ಬೆಂಗಳೂರು: ಬಾಣಸವಾಡಿ ಪೊಲೀಸರು (Police) ರಸ್ತೆಯಲ್ಲಿ ರಕ್ತದ ಮಡುವಿಲ್ಲಿ ಬಿದ್ದಿದ್ದ ಮಹಿಳೆಯ (Woman) ಪ್ರಾಣ ಉಳಿಸಿದ್ದಾರೆ. ನಿಖಿತಾ (28) ಗಾಯಗೊಳಗಾದ ಮಹಿಳೆ. ತ್ರೀವ್ರ ರಕ್ತ ಸ್ರಾವವಾಗಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಮಹಿಳೆಯನ್ನು ಬಾಣಸವಾಡಿ ಪೊಲೀಸರು (Banasavadi Police) ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ನಂತರ ನಾಲ್ಕು ಬಾಟಲಿ ರಕ್ತ ವ್ಯವಸ್ಥೆ ಮಾಡಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ನಿಖಿತಾರನ್ನು ಮಹಿಳಾ ಪೊಲೀಸ್ ಸಿಬ್ಬಂದಿಗಳೇ ಆರೈಕೆ ಮಾಡುತ್ತಿದ್ದಾರೆ.
ನಿಖಿತಾ (28) ದಿವಾಕರ್ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಪ್ರೀತಿಸಿ ಮದುವೆಯಾದ ಕಾರಣ ನಿಖಿತಾ ಪೋಷಕರಿಂದ ದೂರವಾಗಿದ್ದಳು. ದಂಪತಿ ಜೂನ್ 21 ರಂದು ಬೆಳಗಿನ ಜಾವ ಬೈಕ್ನಲ್ಲಿ ಹೋಗುತ್ತಿದ್ದರು. ಈ ವೇಳೆ ದಿವಾಕರ್ ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಪತ್ನಿ ನಿಖಿತಾಳನ್ನು ಕೆಳಗೆ ಬೀಳಿಸಿ ಐದು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಇದನ್ನೂ ಓದಿ: 11 ತಿಂಗಳ ಕಂದಮ್ಮನನ್ನು ರೇಪ್ ಮಾಡಿದ 12 ವರ್ಷದ ಅಪ್ರಾಪ್ತ ಬಾಲಕ
ಈ ಹಿನ್ನೆಲೆ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ನಿಖಿತಾಳನ್ನು ಬಾಣಸವಾಡಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಿದ್ದಾರೆ. ಇನ್ನು ಕೌಟುಂಬಿಕ ಕಲಹ ಹಿನ್ನಲೆ ಪತಿ ದಿವಾಕರ್ ಚಾಕುವಿನಿಂದ ಇರಿದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಬಾಣಸವಾಡಿ ಪೊಲೀಸರಿಂದ ಆರೋಪಿ ದಿವಾಕರ್ನನ್ನು ಬಂಧಸಿದ್ದಾರೆ. ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ತುಮಕೂರು: ತೋಟದ ಒಂಟಿ ಮನೆಯಲ್ಲಿದ್ದ ವಸ್ತುಗಳನ್ನು ಕದ್ದು, ಕಳ್ಳರು ದಂಪತಿ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ತುರುವೇಕೆರೆ ತಾಲೂಕಿನ ಬಾಣಸಂದ್ರ ಬಳಿಯ ಕಳ್ಳನಗಿಡ ಪ್ರದೇಶದಲ್ಲಿ ನಡೆದಿದೆ. ಕೃಷ್ಣೇಗೌಡ ಎಂಬುವರ ಮನೆ ಮೇಲೆ 9ಕ್ಕೂ ಹೆಚ್ಚು ಕಳ್ಳರ ಗ್ಯಾಂಗ್ ದಾಳಿ ಮಾಡಿದೆ. ಈ ವೇಳೆ ಕೃಷ್ಣೇಗೌಡ ಪತ್ನಿ ಇಂದ್ರಮ್ಮರ ಬಾಯಿಗೆ ಬಟ್ಟೆ ತುರುಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.
ಇಂದ್ರಮ್ಮ ಕೊರಳಲ್ಲಿದ್ದ ಮಾಂಗಲ್ಯ ಸರ, ಓಲೆ ಹಾಗೂ ಮನೆಯಲ್ಲಿದ್ದ 20,000 ನಗದನ್ನು ದೋಚಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾಗಿರೊ ದಂಪತಿ ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ