Video Viral: ಕೈಯಲ್ಲಿ ಮಚ್ಚು ಹಿಡಿದು ಯುವತಿಯನ್ನು ಅಟ್ಟಿಸಿಕೊಂಡು ಹೋಗಿ ಹಲ್ಲೆ ಮಾಡಿದ ವ್ಯಕ್ತಿ

|

Updated on: Jun 27, 2023 | 8:34 PM

ಮಚ್ಚು ಹಿಡಿದುಕೊಂಡು ಯುವತಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯ ಬೀದಿಯಲ್ಲಿ ನಡೆದಿದೆ. ಇದೀಗ ಈ ಬಗ್ಗೆ ಒಂದು ವೀಡಿಯೊ ವೈರಲ್​​ ಆಗಿದೆ.

Video Viral: ಕೈಯಲ್ಲಿ ಮಚ್ಚು ಹಿಡಿದು ಯುವತಿಯನ್ನು ಅಟ್ಟಿಸಿಕೊಂಡು ಹೋಗಿ ಹಲ್ಲೆ ಮಾಡಿದ ವ್ಯಕ್ತಿ
ವೈರಲ್​​ ವಿಡಿಯೋ
Follow us on

ಪುಣೆ: ಮಚ್ಚು ಹಿಡಿದುಕೊಂಡು ಯುವತಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇದೀಗ ಈ ಬಗ್ಗೆ ಒಂದು ವೀಡಿಯೊ ವೈರಲ್​​ ಆಗಿದೆ. ಈ ಘಟನೆಯನ್ನು ನೋಡಿದ ಸ್ಥಳೀಯರು ಹಲ್ಲೆ ಮಾಡಿದ ವ್ಯಕ್ತಿಯನ್ನು ತಡೆಯಲು ಮುಂದಾಗಿದ್ದಾರೆ, ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಸದಾಶಿವ ಪೇಠ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ವ್ಯಕ್ತಿಯನ್ನು ಶಾಂತನು ಲಕ್ಷ್ಮಣ್ ಜಾಧವ್ ಎಂದು ಗುರುತಿಸಲಾಗಿದೆ. 20 ವರ್ಷದ ಪ್ರೀತಿ ರಾಮಚಂದ್ರ ಎಂಬಾಕೆಗೆ ಹಲ್ಲೆ ಮಾಡಿದ್ದಾನೆ. ಯುವತಿಗೆ ಅಡ್ಡಗಟ್ಟಿದಾಗ ಆಕೆ ಸ್ಕೂಟರ್ ನಿಲ್ಲಿಸಿದ್ದಾಳೆ. ಆತನ ನೋಡು ನೋಡುತ್ತಿದ್ದಂತೆ ಆತ ಮಚ್ಚನ್ನು ತೆಗೆದು ಆಕೆಯ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ್ದಾನೆ.

ಈ ಸಮಯದಲ್ಲಿ, ಯುವತಿ ಸ್ಕೂಟರ್​ ಬಿಟ್ಟು, ಸಲ್ವಾರ್ ಮತ್ತು ಬೆನ್ನಿನ ಮೇಲೆ ಬ್ಯಾಗ್​​ ಹಾಕಿಕೊಂಡು ಬೀದಿಯಲ್ಲಿ ಓಡಲು ಶುರು ಮಾಡಿದ್ದಾಳೆ. ಆತ ಆಕೆಯನ್ನು ರಸ್ತೆಯುದ್ದಕ್ಕೂ ಓಡಿಸಿಕೊಂಡು ಹೋಗಿದ್ದಾನೆ. ಈ ಬಗ್ಗೆ ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿದೆ. ಆಕೆಯ ಬೆನ್ನಿಗೆ ಮಚ್ಚಿನಿಂದ ಹೊಡೆಯುವುದನ್ನು ಈ ದೃಶ್ಯದಲ್ಲಿ ನೋಡಬಹುದು. ಸ್ವಲ್ಪ ದೂರು ಸಾಗಿದ ಯುವತಿ ರಸ್ತೆ ಮಧ್ಯ ಬಿದ್ದಿದ್ದಾಳೆ, ಈ ಸಮಯದಲ್ಲಿ ಆಕೆಯ ಮೇಲೆ  ಮಚ್ಚಿನಿಂದ  ದಾಳಿ ಮಾಡಿದ್ದಾನೆ..

ಇದನ್ನೂ ಓದಿ: Crime News: 70ರ ವೃದ್ಧನಿಗೆ ಬಂದೂಕು ತೋರಿಸಿ, 1 ಲಕ್ಷ ರೂ, ಹಣವನ್ನು ಕಸಿದುಕೊಂಡು ಪರಾರಿಯಾದ ದರೋಡೆಕೋರರು

ಸ್ಥಳೀಯರು ಆಕೆಯನ್ನು ಕಾಪಾಡಿ, ಆತನ ಕೈಯಿಂದ ಮಚ್ಚನ್ನು ಕಿತ್ತುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ಬಂಧಿಸಿ ಕೊಲೆ ಯತ್ನದಡಿ (ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307) ಆರೋಪ ಹೊರಿಸಲಾಗಿದೆ ಎಂದು ಪುಣೆಯ ಉಪ ಪೊಲೀಸ್ ಆಯುಕ್ತ ಸಂದೀಪ್ ಸಿಂಗ್ ಗಿಲ್ ತಿಳಿಸಿದ್ದಾರೆ. ಈ ಬಗ್ಗೆ NCP ಪಕ್ಷದ ಸಂಸದೆ ಸುಪ್ರಿಯಾ ಸುಳೆ ಅವರು ಈ ಬಗ್ಗೆ ಒಂದು ಟ್ವಿಟ್​​ ಕೂಡ ಹಂಚಿಕೊಂಡಿದ್ದಾರೆ.

ಆತ ಈ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಎಂದು ಆಕೆಯ ತಾಯಿ ತಿಳಿಸಿದ್ದಾರೆ. ನಾವು ಆತನ ತಂದೆಗೆ ದೂರು ನೀಡಿದ್ದೇವೆ, ಅದರೂ ಅವನು ಇಂದು ನಮ್ಮ ಮಗಳನ್ನು ಕೊಲ್ಲಲು ಪ್ರಯತ್ನಿಸಿದನು ಎಂದು ಹೇಳಿದ್ದಾರೆ.

Published On - 7:37 pm, Tue, 27 June 23