ಆಡುಗೆ ಕುಕ್ಕರ್ ನಲ್ಲಿಟ್ಟುಕೊಂಡು ಕಳ್ಳಸಾಗಣೆ ಮಾಡಲಾಗಿದೆ. ಆರೋಪಿ ಪ್ರಯಾಣಿಕ ಜೆಡ್ಡಾದಿಂದ ಕ್ಯಾಲಿಕಟ್ಗೆ ವಿಮಾನದಲ್ಲಿ ಬಂದಿದ್ದ.
Kerala: Officials of Air Intelligence Unit at Calicut International Airport have seized 700 gms gold from a passenger from Jeddah. The gold was concealed inside a pressure cooker pic.twitter.com/k7a3cKnsPe
— ANI (@ANI) September 5, 2020